»   » ಪುನೀತ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್

ಪುನೀತ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್

Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಕ್ಷನ್, ಕಟ್ ಹೇಳಲಿದ್ದಾರೆ. ಹೌದಾ ಎಂದು ಹುಬ್ಬೇರಿಸುವ ಮುನ್ನ ಮುಂದೆ ಓದಿ. ಅವರು ನಿರ್ದೇಶನ ಮಾಡಲಿರುವುದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರಕ್ಕೆ ಎಂಬುದು ಮತ್ತೊಂದು ವಿಶೇಷ. ಅಣ್ಣನಿಗೆ ತಮ್ಮ ನಿರ್ದೇಶನ ಮಾಡುತ್ತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಬೆಳವಣಿಗೆ ಎನ್ನಬಹುದು.

ಮೂಲಗಳ ಪ್ರಕಾರ ಪುನೀತ್ ನಿರ್ದೇಶಿಸಲಿರುವ ಚಿತ್ರ ಮುಂಬರುವ ಮೇ ತಿಂಗಳಲ್ಲಿ ಸೆಟ್ಟೇರಲಿದೆಯಂತೆ. ಈ ಚಿತ್ರ ಶಿವಣ್ಣನ ನೂರನೇ ಚಿತ್ರವಾಗಲಿದೆ ಎನ್ನುತ್ತವೆ ಮೂಲಗಳು. ಶಿವಣ್ಣನ ನೂರನೇ ಚಿತ್ರ 'ಜೋಗಯ್ಯ'ನನ್ನು ತಾವೇ ನಿರ್ದೇಶಿಸುವುದು ಎಂದು ಪ್ರೇಮ್ ಈಗಾಗಲೇ ಹೇಳಿಕೊಂಡಿದ್ದಾರೆ. ಹಾಗಾಗಿ ಅಧಿಕೃತವಾಗಿ ಪ್ರಕಟವಾಗುವವರೆಗೂ ಕಾಯಬೇಕಾಗುತ್ತದೆ.

ಪುನೀತ್ ಚಿತ್ರ ನಿರ್ದೇಶಿಸುತ್ತಾರೆ ಎಂದರೆ ಕೇವಲ ಅವರ ಅಭಿಮಾನಿಗಳಿಗಷ್ಟೇ ಅಲ್ಲ ಇಡೀ ಚಿತ್ರೋದ್ಯಮಕ್ಕೂ ಆಶ್ಚರ್ಯಕರ ವಿಷಯ. ಈ ಹಿಂದೆ ಬಹಳಷ್ಟು ಸಲ ಪುನೀತ್ ಚಿತ್ರ ನಿರ್ದೇಶಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಈ ಸುದ್ದಿಯನ್ನು ಅಲ್ಲಗಳೆಯುವಂತೆಯೂ ಇಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada