»   » ರಾಘಣ್ಣನನ್ನು ಅಂತರ್ಜಾಲಕ್ಕೆ ಕರೆತಂದ ರಮ್ಯಾ

ರಾಘಣ್ಣನನ್ನು ಅಂತರ್ಜಾಲಕ್ಕೆ ಕರೆತಂದ ರಮ್ಯಾ

Posted By:
Subscribe to Filmibeat Kannada

ರಾಜ್ ಕುಟುಂಬದ ಕುಡಿ ರಾಘವೇಂದ್ರ ರಾಜ್ ಕುಮಾರ್ ಜನಪ್ರಿಯ ಸೋಷಿಯಲ್ ನೆಟ್ ವರ್ಕಿಂಗ್ ತಾಣವೊಂದರಲ್ಲಿ ಜನಪ್ರಿಯರಾಗಿದ್ದಾರೆ. ಅವರನ್ನು ಅಂತರ್ಜಾಲ ಲೋಕಕ್ಕೆ ಕರೆತಂದ ಕೀರ್ತಿ ಲಕ್ಕಿ ಸ್ಟಾರ್ ರಮ್ಯಾ ಅವರಿಗೆ ಸಲ್ಲುತ್ತದೆ. ಟ್ವಿಟ್ಟರ್ ನಲ್ಲಿ ರಮ್ಯಾ ಈಗಾಗಲೆ ತಮ್ಮ ಅಭಿಮಾನಿಗಳಿಗೆ ಮತ್ತಷ್ಟುಸನಿಹವಾಗಿರುವುದು ಗೊತ್ತೇ ಇದೆ.

ಸೋಷಿಯಲ್ ನೆಟ್ ವರ್ಕಿಂಗ್ ನಲ್ಲಿ ಖಾತೆಯನ್ನು ಕೆಲ ತಿಂಗಳ ಹಿಂದೆ ತೆರೆದಿದ್ದೆ. ಬಳಿಕ ಆ ಕಡೆಗೆ ತಿರುಗಿ ನೋಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ನಾನು ನೆಟ್ ಸೇವಿಯಲ್ಲ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ಆದರೆ ಯಾವ ಸಾಮಾಜಿಕ ಸಂಪರ್ಕ ತಾಣ ಎಂಬುದನ್ನು ರಾಘವೇಂದ್ರ ರಾಜ್ ಕುಮಾರ್ ತಿಳಿಸದೆ ಕುತೂಹ ಮೂಡಿಸಿದ್ದಾರೆ.

ರಾಘಣ್ಣ ಈಗಾಗಲೆ ಫೇಸ್ ಬುಕ್ ನಲ್ಲಿ ಖಾತೆ ತೆರೆದಿದ್ದು ತಮ್ಮ ಅಭಿಮಾನಿ ಬಳಗಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ನಿಮ್ಮ ಅಭಿಮಾನಿಗಳ ಬಗ್ಗೆ ನೀವು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಹುದು. ಹೊಸಬರನ್ನು ಭೇಟಿಯಾಗಬಹುದು ಎಂದು ನಟಿ ರಮ್ಯಾ ಸಲಹೆ ನೀಡಿದರು. ಹಾಗಾಗಿ ನಾನು ಖಾತೆ ತೆರೆದೆ ಎನ್ನುತ್ತಾರೆ ರಾಘಣ್ಣ.

ವಿಶೇಷವಾಗಿ ವಿದೇಶಗಳಲ್ಲಿನ ಅಭಿಮಾನಿಗಳು ನನಗೆ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಇವರೆಲ್ಲಾ ಅಪ್ಪಾಜಿ ಅವರ ಅಭಿಮಾನಿ ದೇವರುಗಳು ಎಂಬುದು ಇನ್ನೊಂದು ವಿಶೇಷ. ಅಪ್ಪಾಜಿ ಅವರನ್ನು ಭೇಟಿಯಾಗಲು ಸಾಧ್ಯವಾಗದವರು ತುಂಬ ಭಾವುಕರಾಗಿ ಮಾತನಾಡುತ್ತಾರೆ ಎಂದು ರಾಘಣ್ಣ ಹೇಳಿಕೊಂಡಿದ್ದಾರೆ.

ಅಪ್ಪಾಜಿ ಮತ್ತು ಅಮ್ಮನ (ಪಾರ್ವತಮ್ಮ) ಅಪರೂಪದ ಚಿತ್ರಗಳನ್ನು ಅಲ್ಲಿ ಹಾಕಿದ್ದೇನೆ. ಇದನ್ನು ಕಂಡ ಅಭಿಮಾನಿಯೊಬ್ಬರು ಅಪ್ಪಾಜಿ ಬರೆದಿದ್ದ ಪತ್ರವನ್ನು ರವಾನಿಸಿದ್ದಾರೆ. ಸಾಮಾಜಿಕ ಸಂಪರ್ಕ ತಾಣ ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿದ್ದು ಖಾತೆ ತೆರೆದ ಬಳಿಕವಷ್ಟೆ ಎಂದು ರಾಘಣ್ಣ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada