»   » ಸನಿಹದಲೇ ತೆರೆಗೆ ರಮೇಶ್ 'ಕ್ರೇಜಿ ಕುಟುಂಬ'

ಸನಿಹದಲೇ ತೆರೆಗೆ ರಮೇಶ್ 'ಕ್ರೇಜಿ ಕುಟುಂಬ'

Subscribe to Filmibeat Kannada

ಲವ್‌ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಲೀನಾಜೋಶಿ ನಿರ್ಮಿಸಿರುವ 'ಕ್ರೇಜಿ ಕುಟುಂಬ" ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದೆ. ಈ ಚಿತ್ರ ಮಾಸಾಂತ್ಯಕ್ಕೆ ತೆರೆಗೆ ಬರಲಿದೆ. ಪರಿಶುದ್ಧ ಹಾಸ್ಯ ಕಥಾನಕದ ನಾಯಕ ರಮೇಶ್. ಹಿರಿಯ ನಟ ಅನಂತನಾಗ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ಮುಂತಾದ ಅನುಭವಿ ಕಲಾವಿದರ ಅಭಿನಯ ಈ ಚಿತ್ರದಲ್ಲಿದೆ.

ಹೊಸವರ್ಷದ ಆರಂಭದ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ನೋಡುಗರಿಗೆ ನಗೆ ಹಬ್ಬ ಎನ್ನುತ್ತಾರೆ ನಿರ್ದೇಶಕ ಬಿ.ರಾಮಮೂರ್ತಿ. 'ಕ್ರೇಜಿ ಕುಟುಂಬ'ಕ್ಕೆ ಮರಾಠಿ ಮೂಲದ 'ದೇ ದಕ್ಕ' ಚಿತ್ರ ಸ್ಫೂರ್ತಿ. ರಿಕ್ಕಿಕೇಜ್ ಸಂಗೀತ, ಮಲ್ಲಿಕಾರ್ಜುನ್ ಛಾಯಾಗ್ರಹಣ, ನರಹಳ್ಳಿ ಜ್ಞಾನೇಶ್ ಸಂಕಲನ, ಮುರಳಿ, ರಾಮು ನೃತ್ಯ,ಶ್ರೀನಿವಾಸ್ ಕಲೆ ಇದೆ.

ಪ್ರಸಾದ್ ಸಹ ನಿರ್ದೇಶನ ಹಾಗೂ ಗಂಡಸಿರಾಜು ನಿರ್ಮಾಣ ನಿರ್ವಹಣೆಯಿದೆ. 'ಕ್ರೇಜಿ ಕುಟುಂಬ"ದ ತಾರಾಬಳಗದಲ್ಲಿ ರಮೇಶ್, ಅನಂತನಾಗ್, ಸನಾ, ಎಂ.ಎಸ್.ಉಮೇಶ್, ರಜನಿಕಾಂತ್, ವಿನಯ್‌ರಾಂಪ್ರಸಾದ್, ಸೋಮಶೇಖರ್, ಚಿಕ್ಕಮಗಳೂರು ಮಧು, ಬೇಬಿ ನಿತ್ಯಶ್ರೀ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada