»   » ನಗರದಲ್ಲಿ ಬಿಗ್ ಸಿನಿಮಾ ಟಾಕೀಸ್ ಆರಂಭ

ನಗರದಲ್ಲಿ ಬಿಗ್ ಸಿನಿಮಾ ಟಾಕೀಸ್ ಆರಂಭ

Posted By:
Subscribe to Filmibeat Kannada

ದೇಶದ ಪ್ರತಿಷ್ಠಿತ ಸಂಸ್ಥೆಯಾದ ರಿಲಯನ್ಸ್ ಅನಿಲ್ ಧೀರೂಭಾಯಿ ಸಮೂಹ ಬೆಂಗಳೂರಿನಲ್ಲಿ ನೂತನ ಬಿಗ್ ಸಿನಿಮಾ ಚಿತ್ರಮಂದಿರವನ್ನು ಗೋಪಾಲನ್ ಆರ್ಚ್ ಮಳಿಗೆಯಲ್ಲಿ ಪ್ರಾರಂಭಿಸಿದೆ. ರಿಲಯನ್ಸ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಸಂಸ್ಥೆಯು ತಮ್ಮ ಗ್ರಾಹಕರಿಗೆ ಐಷಾರಾಮಿಯ ಸೌಲಭ್ಯ ಹಾಗೂ ಉತ್ತಮ ಮನರಂಜನೆ ನೀಡುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಗ್ ಸಿನಿಮಾಸ್ ಚಿತ್ರಮಂದಿರ ಪ್ರಾರಂಭಿಸಿದೆ.

ಸೌಲಭ್ಯ: ಬಿಗ್ ಸಿನಿಮಾಸ್ ಚಿತ್ರಮಂದಿರದಲ್ಲಿ ಏಕಕಾಲಕ್ಕೆ 1,019 ಮಂದಿ ಚಿತ್ರ ವೀಕ್ಷಿಸುವ ಸಾಮರ್ಥ್ಯ ಹೊಂದಿದೆ. 3 ಶ್ರೇಣಿಯ ಸ್ಕ್ರೀನಿಂಗ್ ರೂಂ, ಅತ್ಯಾಧುನಿಕ ಸ್ಕ್ರೀನಿಂಗ್ ಸೌಲಭ್ಯ ಸೇರಿದಂತೆ ಹಲವಾರು ವಿಶಿಷ್ಟ ಸೌಲಭ್ಯಗಳ ಮೂಲಕ ಪ್ರೇಕ್ಷಕರಿಗೆ ಉತ್ತಮ ಸೇವೆಯನ್ನು ಹಾಗೂ ವ್ಯವಸ್ಥೆಯನ್ನು ಒದಗಿಸಲಿದೆ. ಜೊತೆಗೆ ಪುಷ್ ಬ್ಯಾಕ್ ಸೋಫಾಗಳು, ದುಪ್ಪಟ್ಟು ಸಾಮರ್ಥ್ಯದ ಡಾಲ್ಬಿ ಸೌಂಡ್ ವ್ಯವಸ್ಥೆ ಇವೆಲ್ಲ ಗ್ರಾಹಕನಿಗೆ ಐಷಾರಾಮಿ ಸೇವೆಯನ್ನು ಒದಗಿಸಲಿದೆ.

ಗ್ರಾಹಕರಿಗೆ ಸಿನಿಮಾದ ಜೊತೆಗೆ ಮನೆಯ ವಾತಾವರಣ ನಿರ್ಮಿಸಲು ಅವರು ಇರುವ ಸ್ಥಳದಲ್ಲಿಯೇ ಆಹಾರ ಮತ್ತು ಪಾನೀಯ ಸೇರಿದಂತೆ ಅನೇಕ ಸೇವೆಗಳು ದೊರೆಯಲಿದೆ. ಗುರುವಾರ ಸಂಸ್ಥೆಯ ಬ್ರ್ಯಾಂಡ್ ಎಕ್ಸ್‌ಪಿರಿಯೆನ್ಸ್ ಮತ್ತು ಡಿಸೈನ್ ಮುಖ್ಯಸ್ಥೆ ಅರ್ಚನಾ ಜಾಗಿಣಿ ಮಾತನಾಡಿ, ಬೆಂಗಳೂರು ಜನತೆ ವಿಶೇಷ ಅನುಭವ ನೀಡುವ ಸಲುವಾಗಿ ಇಂತಹ ಅತ್ಯಾಧುನಿಕ ವ್ಯವಸ್ಥೆಯುಳ್ಳ ಚಿತ್ರಮಂದಿರವನ್ನು ಪರಿಚಯಿಸಲಾಗುತ್ತಿದೆ. ಗೋಪಾಲನ್ ಆರ್ಚ್ ಮಳಿಗೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಚಿತ್ರಮಂದಿರ, ಈಗಾಗಲೇ ಸಾಕಷ್ಟು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಗ್ ಸಿನಿಮಾದ ಮೂಲಕ ಮಲ್ಪಿಪ್ಲೆಕ್ಸ್ ಅನುಭವವನ್ನು ಪುನಃ ಆವಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಸ್ಪರ್ಧೆ:ಜಸ್ಟ್ ಮಾತ್ ಮಾತಲ್ಲಿ ಸಿಡಿ ಗೆಲ್ಲುವ ಅವಕಾಶ

ಆರಂಭದಿಂದಲೂ ಬೆಂಗಳೂರು ಮತ್ತು ವಿಶ್ವದಲ್ಲೆಡೆ ನಮ್ಮ ಗ್ರಾಹಕರಿಗೆ ವಿಶ್ವದರ್ಜೆ ಸೇವೆ ಒದಗಿಸುತ್ತೇವೆ, ದಕ್ಷಿಣ ಭಾಗಗಳಲ್ಲಿ ಸಂಸ್ಥೆಯ ಸಾಮರ್ಥ್ಯ ಹೆಚ್ಚಿಸುವ ದೃಷ್ಟಿಯಿಂದ ಬೆಂಗಳೂರು 3, ಹೈದರಾಬಾದ್ ಮತ್ತು ಕೊಯಮತ್ತೂರು ಸೇರಿದಂತೆ ದಕ್ಷಿಣ ಭಾಗದಲ್ಲಿ 22 ಚಿತ್ರ ಮಂದಿರ ಆರಂಭಿಸುವ ಗುರಿಯಿದೆ. ಅಲ್ಲದೆ 2010 ಅಂತ್ಯದೊಳಗೆ 14 ಚಿತ್ರಮಂದಿರ ನಿರ್ಮಿಸುವ ಗುರಿ ಹೊಂದಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ದೇಶದ 115 ನಗರಗಳಲ್ಲಿ 500 ಚಿತ್ರಮಂದಿರಗಳನ್ನು ಹೊಂದಿದ್ದು, ಅಮೆರಿಕಾ, ಮಲೇಷ್ಯಾ ಮತ್ತು ನೆದರ್‌ಲ್ಯಾಂಡ್ ಸೇರಿದಂತೆ ವಿಶ್ವದೆಲ್ಲೆಡೆ 35 ದಶಲಕ್ಷ ಗ್ರಾಹಕರನ್ನು ಹೊಂದಿದ್ದೇವೆ ಎಂದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada