»   »  ಪ್ರೇಮದ ಪಯಣ ಹೊರಡಲು ಸವಾರಿ ಸಿದ್ಧ

ಪ್ರೇಮದ ಪಯಣ ಹೊರಡಲು ಸವಾರಿ ಸಿದ್ಧ

Subscribe to Filmibeat Kannada
ತೆಲುಗಿನ 'ಗಮ್ಯಂ' ಚಿತ್ರ ಕನ್ನಡಕ್ಕೆ 'ಸವಾರಿ'ಯಾಗಿ ಬರುತ್ತಿರುವುದು ಗೊತ್ತೆ ಇದೆ. ಈ ಚಿತ್ರವನ್ನು ಉಷಾ ಕಿರಣ್ ಮೂವೀಸ್ ನ ರಾಮೋಜಿ ರಾವ್ ನಿರ್ಮಿಸುತ್ತಿದ್ದಾರೆ.ವಿವಿಧ ಭಾಷೆಗಳಲ್ಲಿ ಅವರು ಇದುವರೆಗೂ 82 ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡದಲ್ಲಿ ರಾಮೋಜಿ ರಾವ್ ನಿರ್ಮಿಸುತ್ತಿರುವ 10ನೆಯ ಚಿತ್ರ 'ಸವಾರಿ'.

ಜೀವನ ಎಂದರೆ ಏನು ಎಂದು ತಿಳಿದುಕೊಳ್ಳಲು ಶ್ರೀಮಂತರ ಮನೆತನದ ಹುಡುಗನೊಬ್ಬ ಮಾಡುವ ಸಾಹಸವೇ ಸವಾರಿ. 'ಪ್ಯಾರಿಸ್ ಪ್ರಣಯ' ಚಿತ್ರದಲ್ಲಿ ನಟಿಸಿದ್ದ ರಘು ಮುಖರ್ಜಿ ಮತ್ತು ಶ್ರೀನಗರ ಕಿಟ್ಟಿ ಚಿತ್ರದ ಪ್ರಧಾನ ಪಾತ್ರಧಾರಿಗಳು. ರಾಷ್ಟ್ರ ಪ್ರಶಸ್ತಿ ವಿಜೇತ ಜಾಕೊಬ್ ವರ್ಗೀಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸವಾರಿ ಯ ಪ್ರಥಮ ಪ್ರತಿ ಸಿದ್ಧವಾಗಿದೆ. ಬರುವ ಭಾನುವಾರ(ಮಾರ್ಚ್ 15) ಈ ಕನ್ನಡ ವಾಹಿನಿ ಚಿತ್ರದ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಲಿದೆ.

ಚಿತ್ರದಲ್ಲಿ 51 ಲಕ್ಷ ರು. ಬೆಲೆ ಬಾಳುವ ಮೋಟಾರ್ ಬೈಕನ್ನು ಬಳಸಲಾಗಿದೆಯಂತೆ. ಐವತ್ತೊಂದು ದಿನಗಳ ಸುದೀರ್ಘ ಚಿತ್ರೀಕರಣದ ನಂತರ ಆ ಮೋಟಾರ್ ಬೈಕ್ ನ ಸ್ಥಿತಿ ಚಿಂತಾಜನಕವಾಗಿದೆ ಎನ್ನುತ್ತಾರೆ ವರ್ಗೀಸ್. ಕನ್ನಡಕ್ಕೆ ಒಗ್ಗುವಂತೆ ಚಿತ್ರವನ್ನು ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆಯಂತೆ. ಶ್ರೀನಗರ ಕಿಟ್ಟಿ ಸಹ ತಮ್ಮ ಸಮ್ಮತಿ ಸೂಚಿಸಿದ್ದರು. ಚಿತ್ರದ ನಾಯಕಿ ಕಮಲಿನಿ ಮುಖರ್ಜಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಮೋಜಿ ರಾವ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada