»   » ಸೆಂಚುರಿ ಸ್ಟಾರ್ ಶಿವರಾಜ್ ನೂತನ 'ಸಿಎಂ'

ಸೆಂಚುರಿ ಸ್ಟಾರ್ ಶಿವರಾಜ್ ನೂತನ 'ಸಿಎಂ'

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಕಾಲ್ ಶೀಟ್ ಪಡೆದವನೇ ಧನ್ಯ. ಎಲ್ಲಾ ಬಗೆಯ ನಿರ್ಮಾಪಕರ ಕಣ್ಮಣಿಯಾಗಿರುವ ಶಿವರಾಜ್ ಮುಂದಿನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.

ಈ ವಾರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಚೆಲುವೆ ನಿನ್ನ ನೋಡಲು' ಎಂಬ ಚಿತ್ರ ನಿರ್ದೇಶಿಸಿದ್ದ ರಘುರಾಮ್ ನಿರ್ದೇಶನದ 'ಸಿಎಂ' ಎಂಬ ಚಿತ್ರದ ನಾಯಕನಾಗಿ ಶಿವಣ್ಣ ನಟಿಸುತ್ತಿದ್ದಾರೆ.

ಸಿಎಂ ಎಂದರೆ ಚೀಫ್ ಮಿನಿಸ್ಟರ್ ಇರ್ಬೇಕು ಇದು ರಾಜಕೀಯ ಪ್ರೇರಿತ ಚಿತ್ರ ಇರಬಹುದು ಎಂದು ಕೊಂಡವರನ್ನು ನಿರ್ದೇಶಕ ಬೇಸ್ತು ಬೀಳಿಸಿದ್ದಾರೆ. ಸಿಎಂ ಎಂದರೆ 'ಕಾಮನ್ ಮ್ಯಾನ್' ಅಂತೆ.

ಜನಾನುರಾಗಿಯಾಗಿ ಶಿವರಾಜ್ ಕಾಣಿಸಿಕೊಳ್ಳಲಿದ್ದು, ಯುವ ಜನಾಂಗದ ಹಕ್ಕು ಬಾಧ್ಯತೆ ಹಾಗೂ ಸಾರ್ವಜನಿಕರ ಕರ್ತವ್ಯಗಳನ್ನು ಸಾರುವ ಕಥೆ ಈ ಚಿತ್ರದಲ್ಲಿದೆಯಂತೆ.

ಆದರೆ, ಶಿವರಾಜ್ ಸಿಎಂ ಆಗಿ ನೋಡಲು ಕನಿಷ್ಠವೆಂದರೂ ಒಂದು ವರ್ಷವಾದರೂ ಬೇಕಾದೀತು. ಬಹುನಿರೀಕ್ಷಿತ ಜೋಗಯ್ಯ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರುವ ಶಿವರಾಜ್ ಅವರ ಕೈಲಿ ಲಕ್ಷ್ಮಿ, ಶಿವ, ಮದುವೆ ಇಂಪಾಸಿಬಲ್, ವರದ, ಸಿಂಹ, ಸಾರಂಗ ಹೀಗೆ ಅನೇಕ ಚಿತ್ರಗಳಿವೆ.

ಈ ಚಿತ್ರಗಳ ನಂತರ ಸಿಎಂ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚುತ್ತಿರುವ ಹ್ಯಾಟಿಕ್ ಹೀರೋ ಶಿವರಾಜ್ ಅವರನ್ನು ಸಿಎಂ ಆಗಿ ಕಾಣಲು ಅಭಿಮಾನಿಗಳಂತೂ ಕಾತರರಾಗಿದ್ದಾರೆ.

English summary
Hatrick Hero, Century hero Shivaraj Kumar has set to become next CM. Shivaraj has signed a movie with title 'CM' Cheluveye Ninna Nodalu fame director Raghuram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada