»   » ಕಂಠೀರವ ಕ್ರೀಡಾಂಗಣದ ಬಳಿ ಅಪಾರ ಜನಸ್ತೋಮ!

ಕಂಠೀರವ ಕ್ರೀಡಾಂಗಣದ ಬಳಿ ಅಪಾರ ಜನಸ್ತೋಮ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ 'ಜೋಗಯ್ಯ' ಮುಹೂರ್ತ ಕಾರ್ಯಕ್ರಮ ಇಂದು ನೆರವೇರಲಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣ ಜೋಗಯ್ಯನ ಮುಹೂರ್ತಕ್ಕೆ ಸಿಂಗಾರವಾಗಿದೆ. ಜೋಗಯ್ಯನನ್ನು ಕಣ್ತುಂಬಿಕೊಳ್ಳಲು ಶಿವಣ್ಣನ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಬಳಿ ಜಮಾಯಿಸಿದ್ದಾರೆ.

ಕಂಠೀರವ ಸ್ಟೇಡಿಯಂ ಒಳಗೆ ಪ್ರವೇಶಿಸಲು ನೂಕು ನುಗ್ಗಲು ಆರಂಭವಾದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಈಗಾಗಲೆ ತಮಿಳು ಚಿತ್ರರಂದ ವಿಜಯ್ ಹಾಗೂ ಸೂರ್ಯ ಸ್ಥಳಕ್ಕೆ ಆಗಮಿಸಿದ್ದಾರೆ. ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಆಗಮನವನ್ನು ನಿರೀಕ್ಷಿಸಲಾಗಿದೆ.

ಜೋಗಯ್ಯನ ಗೆಟಪ್ ನಲ್ಲಿ ಹಲವು ಕಲಾವಿದರು ವೇಷಧಾರಣೆ ಮಾಡಿಕೊಂಡು ಕೈಯಲ್ಲಿ ತ್ರಿಶೂಲ ಹಿಡಿದು ಕಾರ್ಯಕ್ರಮಕ್ಕೆ ಸಜ್ಜಾಗಿದ್ದರು. ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಜೋಗಯ್ಯನನ್ನು ನೋಡಲು ಆಗಮಿಸಿದ್ದಾರೆ. ಪಾಸ್ ಉಳ್ಳವರು ಒಳಗೆ ಪ್ರವೇಶಿಸಲು ಪರದಾಡುವಂತಾಗಿದೆ.

"ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಕಾರ್ಯಕ್ರಮ ನಡೆಯಲಿದೆ. ಪ್ರೇಕ್ಷಕರು ಸಹಕರಿಸಬೇಕು. ಈ ಕಾರ್ಯಕ್ರಮ ನಿಮಗಾಗಿ. ಪಾಸ್ ಗಳು ಸಿಗದವರು ನಿರಾಶರಾಗದೆ ದೂರದರ್ಶನದಲ್ಲಿ ಕಾರ್ಯಕ್ರಮವನ್ನು ನೋಡಿ ಆನಂದಿಸಲು" ಚಿತ್ರದ ನಿರ್ದೇಶಕ ಪ್ರೇಮ್ ಕೋರಿದ್ದಾರೆ. ಪದ್ಮ ವಾಸಂತಿ,ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬ ವರ್ಗದವರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada