»   » ಎಂಟು ಕೇಜಿ ತೂಕ ಇಳಿಸಿಕೊಂಡ ಹ್ಯಾಟ್ರಿಕ್ ಹೀರೋ

ಎಂಟು ಕೇಜಿ ತೂಕ ಇಳಿಸಿಕೊಂಡ ಹ್ಯಾಟ್ರಿಕ್ ಹೀರೋ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಚ್ಚ ಹೊಸ ಚಿತ್ರ ಮೈಲಾರಿ. ಕಾಲೇಜು ವಿದ್ಯಾರ್ಥಿ ಪಾತ್ರ ನಿರ್ವಹಿಸುವುದಕಾಗಿ ಶಿವರಾಜಕುಮಾರ್ 8 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. 49ರ ಹರಯದಲ್ಲೂ ಶಿವರಾಜಕುಮಾರ್ ಕಾಲೇಜು ಹುಡುಗರೇ ನಾಚುವಂತ ಮೈಕಟ್ಟು ಹೊಂದಿರುವುದು ನಿಜಕ್ಕೂ ಆಶ್ಚರ್ಯ.

'ಮೈಲಾರಿ' ಚಿತ್ರಕ್ಕೆ ಮೈಸೂರು ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಆರ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀನಿವಾಸ್ ಅವರು ಅರ್ಪಿಸಿ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ಚಿತ್ರ ಮೈಲಾರಿ. ನಾಯಕ ಹಾಗೂ ನಾಯಕಿ ನಡುವಿನ ಪ್ರೇಮಮಯ ಸನ್ನಿವೇಶಗಳು ಮಾನಸ ಗಂಗೋತ್ರಿಯ ಆವರಣದಲ್ಲಿ ಚಿತ್ರೀಕರಣಗೊಂಡಿದೆ. ಶಿವರಾಜಕುಮಾರ್ ಮತ್ತು ಸದಾ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

'ತಾಜ್‌ಮಹಲ್', 'ಪ್ರೇಮ್‌ಕಹಾನಿ' ಚಿತ್ರಗಳ ನಂತರ ಆರ್.ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಭಿನ್ನ ಕಥೆಯುಳ್ಳ ಈ ಚಿತ್ರ ನೊಡುಗರ ಮನಸೂರೆಗೊಳ್ಳಲಿದೆ ಎಂದು ನಿರ್ದೇಶಕರು ಅಭಿಪ್ರಾಯ ಪಡುತ್ತಾರೆ.ಗುರುಕಿರಣ್ ಸಂಗೀತ ಸಂಯೋಜನೆಯಿರುವ 'ಮೈಲಾರಿ'ಗೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ.

ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜ್‌ಕುಮಾರ್, ಸದಾ, ರವಿಕಾಳೆ, ರಂಗಾಯಣರಘು, ಸಂಜನಾ, ಸುರೇಶ್‌ಹುಬ್ಳಿಕರ್, ಗುರುಪ್ರಸಾದ್(ಮಠ), ಜಾನ್‌ಕೊಕೇನ್, ಸುರೇಶ್‌ಮಂಗಳೂರು, ರಾಜುತಾಳಿಕೋಟೆ, ಬುಲೆಟ್‌ಪ್ರಕಾಶ್, ಮೈಕೋನಾಗರಾಜ್, ಕುರಿ ಪ್ರತಾಪ್, ರಘುರಾಂ, ಕೋಟೆಪ್ರಭಾಕರ್, ವಿಶ್ವ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada