»   »  ದಾಖಲೆವೀರ ಸುಗ್ರೀವ ಗಿನ್ನೆಸ್ ಪುಸ್ತಕಕ್ಕಿಲ್ಲ!

ದಾಖಲೆವೀರ ಸುಗ್ರೀವ ಗಿನ್ನೆಸ್ ಪುಸ್ತಕಕ್ಕಿಲ್ಲ!

Posted By: *ಜಯಂತಿ
Subscribe to Filmibeat Kannada

ಭಾನುವಾರ ರಾತ್ರಿ ಕೊನೆಯಪಾತ್ರ- ಹನ್ನೊಂದು ಗಂಟೆ ಐವತ್ತೈದು ನಿಮಿಷಕ್ಕೆ- 'ಸುಗ್ರೀವ" ಚಿತ್ರತಂಡ ನೆಮ್ಮದಿಯ ನಿಟ್ಟುಸಿರಿಟ್ಟಿತು. ಸತತ ಹದಿನೆಂಟು ತಾಸಿನಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮುಗಿಸಿದ ದೊಡ್ಡ ಖುಷಿಯ ಸಂದರ್ಭವದು. ಒಂದು ಸೆಕೆಂಡೂ ಪುರುಸೊತ್ತಿಲ್ಲವೆಂಬಂತೆ ಶಿವರಾಜ್‌ಕುಮಾರ್ ನಟಿಸಿದರು.

ಇಷ್ಟೆಲ್ಲ ಆದರೂ ಚಿತ್ರ ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗುತ್ತಿಲ್ಲ. ಯಾಕೆಂದರೆ, ಗಿನ್ನೆಸ್ ಸೇರಬೇಕಾದರೆ ಚಿತ್ರೀಕರಣ ನಡೆಯುವ ಅವಧಿಯಷ್ಟೇ ಪರಿಗಣನೆಗೆ ಬರುವುದಿಲ್ಲ. ಚಿತ್ರ ಎಷ್ಟು ಕಾಲದಲ್ಲಿ ತೆರೆಕಾಣುತ್ತದೆ ಎಂಬುದು ಮುಖ್ಯವಾಗುತ್ತದೆ. ಅದಕ್ಕೇ ಈಗ ನಿರ್ಮಾಪಕ ಅಣಜಿ ನಾಗರಾಜ್ ಲಿಮ್ಕಾ ದಾಖಲೆ ಪುಸ್ತಕಕ್ಕಾದರೂ ಚಿತ್ರವನ್ನು ಸೇರಿಸುವ ಉದ್ದೇಶ ಹೊಂದಿದ್ದಾರೆ.

ಏನೆಲ್ಲಾ ಕಥೆ ಹೇಳಿದ ಅಣಜಿ ನಾಗರಾಜ್ ಒಂದು ಸಂಗತಿಯನ್ನು ಮಾತ್ರ ಗುಟ್ಟುಮಾಡಿದ್ದಾರೆ. 'ಸುಗ್ರೀವ" ಚಿತ್ರ 'ಜಾನ್ ಕ್ಯು" ಎಂಬ ಇಂಗ್ಲಿಷ್ ಸಿನಿಮಾದ ರೀಮೇಕ್ ಎಂಬುದೇ ಆ ಸತ್ಯ. ಶಿವರಾಜ್‌ಕುಮಾರ್ ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದಾರೆ. ಅಂಥಾದ್ದರಲ್ಲಿ ಈ ಚಿತ್ರದಲ್ಲಿ ನಟಿಸಿದ್ದು ಹೇಗೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಅವರಿಗೆ ಇದು ಇಂಗ್ಲಿಷ್ ಚಿತ್ರ ಆಧರಿಸಿದ್ದು ಎಂಬ ಸಂಗತಿಯೇ ಗೊತ್ತಿರಲಿಲ್ಲವಂತೆ. ಒಟ್ಟಿನಲ್ಲಿ ಶಿವರಾಜ್‌ಕುಮಾರ್ ಮಾತು ತಪ್ಪಲು 'ಸುಗ್ರೀವ" ಕಾರಣನಾಗಿದ್ದಾನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada