»   » ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮೇಲೆ ನಿಷೇಧ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮೇಲೆ ನಿಷೇಧ

Posted By:
Subscribe to Filmibeat Kannada

ದಕ್ಷಿಣ ಭಾರತದ ಬೆಡಗಿ ತಮನ್ನಾ ಭಾಟಿಯಾ ಮೇಲೆ ತಮಿಳು ಚಿತ್ರರಂಗ ನಿಷೇಧ ಹೇರಿದೆ. ಈಕೆ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಆ ಚಿತ್ರದ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ಶ್ರೀಲಂಕಾಗೆ ಹೋಗಿದ್ದೇ ಮಹಾ ಅಪರಾಧವಾಗಿದೆ. ಪರಿಣಾಮ ಚಿತ್ರರಂಗದಿಂದ ನಿಷೇಧ.

ಮೊದಲೇ ಶ್ರೀಲಂಕಾಗೂ ತಮಿಳು ಚಿತ್ರರಂಗಕ್ಕೂ ಎಣ್ಣೆಸೀಗೆಕಾಯಿ ಸಂಬಂಧ. ಅಂಥದರಲ್ಲಿ ತಮನ್ನಾ ಶ್ರೀಲಂಕಾಗೆ ಹೋಗಿರುವುದು ತಮಿಳರ ಪಿತ್ತನೆತ್ತಿಗೇರುವಂತೆ ಮಾಡಿದೆ.ಹಾಗಾಗಿ ಈಗ ಆಕೆಯ ಮೇಲೆ ತಮಿಳು ಚಿತ್ರರಂಗದ ಕೆಂಗಣ್ಣು ಬಿದ್ದಿದೆ.

ಶ್ರೀಲಂಕಾದಲ್ಲಿ ಅಪ್ಪಿತಪ್ಪಿಯೂ ಚಿತ್ರೀಕರಣ ನಡೆಸುವಂತಿಲ್ಲ. ಒಂದು ವೇಳೆ ನಡೆಸಿದರೆ ಅವರಿಗೆ ನಿಷೇಧವೇ ಗತಿ ಎಂದು ತಮಿಳು ಚಿತ್ರರಂಗ ಫರ್ಮಾನು ಹೊರಡಿಸಿತ್ತು. ಈ ವಿಷಯ ತಮನ್ನಾಗೆ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈಗ ಆಕೆಯನ್ನು ತಮಿಳು ಚಿತ್ರರಂಗದಿಂದ ನಿಷೇಧಿಸಲಾಗಿದೆ. ಈ ಹಿಂದೊಮ್ಮೆ ಬಾಲಿವುಡ್ ಚಿತ್ರ 'ರೆಡಿ' ಚಿತ್ರೀಕರಣಕ್ಕಾಗಿ ಸಲ್ಲು ಜೊತೆ ಅಸಿನ್ ಶ್ರೀಲಂಕಾಗೆ ಹೋದ ಕಾರಣ ಆಕೆಗೂ ಇದೇ ಗತಿಯಾಗಿತ್ತು. (ಏಜೆನ್ಸೀಸ್)

English summary
South Indian actresses Tamannah is likely to be banned by Kollywood. The reason behind is that the actress flew to SriLanka for the shooting of her future project in Telugu titled ‘Rachcha’ with Ram Charan as a hero.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada