twitter
    For Quick Alerts
    ALLOW NOTIFICATIONS  
    For Daily Alerts

    ಬೈಟೂ ಕಾಫಿ ಕುಡಿದು ಒಂದು ಕಿರುಚಿತ್ರ ಕಳಿಸಿ ನೋಡೋಣ

    By Mahesh
    |

    By2Cofee Short Film Festival 2011
    "ಕೆ.ವಿ ಸುಬ್ಬಣ್ಣ ಆಪ್ತ ಸಮೂಹ" ಮತ್ತು "ಬೈಟೂ-ಕಾಫೀ-ಫಿಲ್ಮ್ಸ್" ತಂಡಗಳು ಜೊತೆಗೂಡಿ ರಾಷ್ಟ್ರೀಯ ಮಟ್ಟದ ಕಿರುಚಿತ್ರ ಹಬ್ಬವನ್ನು, 2011ರ ನವೆಂಬರ್ 27ರಂದು ಆಯೋಜಿಸಿದೆ. ಜೂನ್-24ರಿಂದ ಸೆಪ್ಟಂಬರ್-30ರ ಒಳಗಾಗಿ ನಿಮ್ಮ ಶಾರ್ಟ್ ಮೂವಿಗಳನ್ನು ಕಳುಹಿಸಬಹುದು. ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ನಿರ್ದೇಶಕರು ಆರಿಸಿದ ಚಿತ್ರಗಳನ್ನು ನವೆಂಬರ್ ನಲ್ಲಿ ಪ್ರದರ್ಶಿಸಲಾಗುವುದು ಎಂದು ಬೈಟೂ ಕಾಫಿ ತಂಡದ ವಿಬಿ ಅಮರನಾಥ್ ಹೇಳಿದ್ದಾರೆ.

    ಅಂತಹವರಿಗೋಸ್ಕರ ಪ್ರವೇಶ ಶುಲ್ಕವಿರದೆ ಕಿರುಚಿತ್ರ ಹಬ್ಬವನ್ನು ನಡೆಸುವುದು ನಮ್ಮ ಮೂಲ ಉದ್ದೇಶ. ಬೇರೆ ರಾಜ್ಯಗಳಲ್ಲಿ ನಡೆಯುವಂತೆ ಪ್ರಭಾವಶಾಲಿ ಮಾಧ್ಯಮವಾಗಿ ಕಿರುಚಿತ್ರ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲ. ಅಲ್ಲದೆ ಕಿರುಚಿತ್ರ ತಯಾರಕರನ್ನು ಒಂದೆಡೆ ಸೇರಿಸಲು ಸುವರ್ಣಾವಕಾಶ ಮತ್ತು ಪ್ರಾಯೋಜಕರಿಗೆ ಮತ್ತೊಂದು ಸಮೂಹವನ್ನು ತಲುಪುವ ಅವಕಾಶವನ್ನು ದೊರಕಿಸಿ ಕೊಡುವುದು ಸಹ ನಮ್ಮ ಉದ್ದೇಶ ಎಂದು ಚಿತ್ರೋತ್ಸವದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀಧರ್ ರೆಡ್ಡಿ ವಿವರಿಸಿದರು.

    ಯಾರಿವರು ಬೈಟೂಕಾಫಿ: ಕಳೆದೆರಡು ವರುಷಗಳಿಂದ ಸಮಾಜಿಕ ಸಂದೇಶಗಳ ಕಿರುಚಿತ್ರಗಳ ತಯಾರಿಕೆಯಲ್ಲಿ ಸಕ್ರಿಯವಾಗಿದೆ. "ನನ್ನ ಕನಸು" -ಕಿರುಚಿತ್ರದಿಂದ ಶಿಕ್ಷಣ ಎಂಬ ಕಾರ್ಯಕ್ರಮದ ಮುಖಾಂತರ "ನಿರಂತರ ಫೌಂಡೇಶನ್" ಜೊತೆಗೂಡಿ ಶಾಲೆಗಳ ಬಡ ಮಕ್ಕಳಿಗೆ ವಿಭಿನ್ನ ರೀತಿಯ ಶಿಕ್ಷಣ ಕೊಡುತ್ತಾ ಸಮಾಜ ಸೇವೆ ಮಾಡುತ್ತಲಿದೆ. ಅಲ್ಲದೆ ಇತರ ರಾಜ್ಯಗಳಲ್ಲಿ ನಡೆದಂತಹ ರಾಷ್ಟ್ರೀಯ ಮಟ್ಟದ ಕಿರುಚಿತ್ರ ಹಬ್ಬಗಳಲ್ಲಿ ಕಿರುಚಿತ್ರಗಳು ಪ್ರದರ್ಶನ ಕಂಡಿವೆ. ಹೀಗೆ ಭಾಗವಹಿಸುತ್ತಾ ಪ್ರಸಕ್ತ ಪರಿಸ್ಥಿತಿಯ ಅರಿತಿದ್ದರಿಂದ ಈ ಒಂದು ಪ್ರಯತ್ನಕ್ಕೆ ಕೈ ಹಾಕಲಾಗಿದೆ.

    ಆಸಕ್ತರು 2010-11ರಲ್ಲಿ ತಯಾರಿಸಿದ ತಮ್ಮ ಕಿರು-ಚಲನಚಿತ್ರಗಳನ್ನು, ಜೂನ್-24ರಿಂದ ಸೆಪ್ಟಂಬರ್-30ರ ಒಳಗಾಗಿ ಕಳುಹಿಸಬಹುದು. ಪ್ರಾಯೋಜಕತೆಗೆ, ಪ್ರವೇಶ ಪತ್ರಕ್ಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ 99163 15540 ಮೋಬೈಲ್ ನಂಬರನ್ನು ಸಂಪರ್ಕಿಸ ಬಹುದು ಅಥವಾ http://shortfilmfest.by2coffeefilms.com/ ಗೆ ಭೇಟಿ ಕೊಡಬಹುದು.

    ಉತ್ತಮ ಪ್ರವೇಶಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಹಾಗೂ ನವೆಂಬರ್ 27ರಂದು ಆಯೋಜಿಸುವ ಕಿರುಚಿತ್ರ ಹಬ್ಬದಲ್ಲಿ ಪ್ರದರ್ಶಿಸಲಾಗುವುದು.ಒಂದೊಂದು ಕಪ್ ಕಾಫೀ ಕೊಡುವ ನವೊಲ್ಲಾಸವನ್ನು ಬೈಟೂ ಕಾಫಿ ಸಹ ಕೊಡಬಲ್ಲದು, ಅದರಂತೆ ಕೆಲವು ಘಂಟೆಗಳ ಸಿನಿಮಾ ಕೊಡುವ ಸಂದೇಶವನ್ನು ಕೆಲವೇ ಕ್ಷಣಗಳ ಕಿರುಚಿತ್ರ ಸಹ ಕೊಡಬಲ್ಲದು.

    ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ವೈಶಿಷ್ಟ್ಯಪೂರ್ಣ ಹಿರಿಮೆ ಸಾಧಿಸಿರುವ ಗಿರೀಶ್ ಕಾಸರವಳ್ಳಿ, ಮನು ಚಕ್ರವರ್ತಿ, ಪಿ. ಶೇಷಾದ್ರಿ, ಬಿ. ಸುರೇಶ್, ಜಿ. ಎಸ್. ಭಾಸ್ಕರ್, ಬಿ. ಆರ್. ವಿಶ್ವನಾಥ್, ಎಸ್. ದಿವಾಕರ್, ಟಿ. ಪಿ. ಅಶೋಕ್, ಗೋಪಾಲಕೃಷ್ಣ ಪೈ, ರಮೇಶ್ ಅರವಿಂದ್ ಮತ್ತು ಮುಂತಾದವರ ಮಾರ್ಗದರ್ಶನ ನಿಮಗೆ ಸಿಗಲಿದೆ.

    English summary
    By2Cofee team which has members mainly from IT BT industry and KV Subbanna Apta Samooha is jointly oraganising National level Short Film Festival 2011 in Bangalore. Short listed movies will be judged by National award winning film maker from KFI. Festival is open from Jun 24 to Sep 30. Entries are open, movies will screened in November 2011.
    Tuesday, July 12, 2011, 12:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X