»   »  ಡಬಲ್ಸ್ ನಲ್ಲಿ ಟೆನ್ನಿಸ್ ಕೃಷ್ಣ, ರೇಖಾ ದಾಸ್ ದಾಖಲೆ!

ಡಬಲ್ಸ್ ನಲ್ಲಿ ಟೆನ್ನಿಸ್ ಕೃಷ್ಣ, ರೇಖಾ ದಾಸ್ ದಾಖಲೆ!

Posted By:
Subscribe to Filmibeat Kannada
Tennis Krishna
ಟೆನ್ನಿಸ್ ಕೃಷ್ಣಮತ್ತು ರೇಖಾದಾಸ್ ಡಬಲ್ಸ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಇವರಿಬ್ಬರೂ ಜತೆಯಾಗಿ ನಟಿಸಿದ ಚಿತ್ರಗಳ ಸಂಖ್ಯೆ 99 ಗಡಿ ದಾಟಿ 100ಕ್ಕೆ ಅಡಿಯಿಟ್ಟಿದೆ. ಹೀಗೆ ನೂರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ ಕಾಮಿಡಿ ಜೋಡಿ ಕನ್ನಡ ಚಿತ್ರರಂಗದಲ್ಲಿ ಬಹುಶಃ ಸಿಗಲಿಕ್ಕಿಲ್ಲ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಸಮಯದಲ್ಲಿ ಇದೊಂದು ಅಪೂರ್ವ ದಾಖಲೆ ಎನ್ನಬಹುದು.

ಹೆತ್ತ ಕರುಳು, ಹಲೋ ಸಿಸ್ಟರ್, ಹೆತ್ತವರು, ಕಿತ್ತೂರಿನ ಹುಲಿ, ಕೊಲ್ಲೂರು ಕಾಳ, ಪೊಲೀಸನ ಹೆಂಡ್ತಿ ಮುಂತಾದ ಚಿತ್ರಗಳಲ್ಲಿ ಟೆನ್ನಿಸ್ ಕೃಷ್ಣ ಮತ್ತು ರೇಖಾದಾಸ್ ಜೋಡಿ ಜನಪ್ರಿಯವಾಗಿತ್ತು. ತಾವು ನಟಿಸಲಿರುವ ನೂರನೇ ಚಿತ್ರವನ್ನು ಅದ್ಭುತವಾಗಿ ತೆರೆಗೆ ತರಬೇಕು ಎಂದು ಟೆನ್ನಿಸ್ ಕೃಷ್ಣ ಮತ್ತು ರೇಖಾದಾಸ್ ಯೋಜನೆ ರೂಪಿಸಿದ್ದಾರೆ.

ಇಷ್ಟಕ್ಕೂ ಕೃಷ್ಣನ ಹೆಸರಿನೊಂದಿಗೆ ಟೆನ್ನಿಸ್ ಸೇರಿಕೊಂಡಿದ್ದು ಹೇಗೆ? ಆರಂಭದಲ್ಲಿ ಕರ್ನಾಟಕ ಲಾನ್ ಟೆನ್ನಿಸ್ ಅಸೋಸಿಯೇಷನ್ ನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಹೋಗುತ್ತಿದ್ದ ಟೆನ್ನಿಸ್ ಚೆಂಡನ್ನು ಕ್ರೀಡಾಳುಗಳ ಕಡೆಗೆ ಎಸೆಯುತ್ತಿದ್ದರಂತೆ. ನಂತರ ರಾಜ್ಯ ಮಟ್ಟ ಟೆನ್ನಿಸ್ ನಲ್ಲಿ ಸ್ಪರ್ಧಿಸಿದ್ದರು.ಆನಂತರ ಪ್ರೇಮ್ ಸಾಗರ್ ಸೇರಿದಂತೆ ಹಲವಾರು ಟೆನ್ನಿಸ್ ದಿಗ್ಗಜಗಳಿಗೆ ತರಬೇತುದಾರನಾಗಿದ್ದು ಟೆನ್ನಿಸ್ ಕೃಷ್ಣ ಅವರ ಮಹಾನ್ ಸಾಧನೆ ಎನ್ನಬಹುದು. ಇಷ್ಟೆಲ್ಲಾ ಸಾಧನೆ ಮಾಡಿದ್ದಕ್ಕೆ ಟೆನ್ನಿಸನ್ನು ಮರೆಯಲು ಸಾಧ್ಯವೆ. ಹಾಗಾಗಿ ಹೆಸರಿನ ಜತೆಗೆ ಟೆನ್ನಿಸ್ ಸೇರ್ಪಡೆಯಾಯಿತು.

ಆರ್.ಎನ್.ಜಯಗೋಪಾಲ್ ರ 'ಹೃದಯ ಪಲ್ಲವಿ' ಚಿತ್ರಕ್ಕೆ ಸಹಾಯ ನಿರ್ದೇಶಕರಾಗಿ ಟೆನ್ನಿಸ್ ಕೃಷ್ಣ ಕೆಲಸ ಮಾಡಿದ್ದರು. ಸುನಿಲ್ ಕುಮಾರ್ ದೇಸಾಯಿ ಅವರ 'ತರ್ಕ' ಚಿತ್ರಕ್ಕೆ ಸಹ ನಿರ್ದೆಶಕರಾಗಿ ಕೆಲಸ ಮಾಡಿದ್ದರು. ಟೆನ್ನಿಸ್ ಕೃಷ್ಣರ ಹಾವಭಾವಗಳೊಂದಿಗೆ ಅವರ ಧ್ವನಿ ಸಹ ನಗು ಉಕ್ಕ್ಕಿಸುವಂತಿರುವುದು ಅವರಿಗೆ ವರದಾನವಾಗಿದೆ. ಕನ್ನಡ ಹಾಸ್ಯಪ್ರಿಯರು ಟೆನ್ನಿಸ್ ರ ನಟನೆಗೆ ಮಾರುಹೋದ ಕಾರಣ ಅವರು 400ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸುವಂತಾಯಿತು.

ತೊಂಬತ್ತರ ದಶದಲ್ಲಿ ಮೂರು ಪಾಳಯಗಳಲ್ಲಿ ನಟಿಸುವಷ್ಟು ಕೈ ತುಂಬ ಪಾತ್ರಗಳಿದ್ದವು ಟೆನ್ನಿಸ್ ಕೃಷ್ಣರ ಕಾಲ್ ಷೀಟ್ ನಲ್ಲಿ. ದೊಡ್ಡಣ್ಣ ಮತ್ತ್ತು ಟೆನ್ನಿಸ್ ಜೋಡಿ ಸಹ ತೊಂಬತ್ತರ ದಶಕದಲ್ಲಿ ಬಹಳಷ್ಟು ಜನಪ್ರಿಯವಾಗಿತ್ತು. ಅವರಿಬ್ಬರ ನಡುವೆ 'ಅಹಂ' ಅಡ್ಡಬಂದು ಐದು ವರ್ಷ ದೂರವಾಗಿದ್ದರು. ಮಹಾರಾಜ ಚಿತ್ರದೊಂದಿಗೆ ಮತ್ತೆ ದೊಡ್ಡಣ್ಣ ಮತ್ತು ಟೆನ್ನಿಸ್ ಆಟ ಶುರುವಾಯಿತು. ಅಂದಿನಿಂದ ಪ್ರೇಕ್ಷಕರು ಅವರಿಗೆ ನಮಸ್ಕಾರ ಕಣಣ್ಣೋ...!!! ಎನ್ನುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada