»   »  ಶತಕ ಬಾರಿಸಿದ ಅಂಬಾರಿ; ರು.5 ಕೋಟಿ ಲಾಭ!

ಶತಕ ಬಾರಿಸಿದ ಅಂಬಾರಿ; ರು.5 ಕೋಟಿ ಲಾಭ!

Posted By:
Subscribe to Filmibeat Kannada
Ambari heroine Supritha
ಯೋಗೀಶ್ ಯಾನೆ ಲೂಸ್ ಮಾದ ನಟಿಸಿದ 'ಅಂಬಾರಿ' ಚಿತ್ರ ಶತಕ ಬಾರಿಸಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು 'ಅಂಬಾರಿ' ಚಿತ್ರತಂಡಗ್ರೀನ್ ಹೌಸ್ ರಾಜ್ ಮಿಲನದಲ್ಲಿ ಸ್ನೇಹಕೂಟವನ್ನು ಶನಿವಾರ (ಮೇ 9)ಹಮ್ಮಿಕೊಂಡಿತ್ತು. ಶತ ದಿನದ ಸಂಭ್ರಮ ಎಲ್ಲರ ಮುಖಗಳಲ್ಲೂ ಪ್ರತಿಬಿಂಬಿಸುತ್ತಿತ್ತು.

2009ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಶನದಿನ ಪೂರೈಸಿದ ಮೊದಲ ಚಿತ್ರ ಎಂಬ ಅಗ್ಗಳಿಕೆಗೂ 'ಅಂಬಾರಿ' ಪಾತ್ರವಾಗಿದೆ. ಚಿತ್ರದ ನಿರ್ದೇಶಕ ಅರ್ಜುನ್ ಮಾತನಾಡುತ್ತಾ, ''ಅಂಬಾರಿ ಚಿತ್ರ ನೂರೈವತ್ತು ದಿನಗಳನ್ನು ಪೂರೈಸುತ್ತದೆ. ರಾಜ್ಯದ 12 ಕೇಂದ್ರಗಳಲ್ಲಿ ಅಂಬಾರಿ ಶತಕ ಪೂರೈಸಿದ್ದು, ರು.2.5ಕೋಟಿ ಬಂಡವಾಳದ ಚಿತ್ರ ಸರಿಸುಮಾರು ರು.5 ಕೋಟಿಯಷ್ಟು ಲಾಭ ಮಾಡಿದೆ. ಈ ಯಶಸ್ಸು ನನ್ನೊಬ್ಬನ ಯಶಸ್ಸಲ್ಲ, ಇದು ಇಡೀ ಕರ್ನಾಟಕದ ಜನರ ಯಶಸ್ಸು. ನನ್ನ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ, ಅಂಬಾರಿ ಯಶಸ್ಸಿನಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ'' ಎಂದರು.

14 ವಾರಗಳ ಗಳಿಕೆಯಲ್ಲಿ ಬೆಂಗಳೂರಿನ ಸಾಗರ್ ಚಿತ್ರಮಂದಿರದ ಪಾಲು ರು.2.5 ಲಕ್ಷಗಳು ಎಂಬ ಅಂಶವನ್ನು ಅರ್ಜುನ್ ಬಹಿರಂಗಪಡಿಸಿದರು. ಹಾಗೆಯೇ ಚಿತ್ರದ ಧ್ವನಿಸುರುಳಿ ಮತ್ತು ಸಿಡಿಗಳ ಮಾರಾಟದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮೂರು ಲಕ್ಷ ಸಿಡಿಗಳು ಹಾಗೂ 80000 ಧ್ವನಿಸುರುಳಿಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ ಎಂಬ ವಿವರಗಳನ್ನು ನೀಡಿದರು. ಆರ್ಥಿಕ ಹಿಂಜರಿತ, ಐಪಿಎಲ್ ಪಂದ್ಯಾವಳಿ, ಬೇಸಿಗೆ ಧಗೆ, ಚುನಾವಣೆಗಳ ಭರಾಟೆಗಳ ನಡುವೆಯೂ ತಮ್ಮ ಚಿತ್ರ ಶತದಿನ ಪೂರೈಸಿದೆ ಎಂಬ ಸಂಭ್ರಮ ಅರ್ಜುನ್ ಮುಖದಲ್ಲಿ ಲಾಸ್ಯವಾಡುತ್ತಿತ್ತು.

ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ಪುನೀತ್ ರಾಜ್ ಕುಮಾರ್, ನಿರ್ದೇಶಕ ಪ್ರೇಮ್, ರಕ್ಷಿತಾ, ಅಂದ್ರಿತಾ ರೇ, ರಾಘವೇಂದ್ರ ರಾಜ್ ಕುಮಾರ್, ಅಜಿತ್, ಯಶ್ ಮುಂತಾದವರು ಯೊಗೀಶ್ ನಟನೆಯನ್ನು ಕೊಂಡಾಡಿದರು. ಒಟ್ಟಿನಲ್ಲಿ ಅಂಬಾರಿ ಚಿತ್ರದ ಯಶಸ್ಸು ಮತ್ತಷ್ಟು ಕನ್ನಡ ಚಿತ್ರಗಳ ಸ್ಪೂರ್ತಿಗೆ ಕಾರಣವಾಗಿದೆ ಎಂಬುದಂತೂ ಸತ್ಯ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ
ಅಂಬಾರಿ ಮೇಲೇರಿದ ಲೂಸ್ ಮಾದ ಯೋಗೀಶ
ಸೈಕಲ್ ಮೇಲೆ ಅಂಬಾರಿ ಹೊತ್ತ ಯೋಗೀಶ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada