»   »  ರಮ್ಯಾಗೆ ಮುದ್ದಿನ ಅಪ್ಪನಾಗಿ ಪ್ರಕಾಶ್ ರೈಚಿತ್ರ!

ರಮ್ಯಾಗೆ ಮುದ್ದಿನ ಅಪ್ಪನಾಗಿ ಪ್ರಕಾಶ್ ರೈಚಿತ್ರ!

Posted By:
Subscribe to Filmibeat Kannada

ತಮಿಳಿನ ಸೂಪರ್ ಹಿಟ್ ಚಲನಚಿತ್ರ 'ಅಭಿಯುಂ ನಾನುಂ'(ಅಭಿ ಮತ್ತು ನಾನು) ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಪ್ರಕಾಶ್ ರೈ ನಿರ್ಮಾಣದ ಈ ಚಿತ್ರದಲ್ಲಿ ಸ್ವತಃ ಅವರು ನಟಿಸಿದ್ದರು. ರಾಧಾ ಮೋಹನ್ ನಿರ್ದೇಶಿಸಿದ್ದ ಈ ಚಿತ್ರ ತೆಲುಗಿನಲ್ಲಿ 'ಆಕಾಶಮಂತ' ಹೆಸರಿನಲ್ಲಿ ರೀಮೇಕ್ ಆಗಿ ಜನಪ್ರಿಯವಾಗಿತ್ತು.

ಅಭಿಯುಂ ನಾನುಂ ಚಿತ್ರ ಕನ್ನಡಕ್ಕೆ ಮರುನಿರ್ಮಾಣವಾಗುತ್ತಿದೆ. ಈ ಚಿತ್ರವನ್ನು ಪ್ರಕಾಶ್ ರೈ ನಿರ್ಮಿಸಿ, ನಿರ್ದೇಶಿಸಿ ಸ್ವತಃ ನಟಿಸುತ್ತಿರುವುದು ವಿಶೇಷ. ಮೂಲ ಚಿತ್ರದಲ್ಲಿ ತಂದೆ ಮಗಳ ಪಾತ್ರವನ್ನು ರೈ ಮತ್ತು ತ್ರಿಷಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಕನ್ನಡದಲ್ಲಿ ರೈ ಮಗಳಾಗಿ ನಟಿಸುವ ಅದೃಷ್ಟ ರಮ್ಯಾ ಪಾಲಿಗೆ ಒಲಿದಿದೆ!

ಚಿತ್ರದ ಶೀರ್ಷಿಕೆ, ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಚಿತ್ರಕ್ಕೆ 'ಫಾದರ್ ಆಫ್ ದಿ ಬ್ರೈಡ್'ಎಂಬ ಆಂಗ್ಲ ಚಿತ್ರವೇ ಸ್ಫೂರ್ತಿಯಂತೆ. ಕನ್ನಡದ ಮತ್ತೊಂದು ರೀಮೇಕ್ ಚಿತ್ರ 'ಧೂಳ್' ನಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಐಂದ್ರಿತಾ ರೇ ಗೆ ಅಣ್ಣನಾಗಿ ಪ್ರಕಾಶ್ ಕಾಣಿಸಲಿರುವುದು ವಿಶೇಷ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada