For Quick Alerts
  ALLOW NOTIFICATIONS  
  For Daily Alerts

  ನವರಸ ನಾಯಕ ಜಗ್ಗೇಶ್ ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆ

  By Rajendra
  |

  ಫುಲ್ ಟೈಮ್ ರಾಜಕಾರಣಿ ಹಾಗೂ ಪಾರ್ಟ್ ಟೈಂ ನಟನಾಗಿ ಬದಲಾಗಿರುವ ನವರಸ ನಾಯಕ ಜಗ್ಗೇಶ್ ಅವರು ಶನಿವಾರ (ಡಿ.11) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ದೇಹದಲ್ಲಿ ಸಂಗ್ರಹವಾಗಿದ್ದ ದುರ್ಮಾಂಸವನ್ನು ತೆಗೆಯಲು ಈ ಸಣ್ಣ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಸದ್ಯಕ್ಕೆ ಅವರು ಆರೋಗ್ಯ ಪರಿಸ್ಥಿತಿ ಉತ್ತಮವಾಗಿದೆ ಎಂದು ಜಗ್ಗೇಶ್ ಕುಟುಂಬ ಮೂಲಗಳು ತಿಳಿಸಿವೆ.

  "ಗೋಲಿ ಗಾತ್ರದಲ್ಲಿದ್ದ ದುರ್ಮಾಂಸವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲಾಗಿದೆ. ಇದು ಅನುವಂಶಿಕತೆಯಿಂದ ಬಂದ ಸಮಸ್ಯೆ ಅಷ್ಟೆ. ರಾಜಾಜಿನಗರ ಖಾಸಗಿ ಆಸ್ಪತ್ರೆಯಲ್ಲಿ ಅಣ್ಣನಿಗೆ ಈ ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಯಿತು" ಎಂದು ಜಗ್ಗೇಶ್ ಅವರ ತಮ್ಮ ಕೋಮಲ್ ಕುಮಾರ್ ವಿವರ ನೀಡಿದ್ದಾರೆ.

  "ಇದೊಂದು ಸಾಮಾನ್ಯ ಶಸ್ತ್ರಚಿಕಿತ್ಸೆಯಾಗಿದ್ದು, ಈ ಹಿಂದೆ ನಾನೂ ಇದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಆದರೆ ಅಣ್ಣನಷ್ಟು ಧೈರ್ಯ ನನಗಿರಲಿಲ್ಲ ಕೊಂಚ ಭಯಭೀತನಾಗಿದ್ದೆ" ಎಂದಿದ್ದಾರೆ ಕೋಮಲ್. ಅಂದಹಾಗೆ ಜಗ್ಗೇಶ್ ಅಭಿನಯದ 'ಸಿಐಡಿ ಈಶ' ಚಿತ್ರಕ್ಕೆ ಅದ್ಯಾವಾಗ ಬಿಡುಗಡೆ ಭಾಗ್ಯ ಸಿಗುತ್ತದೋ ಗೊತ್ತಿಲ್ಲ.

  ಕೋಮಲ್ ಹಾಗೂ ಜಗ್ಗೇಶ್ ಅಭಿನಯದ 'ಲಿಫ್ಟ್ ಕೊಡ್ಲಾ' ಚಿತ್ರ ಇಬ್ಬರ ವೃತ್ತಿಜೀವನಕ್ಕೆ ಕೊಂಚ ಲಿಫ್ಟ್ ಕೊಟ್ಟಿತ್ತು. ಆದರೆ ಅದ್ಯಾಕೋ ಏನೋ 'ಐತಲಕ್ಕಡಿ' ಚಿತ್ರ ಮಾತ್ರ ನಿರೀಕ್ಷಿಸಿದಷ್ಟು ಫಲ ನೀಡಲಿಲ್ಲ. ಏನೇ ಇರಲಿ ಜಗ್ಗೇಶ್ ಅವರು ನವರಸಭರಿತ ನಗೆ ಟಾನಿಕ್ ಪ್ರೇಕ್ಷಕರಿಗೆ ಉಣಬಡಿಸುತ್ತಿರಲಿ ಎಂದು ಆಶಿಸೋಣ.

  English summary
  Navarasa Nayaka Jaggesh has undergone an surgery for the removal of lipoma cysts on Saturday (Dec 11). He underwent the surgery at a private hospital in Rajajinagar. Sources says that Jaggesh health condition is good.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X