»   »  ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ರಾಧಿಕಾ?

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ರಾಧಿಕಾ?

Subscribe to Filmibeat Kannada

ಕನ್ನಡ ಚಿತ್ರನಟಿ ರಾಧಿಕಾ ಮಾಡಿದ ನಾಗಮಂಡಲ ಪೂಜೆ ಫಲ ಕೊಟ್ಟಿದೆ. ಆಕೆ ಈಗ ತಾಯಿಯಾಗಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಸುಸಜ್ಜಿತ ಹೆರಿಗೆ ಆಸ್ಪತ್ರೆಗಳಲ್ಲಿ ಒಂದಾದ ಜಯನಗರದ ಕ್ರೆಡಲ್ ನಲ್ಲಿ ಸುಸೂತ್ರ ಹೆರಿಗಾಗಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ರ ಹೆಂಡತಿ ರೇಣುಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಸ್ಮರಿಸಬಹುದು.

ಈ ಹಿಂದೆಯೂ ಸಹ ರಾಧಿಕಾ ಕುರಿತು ಇದೇ ರೀತಿಯ ಸುದ್ದಿ ಹಬ್ಬಿತ್ತು. ಆಕೆಗೆ ಲಂಡನ್ ನ ಬೋಸ್ಟನ್ ಆಸ್ಪತ್ರೆಯಲ್ಲಿ ಹೆರಿಗೆಯಾಯಿತಂತೆ ಎಂಬ ಸುದ್ದಿ ಚಾಲ್ತಿಯಲ್ಲಿತ್ತು. ಆನಂತರ ಲಂಡನ್ ನಲ್ಲಿ ಅಲ್ಲ ಬೆಂಗಳೂರಿನ ಮಲ್ಲೇಶ್ವರದಲ್ಲೇ ಆಕೆ ಹೆಣ್ಣು ಮಗುವನ್ನು ಹಡೆದರು ಎಂಬ ಸುದ್ದಿ ಬಂತು. ಇದರ ಹಿಂದೆಯೇ ಮತ್ತಿಕೆರೆಯ ಪತ್ರಿಕಾ ವಿತರಕರಿಗೊಬ್ಬರಿಗೆ ಮಕ್ಕಳಿಲ್ಲದ ಕಾರಣ ಆ ಮಗುವನ್ನು ಅವರಿಗೆ ದತ್ತು ಕೊಡಲಾಗಿದೆ ಎಂಬ ಸುದ್ದಿಯೂ ಸ್ಫೋಟಗೊಂಡಿತ್ತು.

ಮೂಲಗಳ ಪ್ರಕಾರ ರಾಧಿಕಾಗೆ ಈಗ ಆರು ತಿಂಗಳು ತುಂಬಿವೆಯಂತೆ. ವೈದ್ಯರ ಸಲಹೆಯ ಮೇರೆಗೆ ಆಕೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಜಯನಗರದ ಕ್ರೆಡಲ್ ಆಸ್ಪತ್ರೆಗೆ ಹೋಗಿ ಬರುತ್ತಿದ್ದಾರಂತೆ. ಚೆಕಪ್ ಗಾಗಿ ಹೋಗುವಾಗ ಬುರ್ಕಾ ತರಹದ ಮುಸುಕು ಧರಿಸಿ ಹೋಗುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಆಕೆಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಯಾರಿಗೂ ವಿಷಯ ತಿಳಿಸಬೇಡಿ ಎಂದು ರಾಧಿಕಾ ಮನೆಯರು ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದಾರಂತೆ. ಚೆಕಪ್ ಗಾಗಿ ಆಸ್ಪತ್ರೆಗೆ ಹೋಗಿ ಬರುತ್ತಿರಬೇಕಾದರೆ ಈಕೆ ಯಾರು ಎಂಬುದು ಸಿಬ್ಬಂದಿಗೆ ಮೊದಲು ಗೊತ್ತಾಗಲಿಲ್ಲವಂತೆ. ಆನಂತರ ಆಕೆ ಚಿತ್ರನಟಿ ರಾಧಿಕಾ ಎಂದು ಸಿಬ್ಬಂದಿ ಗುರುತಿಸಿದ್ದಾರೆ. ತಕ್ಷಣ ಈ ಸುದ್ದಿ ಸ್ಫೋಟಗೊಂಡಿದೆ ಎನ್ನುತ್ತವೆ ಬಲ್ಲ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada