For Quick Alerts
  ALLOW NOTIFICATIONS  
  For Daily Alerts

  ಆಪ್ತರಕ್ಷಕ ಬೆಳ್ಳಿ ಮಹೋತ್ಸವ ಪಾಸ್‌ಗಳು ಇಲ್ಲಿ ಲಭ್ಯ

  By Rajendra
  |

  ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಆಪ್ತರಕ್ಷಕ' ಚಿತ್ರದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 18ರಂದು ಅದ್ದೂರಿಯಾಗಿ ನಡೆಸಲು ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ ನಿರ್ಧರಿಸಿದ್ದಾರೆ. ಸೆ.18ರ ಸಂಜೆ 6 ಗಂಟೆಗೆ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

  ಬಹಾರ್ ಫಿಲಂಸ್ ಮತ್ತು ನರ್ತಕಿ ಚಿತ್ರಮಂದಿರಗಳಲ್ಲಿ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಅಭಿಮಾನಿಗಳು ತಮ್ಮ ಸಂಘದ ಲೆಟರ್ ಹೆಡ್ ಗಳನ್ನು ತೋರಿಸಿ ಪಾಸ್ ಪಡೆಯಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಹೀಗಿವೆ: 88920 77718, 98809 19710 ಮತ್ತು 99721 44476.

  ಆಪ್ತರಕ್ಷಕ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಭಾಗವಹಿಸುತ್ತಿಲ್ಲ. ಸೆಪ್ಟೆಂಬರ್ 18ರಂದು ವಿಷ್ಣು ಚಿತ್ರೋತ್ಸವ, ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳ ಜೊತೆ ವಿಷ್ಣು ಹುಟ್ಟುಹಬ್ಬ ಆಚರಣೆ, ರಕ್ತದಾನ, ನೇತ್ರದಾನ ಶಿಬಿರಗಳ ಉದ್ಘಾಟನೆ... ಹೀಗೆ ನೂರೆಂಟು ಕೆಲಸ ಕಾರ್ಯಗಳಿರುವ ಕಾರಣ ಅವರು 'ಆಪ್ತರಕ್ಷಕ' ಕಾರ್ಯಕ್ರದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಮತ್ತಷ್ಟು ವಿವರಗಳಿಗಾಗಿ ಪುಟ ಕ್ಲಿಕ್ಕಿಸಿ ನೋಡಿ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X