For Quick Alerts
  ALLOW NOTIFICATIONS  
  For Daily Alerts

  ಸಾಯಿಪ್ರಕಾಶ್ ನಿರ್ದೇಶನದಲ್ಲಿ ಆದಿಚುಂಚನಗಿರಿ ಶ್ರೀ

  By Rajendra
  |

  ಆದಿಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಬೆಳ್ಳಿ ಪರದೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸ್ವಾಮೀಜಿಗಳ ಜೀವನ ಚರಿತ್ರೆ, ಆದಿಚುಂಚನಗಿರಿ ಮಠದ ಇತಿಹಾಸದ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ. ಚಿತ್ರಕ್ಕೆ 'ಆದಿ ಚುಂಚನಗಿರಿ ಸ್ಥಳ ಪುರಾಣ' ಎಂದು ನಾಮಕರಣ ಮಾಡಲಾಗಿದೆ.

  ಈ ಚಿತ್ರಕ್ಕೆ ಸಾಯಿ ಪ್ರಕಾಶ್ ಆಕ್ಷನ್, ಕಟ್ ಹೇಳಲಿದ್ದಾರೆ. ಚಿತ್ರದಲ್ಲಿ ಸ್ವತಃ ಬಾಲಗಂಗಾಧರ ಸ್ವಾಮೀಜಿಗಳು ಅಭಿನಯಿಸಲು ತಮ್ಮ ಒಪ್ಪಿಗೆಯನ್ನು ಸೂಚಿಸಿರುವುದು ವಿಶೇಷ. "ಬಹಳಷ್ಟು ಜನ ತಮ್ಮ ಬಳಿಗೆ ಬಂದು ಆದಷ್ಟು ಬೇಗ ಸಿನಿಮಾ ಮಾಡುವಂತೆ ವಿನಂತಿಸಿಕೊಂಡಿದ್ದರು. ನಾನು ಸಾಧಿಸುವುದು ಇನ್ನೂ ಸಾಕಷ್ಟಿದೆ ಎಂದು ಅವರಿಗೆ ಹೇಳಿದ್ದೆ. ಈಗ ಕಾಲ ಕೂಡಿಬಂದಿದೆ" ಎಂದು ಸ್ವಾಮೀಜಿಗಳು ಪ್ರತಿಕ್ರಿಯಿಸಿದ್ದಾರೆ.

  "ಆದಿಚುಂಚನಗಿರಿ ಮಠ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಮಠದ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ಬರದಂತೆ ಚಿತ್ರವನ್ನು ತೆರೆಗೆ ತರಬೇಕು ಎಂದು ನಿರ್ಮಾಪಕ ನರಸಿಂಹಯ್ಯ ಅವರಿಗೆ ಸೂಚಿಸಿರುವುದಾಗಿ" ಬಾಲಗಂಗಾಧರನಾಥ ಸ್ವಾಮೀಜಿಗಳು ವಿವರ ನೀಡಿದ್ದಾರೆ .

  ಆದರೆ ಸಾಯಿ ಪ್ರಕಾಶ್ ಪ್ರಕಾರ, ಚಿತ್ರದಲ್ಲಿ ಅಭಿನಯಿಸಲು ರೆಬಲ್ ಸ್ಟಾರ್ ಅಂಬರೀಷ್ ಸೇರಿದಂತೆ ಹಲವಾರು ಕಲಾವಿದರನ್ನು ಕೇಳಲಾಗಿದೆ ಎಂದಿದ್ದಾರೆ. ಅದರೆ ಹೀಗೆ ಮಾಡುವುದರಿಂದ ಇದೊಂದು ಒಕ್ಕಲಿಗರ ಚಿತ್ರ ಎಂಬ ಭಾವನೆ ಜನರಲ್ಲಿ ಮೂಡುವುದಿಲ್ಲವೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ.

  ಚಿತ್ರದಲ್ಲಿ ಮಠದ 2,000 ವರ್ಷಗಳ ಗತ ಇತಿಹಾಸವನ್ನು ತೋರಿಸಲಾಗುತ್ತದೆ ಎಂದಿದ್ದಾರೆ ಸಾಯಿಪ್ರಕಾಶ್. ಆದರೆ ರಾಜ್ಯ ರಾಜಕೀಯದಲ್ಲಿ ಮಠ ಸಾಕಷ್ಟು ಪ್ರಭಾವ ಬೀರಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹಾಗೂ ಸ್ವಾಮೀಜಿಗಳ ನಡುವಿನ ಸಂಬಂಧಗಳು ಚಿತ್ರದಲ್ಲಿ ತೋರಿಸಲಾಗುತ್ತದೆಯೇ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಎಲ್ಲಾ ರಾಜಕೀಯ ಅಂಶಗಳಿಂದ ಚಿತ್ರ ಹೊರತಾಗಿರಬೇಕು ಎಂಬುದು ಸ್ವಾಮೀಜಿಗಳ ಸೂಚನೆ ಎನ್ನಲಾಗಿದೆ.

  English summary
  Sri Balagangadharanatha Swamiji of the Adi Chunchanagiri Math is set to act in a film based on his life and the history of the math.The movei is titled Adi Chunchanagiri Sthala Purana. Which will be directing by Saiprakash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X