For Quick Alerts
  ALLOW NOTIFICATIONS  
  For Daily Alerts

  ಫೇಸ್‌ಬುಕ್‌ಗೆ ಲಗ್ಗೆ ಹಾಕಿದ ವೀರಾಸ್ವಾಮಿ ರವಿಚಂದ್ರನ್

  By Rajendra
  |

  ಕನ್ನಡ ಚಿತ್ರಗಳ ಕನಸುಗಾರ, ರಸಿಕ, ಒಂಟಿ ಸಲಗ, ಛಲ ಬಿಡದ ತ್ರಿವಿಕ್ರಮ, ಕ್ರೇಜಿಸ್ಟಾರ್, ದಿ ಶೋ ಮ್ಯಾನ್ ಖ್ಯಾತಿಯ ವೀರಾಸ್ವಾಮಿ ರವಿಚಂದ್ರನ್ ಫೇಸ್‌ಬುಕ್‌ಗೆ ಲಗ್ಗೆ ಹಾಕಿದ್ದಾರೆ. ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಈ ಮೂಲಕ ಅವರು ಇನ್ನಷ್ಟು ಹತ್ತಿರವಾಗಿದ್ದಾರೆ.

  ಫೇಸ್‌ಬುಕ್‌ನಲ್ಲಿ ರವಿಚಂದ್ರನ್ ಕನಸುಗಳು, ಅವರ ವೈಯಕ್ತಿಕ ವಿವರಗಳು, ಪ್ರಶಸ್ತಿ ಪುರಸ್ಕಾರಗಳನ್ನು ಕಾಣಬಹುದು. ತಮ್ಮ ಬಾಳ ಪಯಣದಲ್ಲಿ ಈಗಾಗಲೆ ಅರ್ಧ ಸೆಂಚುರಿ ಬಾರಿಸಿರುವ ಕ್ರೇಜಿಸ್ಟಾರ್ ತಮ್ಮ ಪುತ್ರ ಮನೋರಂಜನ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವ ಸಿದ್ಧತೆಯಲ್ಲೂ ಇದ್ದಾರೆ.

  ಹಿಂದಿ ಚಿತ್ರರಂಗಕ್ಕೆ ರಾಜ್ ಕಪೂರ್ ಹೇಗೋ ಕನ್ನಡಕ್ಕೆ ರವಿಚಂದ್ರನ್ ಹಾಗೆ. ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ನೀಡುರುವ ಕೊಡುಗೆಗಳಲ್ಲಿ ಹೊಸ ಅಲೆಯ ಸಂಗೀತ ಝಲಕ್ ಗಮನಾರ್ಹವಾದುದು. ಈಗಾಗಲೆ ಫೇಸ್‌ಬುಕ್‌ನಲ್ಲಿ ಕನ್ನಡದ ಹಲವಾರು ಸಿನೆಮಾ ತಾರೆಗಳಿದ್ದಾರೆ. ಇವರಲ್ಲಿ ಹೊಸ ಪೀಳಿಗೆಯ ತಾರೆಗಳೇ ಅಧಿಕ.

  ಫೇಸ್‌ಬುಕ್‌ಗೆ ಬರಲು ಹಳೆಯ ಪೀಳಿಗೆಯ ತಾರೆಗಳು ಯಾಕೋ ಏನೋ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಳೆಯ ಮತ್ತು ಹೊಸ ಪೀಳಿಗೆಯ ಕೊಂಡಿಯಂತಿರುವ ರವಿಚಂದ್ರನ್ ಫೇಸ್‌ಬುಕ್‌ಗೆ ಬಂದಿರುವುದು ಗಮನಾರ್ಹ ಬೆಳವಣಿಗೆ. ಫೇಸ್‌ಬುಕ್‌ನಲ್ಲಿ ರವಿಚಂದ್ರನ್ ಅವರನ್ನು ನೀವೂ ಬರಮಾಡಿಕೊಳ್ಳಿ. (ಒನ್‌ಇಂಡಿಯಾ ಕನ್ನಡ)

  English summary
  The dream merchant of Kannada cinema, trailblazer V Ravichandran opens Facebook account. Think cinema, breath cinema and sleep cinema is what V Ravichandran – he is what Raj Kapoor to Hindi cinema.
  Tuesday, March 13, 2012, 14:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X