»   » ಪ್ರಿಯಕರನ ಜೊತೆ ಡಯಾನಾ ಪ್ರೇಮ ವಿವಾಹ

ಪ್ರಿಯಕರನ ಜೊತೆ ಡಯಾನಾ ಪ್ರೇಮ ವಿವಾಹ

Posted By:
Subscribe to Filmibeat Kannada

ಪ್ರೇಮವಿವಾಹವನ್ನು ಒಪ್ಪುವ ಪೋಷಕರು ನಮ್ಮಲ್ಲಿ ವಿರಳ. 'ಡಯಾನ' ಕೂಡ ಪ್ರೇಮವಿವಾಹವಾದವಳು. ಈ ವಿವಾಹಕ್ಕೆ ಪ್ರಿಯಕರನ ಪೋಷಕರ ಸಮ್ಮತಿ ಇರಲಿಲ್ಲ. ಇದೇ ಕಾರಣಕ್ಕೆ ಮಗ ಇಲ್ಲದ ಸಮಯ ನೋಡಿ 'ಡಯಾನ'ಳನ್ನು ಅತ್ತೆಮಾವ ಮನೆಯಿಂದ ಹೊರದೂಡುತ್ತಾರೆ. ಮನೆಗೆ ಬಂದ ಮಗನಿಗೆ ವಿಷಯ ತಿಳಿದು ಡಯಾನಳ ಹುಡುಕಾಟಕ್ಕೆ ಹೊರಡುತ್ತಾನೆ.

ಅನ್ವೇಷಣೆಯ ಆತುರದಲ್ಲಿ ಈತನ ಕಾರು ವೇಗವಾಗಿ ಚಲಿಸುತ್ತಿದಾಗ ಪ್ರವಾಸಕ್ಕೆ ಹೊರಟ್ಟಿದ ಯುವಪ್ರೇಮಿಗಳ ಮೇಲೆ ಕೆಸರು ಹಾರುತ್ತದೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಹೊಡೆದಾಟವು ನಡೆಯುತ್ತದೆ. ಈ ಸನ್ನಿವೇಶವನ್ನು 'ಡಯಾನ' ಚಿತ್ರಕ್ಕಾಗಿ ನಿರ್ದೇಶಕ ಕವಿರಾಜೇಶ್ ಉಲ್ಲಾಳ ಗ್ರಾಮದಲ್ಲಿ ಚಿತ್ರಿಸಿಕೊಂಡರು. ಸೂರ್ಯಪ್ರಕಾಶ್ ಸಾಹಸ ನಿರ್ದೇಶನ ಮಾಡಿದರು. ನಾಯಕ ಧ್ರುವ ಹಾಗೂ ಸಹ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಪಲ್ಗೊಂಡಿದ್ದರು.

ಗೆದ್ದು ಬಾ ಇಂಡಿಯಾ ಎಂಬ ಘೋಷಣೆಯೊಂದಿಗೆ ಒಲಂಪಿಕ್ ಕ್ರೀಡಾಕೂಟದ ಕಥೆಯನ್ನಾಧರಿಸಿದ 'ಡಯಾನ ಚಿತ್ರಕ್ಕೆ ಕವಿರಾಜೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಐದು ಗೀತೆಗಳನ್ನೊಳಗೊಂಡಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಎಂ.ಆರ್.ಚೌಹಾಣ್ ಛಾಯಾಗ್ರಹಣ, ಶ್ರೀನಿವಾಸ ಪಿ ಬಾಬು ಸಂಕಲನ ಮತ್ತು ಥಾಮಸ್ ಅವರ ನಿರ್ಮಾಣನಿರ್ವಹಣೆ 'ಡಯಾನ' ಚಿತ್ರಕ್ಕಿದೆ. ಧ್ರುವ, ಸಂಗೀತಾ ಶೆಟ್ಟಿ, ಸನಾತನಿ, ಪ್ರಮೀಳಾಜೋಷಾಯಿ, ಡಾ.ಶರ್ಮ, ಚಿತ್ರಾಶೆಣೈ, ಡಿಂಗ್ರಿನಾಗರಾಜ್ ಮುಂತಾದವರು ಚಿತ್ರದ ತಾರಬಳಗದಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada