»   »  ಹೇಮಂತ್ ಹೆಗಡೆ 'ಹೌಸ್ ಫುಲ್' ಗೆ 2 ಹಾಡು ಬಾಕಿ

ಹೇಮಂತ್ ಹೆಗಡೆ 'ಹೌಸ್ ಫುಲ್' ಗೆ 2 ಹಾಡು ಬಾಕಿ

Subscribe to Filmibeat Kannada
Hemanth Hegde
ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳಲ್ಲಿ, ಜನಮನಸೂರೆಗೊಂಡ ಪಾತ್ರಗಳಲ್ಲಿ ಅಭಿನಯಿಸಿದ ಹೇಮಂತ್ ಹೆಗ್ಡೆ ಹಿರಿತೆರೆಯಲ್ಲೂ ಹೆಸರಾದವರು. ಪ್ರಸ್ತುತ ಅವರ ನಿರ್ದೇಶನದ 'ಹೌಸ್ ಫುಲ್ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

ನಿರ್ದೇಶನಕ್ಕೆ ಸೀಮಿತರಾಗದ ಹೇಮಂತ್ ಚಿತ್ರಕ್ಕೆ ಗೀತರಚನೆ ಕೂಡ ಮಾಡಿದ್ದಾರೆ. ಅವರು ಬರೆದಿರುವ 'ಹೃದಯ ಹೀಗೆ ಜಾರೋಕೆ ನೀ ಕಾರಣ ಎಂಬ ಗೀತೆ ಪ್ರವಾಸಿಗರ ಸ್ವರ್ಗವೆನಿಸಿರುವ ನಂದಿ ಬೆಟ್ಟ ಹಾಗೂ ಅಭಿಮಾನ್ ಸ್ಟೂಡಿಯೋದಲ್ಲಿ ನಿರ್ಮಾಣವಾಗಿರುವ ಸುಂದರ ಸೆಟ್‌ನಲ್ಲಿ ಚಿತ್ರೀಕರಣಗೊಂಡಿದೆ. ತ್ರಿಭುವನ್ ನೃತ್ಯ ಸಂಯೋಜಿಸಿದ ಈ ಗೀತೆಯ ಚಿತ್ರೀಕರಣದಲ್ಲಿ ದಿಗಂತ್ ಹಾಗೂ ಗಿರಿಜಾ ಓಕ್ ಭಾಗವಹಿಸಿದ್ದರು. ಇನ್ನೂ ಎರಡು ಹಾಡಿನ ಚಿತ್ರೀಕರಣ ಪೂರ್ಣವಾದರೆ, ಚಿತ್ರದ ಚಿತ್ರೀಕರಣ ಸಂಪೂರ್ಣವಾಗುತ್ತದೆ ಎಂದು ನಿರ್ಮಾಪಕರು ತಿಳಿಸಿದರೆ, ಒಂದು ಹಾಡನ್ನು ಗೋವಾದಲ್ಲಿ ಮತ್ತೊಂದು ಹಾಡನ್ನು ಇನೋವಿಟಿವ್ ಫಿಲಂ ಸಿಟಿಯಲ್ಲಿ ಚಿತ್ರೀಕರಿಸುವುದಾಗಿ ನಿರ್ದೇಶಕರು ನುಡಿದಿದ್ದಾರೆ.

ಮೇವರಿಕ್ ಸಂಸ್ಥೆಯ ಲಾಂಛನದಲ್ಲಿ ಡಾ:ಅನುಜ್ ಸಕ್ಸೆನಾ ನಿರ್ಮಿಸುತ್ತಿರುವ 'ಹೌಸ್‌ಪ್ಜುಲ್ 100% ಕಾಮಿಡಿ ಹಾಗೂ 0% ಬೋರು ಎಂಬ ಅಡಿಬರಹದೊಂದಿಗೆ ನಿರ್ಮಾಣವಾಗುತ್ತಿದೆ. ಮಗಿ ವೆಂಕಟೇಶ್ ಛಾಯಾಗ್ರಹಣ, ಕಿರಣ್ ಸಂಗೀತ, ಶ್ರೀಧರ್ ಹೆಗ್ಡೆ ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ದಿಗಂತ್, ಗಿರಿಜಾ ಓಕ್, ವಿಶಾಖಾ ಸಿಂಗ್, ಲೋಕನಾಥ್, ಹೇಮಂತ್‌ಹೆಗ್ಡೆ, ಮಿಲಿಂದ್ ಗುನಾಂಜಿ, ಅವತಾರ್ ಗಿಲ್, ರಮೇಶ್‌ಭಟ್, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ. ಕಿರಣ್‌ರಾವ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಾಪ್ಲಿನ್ ಪ್ರತಿಮೆ
ಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!
ಒತ್ತಿನೆಣಿಯಲ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆಅಡ್ಡಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada