Just In
Don't Miss!
- News
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೂ 17ರಂದು ಪಿವಿಆರ್ ನಲ್ಲಿ ಬೆಟ್ಟದ ಜೀವ ರಿಲೀಸ್
ಜೂನ್ 17 ರಂದು ಪಿವಿಆರ್ ಕೋರಮಂಗಳ, ಮಲ್ಲೇಶ್ವರಂನ ಐನೋಕ್ಸ್ ಮಂತ್ರಿ ಮಾಲ್ ಗೆ ಹೋದರೆ ಅಪ್ಪಟ ಕನ್ನಡ ಮಣ್ಣಿನ ಸದಭಿರುಚಿ ಚಿತ್ರವನ್ನು ಕಾಣಬಹುದು. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಹೋದರೆ ಥೇಟರ್ ನಲ್ಲಿ ಹೆಚ್ಚು ದಿನ ಚಿತ್ರ ಉಳಿಯುತ್ತದೆ ಎಂಬ ನಗ್ನ ಸತ್ಯವನ್ನು ಹೊರಗೆಡವಲೇ ಬೇಕು. ಚಿತ್ರ ಚೆನ್ನಾಗಿದ್ದರೂ ಥೇಟರ್ ನಲ್ಲಿ ಹೆಚ್ಚು ದಿನ ಇರಲಿಲ್ಲ ಎಂದು ಕೊರಗದೆ ಹೆಚ್ಚೆಚ್ಚು ಜನ ಥೇಟರ್ ಗೆ ಹೋಗಿ ಚಿತ್ರವನ್ನು ನೋಡಿ ಪ್ರೋತ್ಸಾಹ ನೀಡಿ ಎಂದು ಹ್ಯಾಟ್ರಿಕ್ ನಿರ್ದೇಶಕ ಪಿ ಶೇಷಾದ್ರಿ ಕೇಳಿಕೊಂಡಿದ್ದಾರೆ.
ಜ್ಞಾನ ಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರವನ್ನು ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ. ದತ್ತಣ್ಣ, ಸುಚೇಂದ್ರ ಪ್ರಸಾದ್, ರಾಮೇಶ್ವರಿ ವರ್ಮ, ಲಕ್ಷ್ಮಿ ಹೆಗಡೆ ಮುಂತಾದವರ ಮನೋಜ್ಞ ಅಭಿನಯವನ್ನು ಮೆಚ್ಚಲು ಒಮ್ಮೆಯಾದರೂ ಚಿತ್ರಮಂದಿರಕ್ಕೆ ಭೇಟಿ ನೀಡಿ ನಿಮ್ಮ ಅಭಿಪ್ರಾಯ ತಿಳಿಸಿ.
1943 ಪ್ರಕಟಗೊಂಡ ಕಾರಂತರ ಈ ಕೃತಿ ಆಧಾರ ಈ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪರಿಸರ ಚಿತ್ರ ಎಂದು ಪ್ರಶಸ್ತಿ ಸಿಕ್ಕಿದೆ. ಆದರೆ, ಇದರಲ್ಲಿ ಮಾನವ ಸಂಬಂಧಗಳು, ಜೀವನ ಪ್ರೀತಿ, ಹಿರಿ ತಲೆಗಳನ್ನು ಕಾಯುವುದು ಹೇಗೆ ಎಂಬ ಅಂಶಗಳು ಅದ್ಭುತವಾಗಿ ಹೆಣೆಯಲ್ಪಟ್ಟಿದೆ. ಸುಂದರ ಪರಿಸರವನ್ನು ಅನಂತ್ ಅರಸ್ ಸೆರೆಹಿಡಿದಿದ್ದಾರೆ. ದತ್ತಣ್ಣ ಅವರ ಅಭಿನಯದ ಶಕ್ತಿ ಕಾಣಲು ತಪ್ಪದೇ ಚಿತ್ರಮಂದಿರಕ್ಕೆ ಭೇಟಿ ಕೊಡಿ.