»   »  ಮಾತಿನ ಮನೆಯಲ್ಲಿ ಪಾಟೀಲ್ ಸಲ್ಯೂಟ್

ಮಾತಿನ ಮನೆಯಲ್ಲಿ ಪಾಟೀಲ್ ಸಲ್ಯೂಟ್

Subscribe to Filmibeat Kannada
B C Patil
ಶಾಸಕ ಬಿ.ಸಿ.ಪಾಟೀಲ್ ಅವರದು ಛಲ ಬಿಡದ ವ್ಯಕ್ತಿತ್ವ. ಅಂದುಕೊಂಡಿದ್ದನ್ನು ಸಾಧಿಸುವ ಸಾಧಕ ಕೂಡ. ಕಳೆದ ತಿಂಗಳ ಮೊದಲವಾರದಲ್ಲಿ ಅವರ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಅಲ್ಲಿಂದ ಆರಂಭವಾಯಿತು ನೋಡಿ ಚಿತ್ರದ ನಿಲ್ಲದ ಪಯಣ.

ಹಗಲು ರಾತ್ರಿಗಳನ್ನದೆ ಚಿತ್ರೀಕರಣ ನಡೆಸಿದ ನಿರ್ದೇಶಕರು ಕೇವಲ ಮೂವತ್ತು ದಿನಗಳಲ್ಲಿ ತಮ್ಮ ಚಿತ್ರದ ಚಿತ್ರೀಕರಣ ಪೂರೈಸಿದ್ದಾರೆ. ಬೆಂಗಳೂರು, ಬೆಳಗಾಂ ಹಾಗೂ ಹಿರೇಕೆರೂರುಗಳಲ್ಲಿ ಚಿತ್ರವನ್ನು ಸೆರೆಹಿಡಿದಿರುವ ಪಾಟೀಲರು ಪ್ರಸ್ತುತ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೊದಲ್ಲಿ ಚಿತ್ರಕ್ಕೆ ಮಾತುಗಳ ಜೋಡಣೆ ಪ್ರಕ್ರಿಯೆ ಆರಂಭಿಸಿದ್ದಾರೆ. ಮಿಂಚಿನ ಓಟದಂತೆ ಸಾಗುತ್ತಿರುವ 'ಸೆಲ್ಯೂಟ್ ಚಿತ್ರವನ್ನು ಸದ್ಯದಲ್ಲೇ ರೀರೆಕಾರ್ಡಿಂಗ್ ಹಾಗೂ ವಿಶೇಷ ತಂತ್ರಜ್ಞಾನದಿಂದ ಸಿಂಗರಿಸಿ ಕನ್ನಡ ಚಿತ್ರರಸಿಕರ ಮಡಿಲಿಗೆ ಹಾಕುತ್ತೇನೆ ಎಂದು ಚಿತ್ರದ ನಾಯಕರೂ ಆಗಿರುವ ನಿರ್ದೇಶಕ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಓಂ ಶಕ್ತಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಿ.ಸಿ.ಪಾಟೀಲ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ, ನಿರಂಜನ ಬಾಬು ಛಾಯಾಗ್ರಹಣ, ರವಿವರ್ಮ ಸಾಹಸ, ಕೆ.ವಿ.ಮಂಜುನಾಥ ರೆಡ್ಡಿ, ಶಂಕರ್ ಸಹ ನಿರ್ದೇಶನವಿದೆ. ಬಿ.ಸಿ.ಪಾಟೀಲ್, ಅಶ್ವಿನಿ, ಬಿ.ವಿ.ರಾಧ, ಶೋಭರಾಜ್, ಪ್ರಕಾಶ್, ಸತ್ಯಜಿತ್, ಹರೀಶ್ ರಾಯ್, ಅಶೋಕ್ ಖೇಣಿ, ಲಕ್ಷ್ಮಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನೈಜ ಘಟನೆ ಆಧಾರಿತ ಪಾಟೀಲರ ಸಲ್ಯೂಟ್
ಚಿತ್ರೀಕರಣ ಮುಗಿಸಿಕೊಂಡ ಪಾಟೀಲರ ಸೆಲ್ಯೂಟ್
ನಿರ್ಮಾಪಕ ಸಂಘದ ಫತ್ವಾಗೆ ಪಾಟೀಲ್ ವಿರೋಧ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada