»   » ಫೈವ್ ಈಡಿಯಟ್ಸ್ ಇವರು ಅಪ್ಪಟ ಕನ್ನಡಿಗರು

ಫೈವ್ ಈಡಿಯಟ್ಸ್ ಇವರು ಅಪ್ಪಟ ಕನ್ನಡಿಗರು

Posted By:
Subscribe to Filmibeat Kannada

ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಮಾ.ಆನಂದ್ ಹಲವಾರು ಚಿತ್ರಗಳಲ್ಲಿ ಚೂಟಿ, ಘಾಟಿ ಹುಡುಗನಾಗಿ ಅಭಿನಯಿಸಿ ಗಮನ ಸೆಳೆದವರು. ಇತ್ತೀಚೆಗೆ ಎಸ್.ಎಸ್.ಎಲ್.ಸಿ. ನನ್ಮಕ್ಕಳು ಎಂಬ ಹಾಸ್ಯ ಧಾರಾವಾಹಿಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಅದರಲ್ಲೂ ಸೈ ಎನಿಸಿಕೊಂಡರು. ಈಗ ಮತ್ತೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಚಲನಚಿತ್ರವೊಂದಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

'5 ಈಡಿಯಟ್ಸ್ 'ಎಂಬ ಹೆಸರಿನ ಈ ಚಿತ್ರದ ಮುಹೂರ್ತ ಕಳೆದ ಶುಕ್ರವಾರ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಸಿದ್ಧಗಂಗಾ ಕಲ್ಯಾಣ ಮಂಟಪದಲ್ಲಿ ನಡೆಯಿತು. ವಿಶೇಷ ಏನೆಂದರೆ ಇತ್ತೀಚೆಗೆ ಆನಂದ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದು ಕೂಡ ಇದೇ ಕಲ್ಯಾಣ ಮಂಟಪದಲ್ಲೇ. ಚಿತ್ರದ ಪ್ರಥಮ ದೃಶ್ಯಕ್ಕೆ ಹೆಚ್.ಎಂ. ಕೃಷ್ಣಮೂರ್ತಿ ಆರಂಭ ಫಲಕ ತೋರಿಸಿದರೆ, ಐ.ಎ.ಎಸ್. ಅಧಿಕಾರಿ ಕೆ. ಶಿವರಾಂ ಕ್ಯಾಮರಾ ಪ್ರಾರಂಭಿಸಿದರು.

ಫ್ರೆಂಡ್ಸ್ ಚಿತ್ರದ ಜೋಡಿ ವಾಸು-ಆನಂದ್ ಈ ಚಿತ್ರದಲ್ಲಿ ಮತ್ತೆ ಸ್ನೇಹಿತರಾಗಿದ್ದು, ಪೆಟ್ರೋಲ್ ಪ್ರಸನ್ನ, ನವೀನ್ ಕೃಷ್ಣ ಹಾಗೂ ನಮ್ರತ ಹೆಗ್ಡೆ ಉಳಿದ ಮೂವರು ಈಡಿಯಟ್ಸ್ ಆಗಿ ಅಭಿನಯಿಸಿದ್ದಾರೆ. ಹಿಂದಿಯ 3 ಈಡಿಯಟ್ಸ್ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಸಂಪೂರ್ಣ ಹೊಸಥರದ ಹಾಸ್ಯ ಕಥೆ ಎನ್ನುತ್ತಾರೆ ನಿರ್ದೇಶಕ ಆನಂದ.

ಶ್ವೇತ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಕೇಶ್ ಮೂರ್ತಿ, ಮೋಹನ್ ಹಾಗೂ ಶಿವರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ದೇವ ಸಂಗೀತ್ ಸಂಯೋಜನೆ ಮಾಡಿದ್ದು, ರೇಣು ಅವರ ಛಾಯಾಗ್ರಹಣ, ವಿ.ಮನೋಹರ, ಕೆ. ಕಲ್ಯಾಣ್‌ರ ಸಾಹಿತ್ಯ ರಚನೆ ಇದೆ. ಹರ್ಷಿತ ಪೂರ್ಣಚ್ಚ, ನವ್ಯಶ್ರೀ, ಕರಿಬಸವಯ್ಯ, ಚಿದಾನಂದ, ದಯಾನಂದ, ಟನ್ನಿಸ್‌ಕೃಷ್ಣ, ಬ್ಯಾಂಕ್ ಜನಾರ್ಧನ ಹೀಗೆ ಹಾಸ್ಯ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada