For Quick Alerts
  ALLOW NOTIFICATIONS  
  For Daily Alerts

  ಹೆಂಡ್ತೀನ ಚೆನ್ನಾಗಿ ನೋಡಿಕೊಳ್ಳಲು ದರ್ಶನ್‌ಗೆ ಬುದ್ಧಿವಾದ

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ದಂಪತಿಗಳಿಗೆ ನ್ಯಾಯಮೂರ್ತಿ ಬಿ ವಿ ಪಿಂಟೋ ಗುರುವಾರ (ಅ.13) ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಸರ್ಕಾರಿ ಅಭಿಯೋಜಕ ಚಂದ್ರಮೌಳಿ ಅವರನ್ನು ಕೋರ್ಟ್‌ನಲ್ಲಿ ಭೇಟಿ ಮಾಡಿದ ಬಳಿಕ ಪಿಂಟೋರ ಕಚೇರಿಗೆ ದರ್ಶನ್ ಇಂದು ಭೇಟಿ ನೀಡಿದರು.

  ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ದರ್ಶನ್‌ಗೆ ನಾಲ್ಕು ಬುದ್ಧಿಮಾತುಗಳನ್ನು ಹೇಳಿದರು. ವಿಜಯಲಕ್ಷ್ಮಿ ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಟನಾವೃತ್ತಿ ಜವಾಬ್ದಾರಿಯುತವಾದದ್ದು. ನಿಮ್ಮನ್ನು ಎಲ್ಲರೂ ಅನುಕರಿಸುತ್ತಾರೆ. ಸಮಾಜಕ್ಕೆ ಮಾದರಿಯಾಗಿ ನಡೆದುಕೊಳ್ಳಿ ಎಂದು ಕೌನ್ಸೆಲಿಂಗ್‌ನಲ್ಲಿ ಹೇಳಿ ಕಳುಹಿಸಿದ್ದಾರೆ.

  ಈ ಸಂದರ್ಭದಲ್ಲಿ ದರ್ಶನ್‌ಗೆ ಎರಡು ಹೆಚ್ಚುವರಿ ಷರತ್ತುಗಳನ್ನು ನ್ಯಾಯಮೂರ್ತಿಗಳು ವಿಧಿಸಿದರು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ದರ್ಶನ್ ಹಾಗೂ ಸಂಬಂಧಿಕರಾಗಲಿ ಪ್ರಭಾವ ಬೀರಬಾರದು ಎಂದು ಹೇಳಿದ್ದಾರೆ. ನಿಮ್ಮ ನಡವಳಿಕೆ ಸಮಾಜಕ್ಕೆ ಮಾದರಿಯಾಗಬೇಕು. ಅದನ್ನು ಸರಿಪಡಿಸಿಕೊಳ್ಳಿ ಎಂದು ಹಿರಿಯ ವ್ಯಕ್ತಿಯಾಗಿ ಸಲಹೆ ನೀಡುತ್ತಿರುವುದಾಗಿ ತಿಳಿಹೇಳಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Kannada actor Darshan, who was granted the conditional bail by the Karnataka High Court, met justice BV Pinto in his office on Thursday (Oct 13). The High Court judge has tried to convince him of his responsibility as an actor. He also advised Darshan to take good care of his wife Vijayalakshmi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X