»   »  ಸ್ಟೇಟ್ಸ್ ಚಿತ್ರಮಂದಿರಕ್ಕೆ ಹೊಸ ಹೆಸರು ಭೂಮಿಕಾ

ಸ್ಟೇಟ್ಸ್ ಚಿತ್ರಮಂದಿರಕ್ಕೆ ಹೊಸ ಹೆಸರು ಭೂಮಿಕಾ

Subscribe to Filmibeat Kannada

ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಸ್ಟೇಟ್ಸ್ ಚಿತ್ರಮಂದಿರ ನವೀಕರಣಗೊಂಡಿದೆ. ಜೀರ್ಣೋದ್ಧಾರವಾಗಿರುವ ಸ್ಟೇಟ್ಸ್ ಚಿತ್ರಮಂದಿರಕ್ಕೆ ಈಗ 'ಭೂಮಿಕಾ' ಎಂದು ಹೆಸರಿಡಲಾಗಿದೆ. ಈ ಚಿತ್ರಮಂದಿರ ಹೆಚ್ಚಾಗಿ 'ದೇವರ ಚಿತ್ರಗಳಿಗೆ' ಮೀಸಲಾಗಿದ್ದದ್ದು ವಿಶೇಷ. ಈಗ ಹೊಸ ವಧುವಿನಂತೆ ಭೂಮಿಕಾ ಅಲಂಕೃತವಾಗಿದೆ.

1942 ರಲ್ಲಿ ಈ ಚಿತ್ರಮಂದಿರ ನಿರ್ಮಾಣವಾಗಿತ್ತು. ಇಂದಿಗೂ ಮರೆಯಲಾಗದ ಡಾ.ರಾಜ್ ಅಭಿನಯದ 'ಬಂಗಾರದ ಮನುಷ್ಯ' ಸತತ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ್ದು ಈ ಚಿತ್ರಮಂದಿರದಲ್ಲೇ. ಸ್ವಾತಂತ್ರ್ಯ ಪೂರ್ವದ ಈ ಚಿತ್ರಮಂದಿರಕ್ಕೆ ಹೊಸ ರೂಪುರೇಷೆ ಕೊಟ್ಟು ಸುಸಜ್ಜಿತ ಚಿತ್ರಮಂದಿರವನ್ನಗಿ ಪರಿವರ್ತಿಸಿದ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಬೇಕು.

ಬಾಲ್ಕನಿ ಸೇರಿದಂತೆ ಚಿತ್ರಮಂದಿರದಲ್ಲಿ 900ಕ್ಕೂ ಹೆಚ್ಚೆ ಆಸಗಳ ವ್ಯವಸ್ಥೆಯಿದೆ. ಕಡಿಮೆ ಬಾಡಿಗೆ ಇದ್ದರೂ ಪರ್ವಾಗಿಲ್ಲ ಒಟ್ಟಿನಲ್ಲಿ ಕನ್ನಡ ಚಿತ್ರ ನಿರ್ಮಾಪಕರಿಗೆ ಅನುಕೂಲವಾಗಬೇಕು ಎನ್ನುತ್ತಾರೆ ಚಿತ್ರಮಂದಿರದ ಮಾಲೀಕ ತಲ್ಲಂ ನಂಜುಂಡ ಶೆಟ್ಟಿ. ರಾಕ್ ಲೈನ್ ಬ್ಯಾನರ ನಲ್ಲಿ ಬಿಡುಗಡೆಗೊಳ್ಳುತ್ತಿರುವ ದರ್ಶನ್ ಅಭಿನಯದ ಅದ್ದೂರಿ ಚಿತ್ರ 'ಯೋಧ' ಶುಕ್ರವಾರದಂದು (ಜೂ 19) ಭೂಮಿಕಾದಲ್ಲಿ ತೆರೆ ಕಾಣಲಿದೆ.

ಸೆಕ್ಸ್ ಬಾಂಬ್ ಶಕೀಲಾ ನಟನೆಯ '16 to 60' ಎಂಬ ಚಿತ್ರ 50 ದಿನಗಳ ಪ್ರದರ್ಶನ ಕಂಡಿದೆ. ರು.2 ಕೋಟಿ ವೆಚ್ಚದಲ್ಲಿ ಚಿತ್ರಮಂದಿರವನ್ನು ನವೀಕರಿಸಲಾಗಿದೆ. ಟಿಕೆಟ್ ದರವನ್ನು ಬಾಲ್ಕನಿಗೆ ರು.50 ಹಾಗೂ ಸೆಕೆಂಡ್ ಕ್ಲಾಸ್ ಗೆ ರು.40ನ್ನು ನಿಗದಿಪಡಿಸಲಾಗಿದೆ. ಕೆ ಜಿ ರಸ್ತೆಯಲ್ಲಿ ಚಿತ್ರಮಂದಿರಗಳು ದೊರೆಯದೆ ಒದ್ದಾಡುತ್ತಿದ್ದ ನಿರ್ಮಾಪಕರಿಗೆ ಒಂಚೂರು ನಿರಾಳರಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada