»   » ಬಾಕ್ಸಾಫೀಸಲ್ಲಿ ಈ ವಾರ ಎರಡು ಚಿತ್ರಗಳ ಸೆಣೆಸಾಟ

ಬಾಕ್ಸಾಫೀಸಲ್ಲಿ ಈ ವಾರ ಎರಡು ಚಿತ್ರಗಳ ಸೆಣೆಸಾಟ

Posted By:
Subscribe to Filmibeat Kannada

ಈ ವಾರ ಬಾಕ್ಸಾಫೀಸಸ್ ಸ್ಪರ್ಧೆಯಲ್ಲಿ ಎರಡು ಕನ್ನಡ ಚಿತ್ರಗಳು ಸೆಣೆಸಲಿವೆ. ಪ್ರಕಾಶ್ ರೈ ಚೊಚ್ಚನ ನಿರ್ದೇಶನದ 'ನಾನು ನನ್ನ ಕನಸು' ಹಾಗೂ ರಮೇಶ್ ಅರವಿಂದ್ ಅಭಿನಯದ 'ಪ್ರೀತಿಯಿಂದ ರಮೇಶ್' ಚಿತ್ರಗಳು ತೆರೆಕಾಣುತ್ತಿವೆ. ಒಂದು ಚಿತ್ರ ರೀಮೇಕ್ ಮತ್ತೊಂದು ಚಿತ್ರ ಸ್ವಮೇಕ್ ಎಂಬುದು ವಿಶೇಷ.

ನಾನು ನನ್ನ ಕನಸು
ಡ್ಯುಯೆಟ್ ಮೂವೀಸ್ ಹಾಗೂ ಮೀಡಿಯಾ ಹೌಸ್ ಸ್ಟೂಡಿಯೋ ಲಾಂಛನದಲ್ಲಿ ಪ್ರಕಾಶ್ ರೈ, ಬಿ.ಸುರೇಶ್ ಮತ್ತು ಶೈಲಜಾನಾಗ್ ನಿರ್ಮಿಸಿರುವ ಚಿತ್ರ 'ನಾನು ನನ್ನ ಕನಸು'. ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕದ ಜೀವನದಿ ಕಾವೇರಿಯ ಉಗಮ ಸ್ಥಳವಾದ ಭಾಗಮಂಡಲ, ಚಿಕ್ಕಮಗಳೂರಿನ ಬಾಬಬುಡನಗಿರಿ, ತೆಳಗೂರು ಟೀ ಎಸ್ಟೆಟ್, ಸಕಲೇಶಪುರ, ಶನಿವಾರಸಂತೆ ಹಾಗೂ ಮಡಿಕೇರಿಯಂತ ಸೊಬಗಿನ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ಹಂಸಲೇಖ ಅವರ ಗೀತರಚನೆ ಹಾಗೂ ಸಂಗೀತವಿರುವ ಈ ಚಿತ್ರಕ್ಕೆ ಅನಂತ್ ಅರಸ್ ಛಾಯಾಗ್ರಹಣವಿದೆ. ಪ್ರಕಾಶ್ ರೈ ನಿರ್ದೇಶನದ 'ನಾನು ನನ್ನ ಕನಸು' ಚಿತ್ರಕ್ಕೆ ಜೋನಿಹರ್ಷ ಸಂಕಲನ, ದಿನೇಶ್ ಮಂಗಳೂರು ಕಲೆ, ಮದನ್ ಹರಿಣಿ ನೃತ್ಯ ಹಾಗೂ ಗಂಗು ಅವರ ನಿರ್ಮಾಣ ನಿರ್ವಹಣೆಯಿದೆ. ಪ್ರಕಾಶ್ ರೈ, ಅಮೂಲ್ಯ, ಅಚ್ಯುತಕುಮಾರ್, ವೀಣಾಸುಂದರ್, ಸಿತಾರ, ರಾಜೇಶ್, ಸಿಹಿಕಹಿಚಂದ್ರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಮೇಶ್ ಅರವಿಂದ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರೀತಿಯಿಂದ ರಮೇಶ್
ಶಾಂತ ಎಂಟರ್ ಪ್ರೈಸಸ್ ಲಾಂಛನದಲ್ಲಿ ರವಿಕುಮಾರ್ ಅವರು ನಿರ್ಮಿಸಿರುವ 'ಪ್ರೀತಿಯಿಂದ ರಮೇಶ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಇಂಟರ್‌ನೆಟ್ ಯುಗ. ಮನುಷ್ಯನಿಗೆ ಬೇಕಾದ ಯಾವುದೇ ಮಾಹಿತಿ ನೀಡುವಲ್ಲಿ ಅಂತರ್ಜಾಲ ಸಹಾಯಕಾರಿ. ನಾಯಕ ರಮೇಶ್ ಈ ಚಿತ್ರದಲ್ಲಿ ಸಾಫ್ಟ್ ವೇರ್ ಉದ್ಯೋಗಿ. ನಾಯಕ ತನ್ನ ಪ್ರೀತಿಯನ್ನು ಅಂತರ್ಜಾಲದ ಮೂಲಕ ಹುಡುಕುವುದೇ ಚಿತ್ರದ ಕಥಾ ಹಂದರ.

ಹಲವು ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಗುಣಕುಮಾರ್ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಎ.ಸಿ.ಮಹೇಂದರ್ ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತ, ರವಿ ಸಂಕಲನ, ವಿಜಯ್‌ಪ್ರಸಾದ್ ಸಂಭಾಷಣೆ, ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್ ಹಾಗೂ ಶಿವನಂಜೇಗೌಡರ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್, ರಮನೀತೋ ಚೌಧರಿ, ಅನಂತನಾಗ್, ಸುಮಾಗುಹಾ, ಕಿರಣ್ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada