»   » ಉಪೇಂದ್ರ ಚಿತ್ರಕ್ಕೆ ಗ್ಲಾಮರ್ ಗೊಂಬೆ ನಯನತಾರಾ

ಉಪೇಂದ್ರ ಚಿತ್ರಕ್ಕೆ ಗ್ಲಾಮರ್ ಗೊಂಬೆ ನಯನತಾರಾ

Subscribe to Filmibeat Kannada

ದಕ್ಷಿಣದ ಗ್ಲಾಮರ್ ಗೊಂಬೆ ನಯನತಾರಾ ಕಡೆಗೂ ಕನ್ನಡ ಚಿತ್ರರಂಗಕ್ಕೆ ಅಡಿಯಿಡಲು ಮನಸ್ಸು ಮಾಡಿದ್ದಾರೆ. ನಯನತಾರಾ ನಟಿಸಲಿರುವುದು ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ. ಇನ್ನ್ನೊ ಹೆಸರಿಡದ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಉಪೇಂದ್ರ ಹೊತ್ತಿದ್ದಾರೆ.

ಉಪೇಂದ್ರ ಚಿತ್ರದ ನಿರ್ಮಾಪಕರು ಧೀರ ರಾಕ್ ಲೈನ್ ವೆಂಕಟೇಶ್. ಹಾಗಿದ್ದರೆ ಇದು ಉಪೇಂದ್ರ ಅವರ 'ಸೂಪರ್' ಚಿಹ್ನೆಯ ಚಿತ್ರವೇ ತಾನೆ? ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳಲಿದೆ. ಈ ಹಿಂದೆ ನಯನತಾರಾ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 'ಕೀಚಕ' ಚಿತ್ರದಲ್ಲಿ ನಟಿಸಲು ಒಪ್ಪಿ ಬಳಿಕ ತಿರಸ್ಕರಿಸಿದ್ದರು. ಚಿತ್ರದಲ್ಲಿರುವ ಈಜುಡುಗೆ ದೃಶ್ಯವೇ ನಯನತಾರಾ ತಕರಾರಿಗೆ ಕಾರಣವಾಗಿತ್ತು.

'ಕೀಚಕ'ನನ್ನು ತಿರಸ್ಕರಿಸಿದ ನಯನತಾರಾ ಕಡೆಗೆ ರಿಯಲ್ ಸ್ಟಾರ್ ನನ್ನು ಪುರಸ್ಕರಿಸಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಪ್ರೇಕ್ಷಕರ ಮನವನ್ನು ನಯನತಾರಾ ಈಗಾಗಲೇ ಗೆದ್ದಿದ್ದಾರೆ. ಕನ್ನಡ ಪ್ರೇಕ್ಷಕರ ನಾಡಿಮಿಡಿತ ಗೆಲ್ಲುತ್ತಾರೋ ಇಲ್ಲವೊ ಎಂಬುದನ್ನು ಕಾದು ನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada