twitter
    For Quick Alerts
    ALLOW NOTIFICATIONS  
    For Daily Alerts

    ಪರಭಾಷಾ ಸಿನ್ಮಾಕ್ಕೆ ಕಬಾಬ್, ನಮ್ಮ ಸಿನ್ಮಾಕ್ಕೆ ಚಿತ್ರಾನ್ನ

    By * ಅಮರನಾಥ್ ಶಿವಶಂಕರ್, ಬೆಂಗಳೂರು
    |

    ಕರ್ನಾಟಕದಲ್ಲಿ ಹಬ್ಬ ಹರಿದಿನಗಳು ಬಂದಾಗಲೆಲ್ಲಾ ಅದ್ಯಾಕೋ ಕನ್ನಡ ಚಿತ್ರರಸಿಕರು ಹ್ಯಾಪಮೋರೆ ಹಾಕಿಕೊಂಡು ಕೂರುವ ಪರಿಸ್ಥಿತಿ ನಿರ್ಮಿತವಾಗಿದೆ.

    2011ರಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಯಾವೊಂದು ದೊಡ್ಡ ಬಡ್ಜೆಟ್ ಅಥವಾ ಹೆಚ್ಚು ನಿರೀಕ್ಷೆಯಲ್ಲಿದ್ದ ಕನ್ನಡ ಚಿತ್ರ ಬಿಡುಗಡೆ ಆಗಲಿಲ್ಲ ಅನ್ನುವುದು ಈ ಹಿಂದೆ ಆಗಲೇ ಮಾತನಾಡಿದ್ದೆವು. ( ಕನ್ನಡ ಚಿತ್ರರಂಗದ ಬೇಲಿ ಎದ್ದು ಹೊಲ ಮೇಯುತ್ತಿದೆ)

    ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮಿಳಿನ "ನನ್ಬನ್ ಮತ್ತು ವೇಟೈ" ಮತ್ತು ತೆಲುಗಿನ "ಬಾಡಿಗಾರ್ಡ್ ಮತ್ತೆ ಬ್ಯುಸಿನೆಸ್ಮನ್" ಚಿತ್ರಗಳು ಬಿಡುಗಡೆ ಆಗುತ್ತಿವೆ.ಇದೇ ಸಮಯದಲ್ಲಿ ಕನ್ನಡದ "ಸಿದ್ಲಿಂಗು" ಮತ್ತೆ "ಕೋ ಕೋ" ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಅಂತ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ ಅನ್ನುವ ವಿಷಯ ಇವತ್ತಿನ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.

    ಚಿತ್ರಮಂದಿರಗಳು ಸಿಗದಿದ್ದರೆ, ಕಾನೂನು ಸಮರಕ್ಕೂ ನಾವು ಸಿದ್ಧ ಅನ್ನುವ ವಿಷಯವನ್ನು ಸಿದ್ಲಿಂಗು ಚಿತ್ರದ ನಿರ್ಮಾಪಕ ಸಿದ್ದರಾಜು ಹೇಳಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗುವುದಕ್ಕೆ ಕಾನೂನು ಸಮರ ಸಾರಬೇಕಿರೋದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ.

    ಪ್ರತಿಯೊಂದು ಹಬ್ಬದ ಸಯಮದಲ್ಲೂ ತೆಲುಗು, ತಮಿಳು ಮತ್ತು ಹಿಂದಿಯ ದೊಡ್ಡ ಬಡ್ಜೆಟ್ ಚಿತ್ರಗಳು ಬಿಡುಗಡೆ ಆಗುತ್ತಲೇ ಬಂದಿದೆ.ಆದರೆ ಕಾಕತಾಳಿಯವೋ ಎನೋ ಈ ಸಮಯದಲ್ಲಿ ದೊಡ್ಡ ಹೆಸರುಳ್ಳ ಚಿತ್ರ ತಾಯಾರಕರ ಯಾವ ಕನ್ನಡ ಚಿತ್ರಗಳು ಬಿಡುಗಡೆಗೆ ತಲೆ ಎತ್ತಿ ನಿಲ್ಲುವುದಿಲ್ಲ.

    ಹಬ್ಬಗಳಿಗಿಂತ ವಾರಗಟ್ಟಲ್ಲೆ ಮುಂಚೆಯೇ ಕನ್ನಡದ ದೊಡ್ಡ ಬಡ್ಜೆಟ್ ಚಿತ್ರಗಳು ಬಿಡುಗಡೆ ಆಗುತ್ತವೆ ಅಥವಾ ಹಬ್ಬಗಳ ಅಬ್ಬರ ಮುಗಿದ ಮೇಲೆ ಬಿಡುಗಡೆಗೆ ಸಿದ್ದವಾಗುತ್ತದೆ. ಇದ್ಯಾಕೋ ಪರಭಾಷೆ ಚಿತ್ರ ವಿತರಕರು ಮತ್ತು ನಿರ್ಮಾಪಕರ ಜೊತೆ ಮಾಡಿಕೊಂಡಿರುವ ಭಯಂಕರ ಅಡ್ಜಸ್ಟುಮೆಂಟ್ ಅಂತ ಅನ್ನಿಸುತ್ತದೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ಸಮಿತಿಯನ್ನು ನೇಮಿಸಿ ಪರಭಾಷೆ ಚಿತ್ರಗಳ ಬಿಡುಗಡೆಯ ವಿಷಯದಲ್ಲಿ ಗಮನ ಹರಿಸುತ್ತದೆಯಂತೆ. ಆದರೆ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಪ್ರಿಂಟುಗಳನ್ನು ಬಿಡುವುದಿಲ್ಲ ಅನ್ನುವ ಹೇಳಿಕೆ ಒಂದು ಇಂಗ್ಲಿಶ್ ಪೇಪರ್ ನಲ್ಲಿ ಬಂದಿದೆ.

    ಆಡಳಿತಾತ್ಮಕವಾಗಿ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳು ಕರ್ನಾಟಕದಲ್ಲೇ ಇದ್ದರೂ ಕನ್ನಡ ಚಿತ್ರರಂಗ ಈ ಜಿಲ್ಲೆಗಳನ್ನು ಆಗಲೇ ಆಂದ್ರಕ್ಕೇ ಧಾರೆ ಎರೆದಂತೆ ಹೇಳುವ ಮಾತು ಅಸಹ್ಯಕರವಾಗಿದೆ. ಹಲವಾರು ಬಾರಿ ಕರ್ನಾಟಕದಲ್ಲಿ ಪರಭಾಷೆಯ ಚಿತ್ರಗಳ ವಿತರಣೆಯ ಹಕ್ಕನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಉನ್ನತ ಸ್ಥಾನದಲ್ಲಿರುವ ಹಲವರು ಪಡೆದಿರುವುದು ಬಹಿರಂಗವಾಗಿವೆ.

    ಇದರ ಜೊತೆಗೆ ಚಿತ್ರರಂಗದ ಒಳಗಿನ ಕಾಣದ ಕೈಗಳ ಕೈವಾಡವಿಲ್ಲದಿದ್ದರೆ ಪರಭಾಷೆಯ ಚಿತ್ರಗಳಿಗೆ ಈ ರೀತಿಯ ವ್ಯವಸ್ಥೆ ಸಿಗಲಸಾಧ್ಯ ಅನ್ನುವ ಆಲೋಚನೆ ಬರುತ್ತದೆ

    ಡಬ್ ಮಾಡಲು ಯಾಕೆ ಬಿಡಲ್ಲ? : ಪರಭಾಷೆಯ ಚಿತ್ರಗಳು ಅದೇ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದರೂ ಒಂದು ಕಡೆ ಇದಕ್ಕೆ ಕಡಿವಾಣವೂ ಹಾಕದೆ ಮತ್ತೊಂದು ಕಡೆ ಇದನ್ನು ಕನ್ನಡಕ್ಕೆ ಡಬ್ ಮಾಡಿಯೂ ನೋಡದಂತೆ ವರ್ತಿಸುವುದು ಕನ್ನಡಾಭಿಮಾನವೇ? ಡಬ್ಬಿಂಗ್ ಬಂದ್ರೆ ಕನ್ನಡ ಸಂಸ್ಕೃತಿ ನಶಿಸಿಹೋಗುತ್ತದೆ.

    ಕನ್ನಡ ಚಿತ್ರರಂಗ ಮುಳುಗಿಹೋಗುತ್ತದೆ ಅನ್ನುವ ಗುಮ್ಮ ತೋರಿಸುವ ಮಂದಿ, ಕನ್ನಡ ಚಿತ್ರರಸಿಕರ ಜೊತೆ ಭಾವನಾತ್ಮಕ ಒಡಂಬಡಿಕೆ ಮಾಡಿಕೊಂಡು ದಬ್ಬಿಂಗ್ ನಿಷೇಧಿಸಲಾಗಿದೆ ಅಂತ ಹೇಳುವ ಗಣ್ಯರು ಅದ್ಯಾಕೊ ಪರಭಾಷೆ ಚಿತ್ರಗಳು ಈ ಪಾಟಿ ಬಿಡುಗಡೆ ಆಗುತ್ತಿದ್ದರು ಬಾಯಿಬಿಡುತ್ತಿಲ್ಲ.

    ಪರಭಾಷೆಯ ಒಂದು ಸೀರಿಯಲ್ ಕನ್ನಡಕ್ಕೆ ಡಬ್ ಆಗಿದೆ ಅನ್ನುವ ಸುದ್ದಿಯನಿಟ್ಟುಕೊಂಡು ಖಾಸಗಿ ವಾಹಿನಿಯ ಪೀಠೋಪಕರಣಗಳನ್ನು ದ್ವಂಸ ಮಾಡಿ ತಂಡವು ಈ ಸಮಯದಲ್ಲಿ ಮೌನವಹಿಸಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

    ಆದರೆ ಪಾಪ ಕನ್ನಡ ಚಿತ್ರರಸಿಕರು ಹಬ್ಬಗಳ ಸಮಯದಲ್ಲಿ, ಬೇಸಿಗೆ, ಕ್ರಿಸ್ಮಸ್ ಮತ್ತಿತರ ರಜೆಗಳ ಸಮಯದಲ್ಲಿ ಒಳ್ಳೆಯ ಕನ್ನಡ ಚಿತ್ರಗಳು ಬರಲಿ ಅನ್ನುವ ನಿರೀಕ್ಷೆಯಲ್ಲೇ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ.

    English summary
    Non Kannada Movies release during the festival season causing lot of problem to Kannada film industry. Kannada original movies are not getting enough theater for release on time. Karnataka film chamber of commerce is keeping mum on the issue. Cine Distributors are ruling the industry breaking all rules reports citizen journalist Amarnath Shivashankar.
    Friday, January 13, 2012, 12:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X