»   »  'ಹುಚ್ಚಿ' ಬಗ್ಗೆ ಚುಚ್ಚಿ ಮಾತನಾಡಿದ ಪೂಜಾಗಾಂಧಿ

'ಹುಚ್ಚಿ' ಬಗ್ಗೆ ಚುಚ್ಚಿ ಮಾತನಾಡಿದ ಪೂಜಾಗಾಂಧಿ

Subscribe to Filmibeat Kannada

ಸಂಭಾವನೆ ವಿಚಾರದಲ್ಲಿ ಪೂಜಾಗಾಂಧಿ ಇಷ್ಟೇ ಕೊಡಿ ಎಂದು ಡಿಮ್ಯಾಂಡ್ ಮಾಡುವುದಿಲ್ಲವಂತೆ. ಹಾಗಾಗಿ ಆಕೆಯನ್ನು ಹೆಚ್ಚು ಚಿತ್ರಗಳು ಹುಡುಕಿಕೊಂಡು ಬಂದವು ಎನ್ನುತ್ತವೆ ಮೂಲಗಳು. ''ಸ್ಯಾಂಡಲ್ ವುಡ್ ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ ನಾನಲ್ಲ. ಈ ವಿಚಾರದಲ್ಲಿ ನನ್ನದು ಒಂಚೂರು ಮೃದು ಧೋರಣೆ. ಸಂಭಾವನೆ ಕಡಿಮೆಯಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ '' ಎನ್ನುತ್ತಾರೆ ಪೂಜಾಗಾಂಧಿ.

''ಮೊದಲು ಹಣ ಕೊಡಿ ನಂತರ ಚಿತ್ರೀಕರಣಕ್ಕೆ ಬರುತ್ತೇನೆ ಎಂಬ ಮನೋಭಾವ ನನ್ನದಲ್ಲ. ಈ ವ್ಯಾಪಾರಿ ಮನೋಭಾವ ನನಗಿನ್ನೂ ಮೈಗಂಟಿಲ್ಲ. ಈ ಹಿಂದೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದೆನೋ ಈಗಲೂ ಅಷ್ಟೇ ಸಂಭಾವನೆ ಪಡೆಯುತ್ತಿದ್ದೇನೆ'' ಎನ್ನುತ್ತಾರೆ ಪೂಜಾ. ಆದರೆ ಆಕೆಗೆ ಇನ್ನೂ ಎಷ್ಟೋ ಚಿತ್ರಗಳ ಸಂಭಾವನೆ ಸಂದಾಯವಾಗಬೇಕಿದೆಯಂತೆ.

ಪೂಜಾಗಾಂಧಿಯ ಹೊಚ್ಚ ಹೊಸ ಚಿತ್ರ 'ನಿನಗಾಗಿ ಕಾದಿರುವೆ'ತೆರೆಕಾಣಲು ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ 'ಹುಚ್ಚಿ'ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ನೀರಸವಾಗಿದೆ. ಈ ಬಗ್ಗೆ ಮಾತನಾಡಿದ ಪೂಜಾ, ಚಿತ್ರ ಬಿಡುಗಡೆಗೂ ಮುನ್ನಾ ದಿನ ಜಾಹೀರಾತು ಕೊಡಲಾಗಿತ್ತು. ಹುಚ್ಚಿ ಚಿತ್ರಕತೆ ಹೇಳಿದಾಗ ಸುಮಧುರ ಮನಸಿನ ಕತೆ ಎಂದು ಹೇಳಲಾಗಿತ್ತು. ಆದರೆ ಚಿತ್ರ ತೆರೆಗೆ ಬಂದಾಗ ತದ್ವಿರುದ್ಧವಾಗಿತ್ತು. ಇದು ನನ್ನ ಚಿತ್ರ ಅಲ್ಲ ಅನ್ನಿಸಿತು.

''ಇನ್ನು ಮುಂದೆ 'ಹುಚ್ಚಿ'ಯಂತಹ ಚಿತ್ರಗಳಲ್ಲಿ ನಟಿಸುವುದಿಲ್ಲ. ಮೊದಲು ಚಿತ್ರಕತೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಒಪ್ಪಿಕೊಳ್ಳುತ್ತೇನೆ. ಚಿತ್ರೀಕರಣ ಹೇಗೆ ಮಾಡುತ್ತಾರೆ ಎಂಬ ವಿಚಾರಗಳ ಕಡೆಗೂ ಗಮನಹರಿಸಿ ಮುಂದಿನ ಹೆಜ್ಜೆ ಇಡುತ್ತೇನೆ'' ಎಂದು ಪೂಜಾಗಾಂಧಿ ಚಿತ್ರರಂಗದಲ್ಲಿ ತಮ್ಮ ಮುಂದಿನ ನಡೆಯನ್ನು ವಿವರಿಸಿದರು.

ಅವರ ತಾಯಿಯವರನ್ನು ಪೂಜಾ ಮದುವೆಯಾವಾಗ ಎಂದು ಕೇಳಿದ್ದಕ್ಕೆ. ''ಶಾದಿತೊ ಕರ್ನಾ ಹಿ ಹೈ. ತೀನ್ ಚಾರ್ ಸಾಲ್ ಬಾದ್. ಕಾಲಹರಣ ಮಾಡುವ ಬಾಯ್ ಫ್ರೆಂಡ್ ಅವಳಿಗಿಲ್ಲ. ಅವಳನ್ನು ಮದುವೆ ಮಾಡಿಕೊಳ್ಳುವಂತ ಬಾಯ್ ಫ್ರೆಂಡ್ ಬೇಕು'' ಹೀಗೆಂದರು ಪೂಜಾಗಾಂಧಿ ಅವರ ತಾಯಿ ಜ್ಯೋತಿಗಾಂಧಿ. ಮಗಳ ಮದುವೆ ಹಾಗೂ ವೃತ್ತಿ ಜೀವನದ ಬಗ್ಗೆ ಅವರಿಗೆ ಎಲ್ಲಿಲ್ಲದ ಅಕ್ಕರೆ ಅವರ ಮಾತುಗಳಲ್ಲಿ ಧ್ವನಿಸುತ್ತಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada