»   » ಅಜಯ್ ರಾವ್, ರಾಧಿಕಾ ಪಂಡಿತ್ ಬ್ರೇಕಿಂಗ್ ನ್ಯೂಸ್!

ಅಜಯ್ ರಾವ್, ರಾಧಿಕಾ ಪಂಡಿತ್ ಬ್ರೇಕಿಂಗ್ ನ್ಯೂಸ್!

Posted By:
Subscribe to Filmibeat Kannada

'ಕೃಷ್ಣನ್ ಲವ್ ಸ್ಟೋರಿ' ಮೂಲಕ ಅಜಯ್ ರಾವ್ ಹಾಗೂ ನಟಿ ರಾಧಿಕಾ ಪಂಡಿತ್ ಜೋಡಿ ಒಂದಾಗಿತ್ತು. ಈಗ ಮತ್ತೊಮ್ಮೆ ಇಬ್ಬರೂ ಸುದ್ದಿ ಮಾಡಿದ್ದಾರೆ 'ಬ್ರೇಕಿಂಗ್ ನ್ಯೂಸ್' ಮೂಲಕ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸುತ್ತಿರುವ ಚಿತ್ರದ ಹೆಸರೇ 'ಬ್ರೇಕಿಂಗ್ ನ್ಯೂಸ್'.

ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಧೀರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಚಿತ್ರದ ಹೆಸರೇ ಹೇಳುವಂತೆ ಇಬ್ಬರು ಪತ್ರಕರ್ತರ ಕುರಿತಾದ ಚಿತ್ರವಿದು. ರಾಧಿಕಾ ಹಾಗೂ ಅಜಯ್ ಪತ್ರಕರ್ತರಾಗಿ ಕಾಣಿಸಲಿದ್ದಾರೆ. ಪತ್ರಕರ್ತರ ಬದಲಾದ ಧೋರಣೆ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆಯಂತೆ.

ಚಿತ್ರದಲ್ಲಿ ಪತ್ರಕರ್ತರು ಹಾಗೂ ಅವರ ಮನೋಭಾವ ಇದಿಷ್ಟೇ ಅಲ್ಲ. ಪ್ರೀತಿ ಪ್ರೇಮಕ್ಕೂ ಜಾಗ ಇದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಾಗತಿಹಳ್ಳಿ. ಸೆಪ್ಟೆಂಬರ್ 17ರಂದು ಚಿತ್ರ ಸೆಟ್ಟೇರಲಿದೆ. ರಾಜಕೀಯ ಹಿನ್ನೆಲೆಯಲ್ಲಿ ನಡೆಯುವ ಪ್ರೇಮ ಕಥಾನಕವಿದು ಎನ್ನುತ್ತಾರೆ ರಾಧಿಕಾ ಪಂಡಿತ್.

ನಾಗತಿಹಳ್ಳಿ ಹಾಗೂ ಅಜಯ್ ರಾವ್ ಜೊತೆ ಇದು ನನ್ನ ಎರಡನೇ ಚಿತ್ರ. ಚಿತ್ರದ ಕತೆ ತುಂಬ ಇಷ್ಟವಾಯ್ತು. ಹಾಗಾಗಿ ಹಿಂದೆ ಮುಂದೆ ನೋಡದೆ ಚಿತ್ರಕ್ಕೆ ಸಹಿ ಹಾಕಿದೆ ಎನ್ನುತ್ತಾರೆ ರಾಧಿಕಾ. ಈ ಹಿಂದೆ ನಾಗತಿಹಳ್ಳಿ ಅವರ ಒಲವೇ ಜೀವನ ಲೆಕ್ಕಾಚಾರ ಚಿತ್ರದಲ್ಲಿ ರಾಧಿಕಾ ಅಭಿನಯಿಸಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Actors Ajai Rao and Radhika Pandit were paired together in Krishnan Love Story, which was a runaway success. They’ll now be paired again, this time in a film, Breaking News, directed by Nagathihalli Chandrashekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada