Just In
Don't Miss!
- News
ಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂ
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Finance
900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ
- Automobiles
ಅನಾವರಣವಾಯ್ತು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್ಎಸ್ ಬೈಕ್
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟ ರಜನಿಕಾಂತ್‌ಗೆ ಏನೂ ಆಗಿಲ್ಲ ಥ್ಯಾಂಕ್ ಗಾಡ್!
ತಳಬುಡ ಇಲ್ಲದ ಇಂತಹ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ಆ ಭಗವಂತನೇ ಬಲ್ಲ. ತಮಿಳುನಾಡಿನಲ್ಲಿ ಕುಮಾರಿ ಜಯಲಲಿತ ಜಯಭೇರಿ ಬಾರಿಸಿದ್ದಕ್ಕೂ ಈ ಸುದ್ದಿಗೂ ಸುತಾರಾಂ ಸಂಬಂಧವಿಲ್ಲ. ಆದರೂ ಅಂತಹ ಸುದ್ದಿಯೊಂದು ಕಾಳ್ಗಿಚ್ಚಿನಂತೆ ಹಬ್ಬಿದೆ. ಈ ಸುದ್ದಿಯಿಂದ ರಜನಿಕಾಂತ್ ಅಭಿಮಾನಿಗಳು ಕ್ಷಣಕಾಲ ದಂಗುಬಡಿದವರಂತಾದರು. ಬಳಿಕ ಇದು ಕೇವಲ ವದಂತಿ ಅಷ್ಟೆ ಎಂಬುದು ಗೊತ್ತಾಗಿದೆ. ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ರಜನಿಕಾಂತ್ ಚೆನ್ನೈನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುಂತೆ ತಿಳಿಸಿದ್ದರು. ಆದರೆ ಇಂದು (ಮೇ.13) ರಜನಿಕಾಂತ್ ಮೃತಪಟ್ಟಿದ್ದಾರೆ ಎಂಬ ಕಿಂವದಂತಿ ಈ ಮೇಲ್‌ಗಳಲ್ಲಿ ಹರಿದಾಡಿದೆ. ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸುವಂತೆ ಎಂದು ನಮ್ಮ ಚೆನ್ನೈ ಪ್ರತಿನಿಧಿಯನ್ನು ಕೋರಲಾಯಿತು.
ಅವರು ಕೊಟ್ಟ ಮಾಹಿತಿ ಏನೆಂದರೆ, ರಜನಿಕಾಂತ್ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ಇದೆಲ್ಲಾ ಯಾರೋ ಹಬ್ಬಿಸಿದ ಗಾಳಿಸುದ್ದಿ ಅಷ್ಟೆ ಎಂದು ರಜನಿಕಾಂತ್ ಕುಟುಂಬ ಮೂಲಗಳು ಹಾಗೂ ಅವರ ಪಿಆರ್‌ಒ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮಂಡ್ಯ ಗಂಡು ಅಂಬರೀಷ್ ಹಾಗೂ ಕ್ರೇಜಿಸ್ಟಾರ್ ಅವರ ಬಗ್ಗೆಯೂ ಇದೇ ರೀತಿಯ ಗಾಳಿ ಸುದ್ದಿ ಹಬ್ಬಿಸಿರಲಿಲ್ಲವೆ. ರಜನಿಗೆ ಏನೂ ಆಗಿಲ್ಲ.ಅವರು ಆರೋಗ್ಯವಾಗಿಯೇ ಇದ್ದಾರೆ, ಥ್ಯಾಂಕ್ಸ್ ಗಾಡ್! (ದಟ್ಸ್‌ಕನ್ನಡ ಸಿನಿ ಬ್ಯೂರೋ)