»   »  ಪ್ರೇಯಸಿಯೊಂದಿಗೆ ರಾವಣನ ಸಂತಸದ ಗೀತೆ

ಪ್ರೇಯಸಿಯೊಂದಿಗೆ ರಾವಣನ ಸಂತಸದ ಗೀತೆ

Subscribe to Filmibeat Kannada
ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ರಾವಣ" ಚಿತ್ರಕ್ಕೆ ಮಾತುಗಳ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಿದೆ.'ರಾವಣ ತನ್ನ ಸ್ನೇಹಿತ ಹಾಗೂ ಪ್ರೇಯಸಿಯೊಂದಿಗೆ ಗೋಪಾಲನ್ ಮಾಲ್, ಬಿ.ಜಿ.ಎಸ್ ಕಾಲೇಜ್ ಹಾಗೂ ರಸ್ತೆಗಳಲ್ಲಿ 'ಸಾವಿರ ಸಾವಿರ ಸಂತೋಷ ತುಂಬಿ ಬಂದ ಹಾಗೆ ಎಂಬ ಗೀತೆಗೆ ಹೆಜ್ಜೆ ಹಾಕಿದ್ದಾನೆ.

ಯೋಗೀಶ್, ಸಂತೋಷ್ ಹಾಗೂ ಸಂಚಿತಾ ಪಡುಕೋಣೆ ಅಭಿನಯಿಸಿದ ಈ ಹಾಡನ್ನು ಕವಿರಾಜ್ ರಚಿಸಿದ್ದು, ಮುರಳಿ ನೃತ್ಯ ಸಂಯೋಜಿಸಿದ್ದಾರೆ. ಖ್ಯಾತ ಸಾಹಿತಿ ಹಾಗೂ ದಿಗ್ದರ್ಶಕ ಹುಣೂಸೂರು ಕೃಷ್ಣಮೂರ್ತಿ ಅವರ ಸಂಬಂಧಿ ಯೋಗೀಶ್ ಹುಣುಸೂರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 'ರಾವಣ ಅಸುರನಾದರೂ ಅವನಲ್ಲೂ ಪ್ರೀತಿ ಎಂಬುದಿತ್ತು. ಎಂತಹ ದುಷ್ಟರನ್ನು ಸೋಲಿಸುವ ಶಕ್ತಿ ಪ್ರೀತಿಗಿದೆ.

ನಮ್ಮ ಚಿತ್ರದಲ್ಲಿನ ನಾಯಕನ ಪಾತ್ರಧಾರಿ ಕೂಡ ಒರಟು ಸ್ವಭಾವದವ. ಯಾರಿಗೂ ಅಂಜದ ಅವನು ಪ್ರೀತಿಗೆ ಶರಣಾಗುತ್ತಾನೆ. ಆದ್ದರಿಂದ ಈ ವಿಶಿಷ್ಟ ಪ್ರೇಮ ಕಥಾನಕಕ್ಕೆ 'ರಾವಣ ಎಂಬ ಹೆಸರಿಟ್ಟೆ ಎಂದು ನಿರ್ದೇಶಕರು ಶೀರ್ಷಿಕೆಯ ವಿವರಣೆ ನೀಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ
ಸಂಚಿತಾ ಪಡುಕೋಣೆ ಮೋಹಕ ಚಿತ್ರಪಟಗಳು!
ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಯೋಗೀಶನ ರಾವಣ
ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada