»   »  ಬಾಸ್ ಚಿತ್ರದಲ್ಲಿ ಖ್ಯಾತ ತಮಿಳು ನಟ ಶಿವಾಜಿ ಪ್ರಭು

ಬಾಸ್ ಚಿತ್ರದಲ್ಲಿ ಖ್ಯಾತ ತಮಿಳು ನಟ ಶಿವಾಜಿ ಪ್ರಭು

Subscribe to Filmibeat Kannada
Sivaji Prabhu acts in Boss
ದರ್ಶನ್ ಅಭಿನಯಿಸುತ್ತಿರುವ 'ಬಾಸ್' ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ, ಶಿವಾಜಿ ಗಣೇಶನ್ ರ ಪುತ್ರ ಶಿವಾಜಿ ಪ್ರಭು ಅಭಿನಯಿಸುತ್ತಿದ್ದಾರೆ. ಶಿವಾಜಿ ಪ್ರಭು ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಸಾಹಸವನ್ನು ನಿರ್ಮಾಪಕ ರಮೇಶ್ ಯಾದವ್ ಮಾಡಿದ್ದಾರೆ. ಬಾಸ್ ಚಿತ್ರದ ಒಂದು ಪಾತ್ರದಲ್ಲಿ ಶಿವಾಜಿ ಪ್ರಭು ಕಾಣಿಸಿಕೊಳ್ಳಲಿದ್ದಾರೆ.

ಮೈಸೂರಿನ ಸುಂದರ ತಾಣಗಳಲ್ಲಿ 'ಬಾಸ್' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸೋಮವಾರದಿಂದಲೇ(ಜ.12) ಶಿವಾಜಿ ಪ್ರಭು ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಹತ್ತು ದಿನಗಳ ಕಾಲದ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಮಧ್ಯಪ್ರದೇಶದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿವಾಜಿ ಪ್ರಭುಅವರನ್ನು ನಿರ್ಮಾಪಕ ರಮೇಶ್ ಯಾದವ್ ಖುದ್ದಾಗಿ ಬರಮಾಡಿಕೊಂಡು ನಂತರ ಮೈಸೂರಿನ ಚಿತ್ರೀಕರಣ ಸ್ಥಳಕ್ಕೆ ಕರೆದೊಯ್ದರು.

''ಮುಂದಿನ ತಿಂಗಳು ಅವರ ಮಗಳ ಮದುವೆ ಇದೆ. ಮದುವೆ ಸಂಭ್ರಮ, ಒತ್ತಡ ಇವೆಲ್ಲವನ್ನೂ ಬದಿಗೊತ್ತಿ ಶಿವಾಜಿ ಪ್ರಭು ಚಿತ್ರೀಕರಣಕ್ಕೆ ಆಗಮಿಸಿರುವುದು ನಮಗೆ ಸಂತಸ ತಂದಿದೆ'' ಎನ್ನುತ್ತಾರೆ ಯಾದವ್. ಇಷ್ಟಕ್ಕೂ ಬಾಸ್ ಚಿತ್ರದಲ್ಲಿ ಶಿವಾಜಿ ಅವರ ಪಾತ್ರವೇನು ಎಂದು ಕೇಳಿದ್ದಕ್ಕೆ 'ಒಂದು ಪವರ್ ಫುಲ್' ಪಾತ್ರವೆಂದಷ್ಟೆ ಹೇಳಿದರು.ಬಾಸ್ ಚಿತ್ರ ಆರಂಭಕ್ಕೂ ಮುನ್ನ ಪರಭಾಷೆಯ ಜನಪ್ರಿಯ ನಾಯಕ ನಟನೊಬ್ಬರನ್ನು ಕನ್ನ್ನಡಕ್ಕೆ ಕರೆತರಲು ನಿರ್ದೇಶಕ ರಘುರಾಜ್, ದರ್ಶನ್ ಮತ್ತು ರಮೇಶ್ ಯಾದವ್ ಚರ್ಚಿಸಿದ್ದರಂತೆ. ಅವರಿಗೆ ಹೊಳೆದಿದ್ದು ಶಿವಾಜಿ ಪ್ರಭು. ಹಾಗಾಗಿ ಯಾದವ್ ಇಷ್ಟೆಲ್ಲಾ ಸಾಹಸ ಮಾಡಬೇಕಾಯಿತು.

ಚಿನ್ನತಂಬಿ, ಚಂದ್ರಮುಖಿ,ಸಿಲ್ಲಂಬಾಟಮ್, ಕುಚೇಲನ್, ಬಿಲ್ಲಾ, ವಸೂಲ್ ರಾಜ್ ಎಂಬಿಬಿಎಸ್ ಸೇರಿದಂತೆ ತಮಿಳಿನಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಶಿವಾಜಿ ಪ್ರಭು ನಟಿಸಿದ್ದಾರೆ. ಶಿವಾಜಿ ಪ್ರಭು ಅವರ ತಂದೆ ಶಿವಾಜಿ ಗಣೇಶನ್ ಕನ್ನಡದ ಸ್ಕೂಲ್ ಮಾಸ್ಟರ್(1958), ಮೊದಲ ತೇದಿ(1955) ಮತ್ತು ಮಕ್ಕಳ ರಾಜ್ಯ(1960)ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಬಾಸ್ ಚಿತ್ರದಲ್ಲಿ ದರ್ಶನ್ ಗೆ ಜೊತೆಯಾಗಿ ನವ್ಯಾ ನಾಯರ್ ನಟಿಸುತ್ತಿರುವುದು ತಿಳಿದೇ ಇದೆ!

(ದಟ್ಸ್ ಕನ್ನಡ ಚಿತ್ರವಾರ್ತೆ)
'ಬಾಸ್' ಆಗಿ ಬರಲಿರುವ ತೂಗುದೀಪ ದರ್ಶನ್‌
ಹಳೆ ಜಿಂಕೆ ಮರಿನ ಸೆರೆಹಿಡಿದ ಬಾಸ್ ದರ್ಶನ್
ವಿಭಿನ್ನಭಂಗಿಯ ನವ್ಯಾ ನಾಯರ್ ಚಿತ್ರಪಟಗಳು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada