»   » ಬುಲ್ದೊಜರ್ಸ್ ತಂಡದ ಮೇಲೆ ಶ್ರೀಶಾಂತ್ ಸಿಡಿಸಿದ ಬಾಂಬ್

ಬುಲ್ದೊಜರ್ಸ್ ತಂಡದ ಮೇಲೆ ಶ್ರೀಶಾಂತ್ ಸಿಡಿಸಿದ ಬಾಂಬ್

Posted By:
Subscribe to Filmibeat Kannada
ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದೇ ಒದ್ದಾಡುತ್ತಿರುವ ಕೇರಳದ ವೇಗಿ ಶ್ರೀಶಾಂತ್ ಸುದೀಪ್ ನೇತೃತ್ವದ ಕರ್ನಾಟಕ ಬುಲ್ದೊಜರ್ಸ್ ತಂಡದ ಮೇಲೆ ಗಂಭೀರ ಮತ್ತು ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ವಿಐಪಿ ಗ್ಯಾಲರಿಯಲ್ಲಿ ಕೂತಿದ್ದ ಶ್ರೀಶಾಂತ್ ಅವರನ್ನು ಸನ್ ಟಿವಿ ಸುದ್ದಿಗಾರರು ಮಾತನಾಡಿಸಿದಾಗ, ನಾನು ಚೆನ್ನೈ ರಿನೋಸ್ ತಂಡವನ್ನು ಬೆಂಬಲಿಸುತ್ತೇನೆ. ನನ್ನ ಹೆಚ್ಚಿನ ಸಮಯವನ್ನು ಕ್ರಿಕೆಟ್ ಅಭ್ಯಾಸಕ್ಕಾಗಿ ಚೆನ್ನೈ ನಗರದಲ್ಲೇ ಕಳೆಯುತ್ತಿದ್ದೇನೆ ಎಂದು ಹೇಳಿಕೆ ನೀಡಿದರು.

ತಮಿಳಿನಲ್ಲಿ ಮಾತು ಮುಂದುವರಿಸಿದ ಶ್ರೀಶಾಂತ್, ಚೆನ್ನೈ ರಿನೋಸ್ ತಂಡದಲ್ಲಿ ಆಡುತ್ತಿರುವ ಎಲ್ಲಾ ಆಟಗಾರರು ರಿಯಲ್ ಸೆಲೆಬ್ರಿಟಿಗಳು. ನಾನು ಅದನ್ನು ಬಲ್ಲೆ, ಆದರೆ ಕರ್ನಾಟಕ ಬುಲ್ದೊಜರ್ಸ್ ತಂಡದಲ್ಲಿ ಆಡುವ ಎಲ್ಲಾ ಆಟಗಾರರು ನಿಜವಾದ ಸೆಲೆಬ್ರಿಟಿಗಳಲ್ಲ. ಈ ಬಗ್ಗೆ ಹೆಚ್ಚಿನ ಹೇಳಿಕೆ ನೀಡಿ ವಿವಾದ ಸೃಷ್ಟಿಸುವುದು ನನಗೆ ಇಷ್ಟವಿಲ್ಲ ಎಂದು ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ಹೈದರಾಬಾದ್ ನಲ್ಲಿ ಭಾನುವಾರ (ಫೆ 12) ನಡೆದ ಅತ್ಯಂತ ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ದೊಜರ್ಸ್ ತಂಡ ವಿರೋಜಿತವಾಗಿ ಒಂದು ರನ್ ಗಳಿಂದ ಮುಗ್ಗರಿಸಿ ಕಳೆದ ವರ್ಷದಂತೆ ಮತ್ತೆ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತು.

English summary
Pacer S Sreesanth has given controversial statement during CCL final in Hyderabad. Chennai Rhinos players are really celebrities but Karnataka Buldozers players not all of them are celebrities.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X