»   »  ಸೂರ್ಯಕಾಂತಿ, ಕಾಲ್ಪನಿಕ ಪ್ರೇಮಕಥಾ ಚಿತ್ರ

ಸೂರ್ಯಕಾಂತಿ, ಕಾಲ್ಪನಿಕ ಪ್ರೇಮಕಥಾ ಚಿತ್ರ

Subscribe to Filmibeat Kannada
A M Murugadas adn K M Chaitanya
'ಸೂರ್ಯಕಾಂತಿ' ಚಿತ್ರದ ಮೂಲಕ ನಿರ್ದೇಶಕ ಕೆ.ಎಂ.ಚೈತನ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವುದು ಗೊತ್ತೇ ಇದೆ. ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ ಸೂರ್ಯಕಾಂತಿ ಎಂಬುದರಲ್ಲಿ ಎರಡು ಮಾತಿಲ್ಲ. ಅವಿಘ್ನ ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರಿನಡಿ ನಿರ್ಮಾಪಕ ಎಂ.ವಾಸು ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಭಾನುವಾರ ನೆರವೇರಿತು.

ನಾಸಿರ್, ಮನದೀಪ್ ರಾಜ್, ರಾಮಕೃಷ್ಣ, ಹಿಂದಿಯ ಟ್ಯಾಕ್ಸಿ ನಂ.1 ಚಿತ್ರದಲ್ಲಿ ನಟಿಸಿದ್ದ್ದ ಗಣೇಶ್ ಯಾದವ್ ಚಿತ್ರದ ತಾರಾಗಣದಲ್ಲಿದ್ದಾರೆ. ಧೀನ, ರಮಣ, ಸ್ಟ್ಯಾಲಿನ್, ಗಜನಿ ಯಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಎ.ಎಂ.ಮುರುಗದಾಸ್ ಸಹ 'ಸೂರ್ಯಕಾಂತಿ' ತಂಡಕ್ಕೆ ಶುಭ ಕೋರಲು ಆಗಮಿಸಿದ್ದರು. ನಿರ್ದೇಶಕ ಕೆ.ಎಂ.ಚೈತನ್ಯ ಅವರಿಗೆ ಇವರು ಫೇಸ್ ಬುಕ್ ಸೋಷಲ್ ನೆಟ್ ವರ್ಕ್ ತಾಣದ ಮೂಲಕ ಗೆಳೆಯರಾದರಂತೆ. ಆ ಸ್ನೇಹ ಮುರುಗದಾಸರನ್ನು ಇಲ್ಲಿಯವರೆಗೂ ಕರೆತಂದಿತ್ತು.

ಮುರುಗದಾಸ್ ಮೊದಲ ದೃಶ್ಯವನ್ನು ನಿರ್ದೇಶಿಸುವ ಮೂಲಕ ಸೂರ್ಯಕಾಂತಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಜ್ಞಾನಪೀಠ ವಿಜೇತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಕ್ಲಾಪ್ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ಕ್ಯಾಮೆರಾ ಚಾಲು ಮಾಡಿದರು. ಈ ಎಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ಭಾನುವಾರ ಧರ್ಮಗಿರಿ ಶ್ರೀಮಂಜುನಾಥ ದೇವಾಲಯದಲ್ಲಿ ನಡೆದದ್ದು ವಿಶೇಷ.

''ಚಿತ್ರೀಕರಣ ಬೆಂಗಳೂರು, ಬೆಳಗಾವಿ, ಗೋವಾ ಮತ್ತು ಉಜ್ಬೆಕಿಸ್ತಾನಗಳಲ್ಲಿ 70 ದಿನಗಳ ಕಾಲ ನಡೆಯಲಿದೆ. ಚಿತ್ರಕತೆಯನ್ನು ಬಹಳ ಅದ್ಭುತವಾಗಿ ಬರೆದಿದ್ದಾರೆ ನಮ್ಮ ಗುರು ನಾರಾಯಣಸ್ವಾಮಿ'' ಎಂದರು ಚೈತನ್ಯ. ಇದೊಂದು ವಿಭಿನ್ನ ಪ್ರೇಮಕಥೆ ಎನ್ನುತ್ತಾರೆ ಅವರು. ಆದಿನಗಳು, ಬಿರುಗಾಳಿ ಖ್ಯಾತಿಯ ಚೇತನ್ ಈ ಚಿತ್ರದಲ್ಲಿ ಬಾಡಿಗೆ ಹಂತಕನಾಗಿ ಕಾಣಿಸಲಿದ್ದಾರೆ. ಈ ಚಿತ್ರದ ಪಾತ್ರ ಪೋಷಣೆಗಾಗಿ ಚೇತನ್ ಕರಾಟೆ ಸಹ ಕಲಿಯಬೇಕಾಯಿತಂತೆ.

ಚಿತ್ರದ ನಾಯಕಿ ರೆಜಿನಾ. ನೂರಕ್ಕೂ ಅಧಿಕ ಜಾಹೀರಾತುಗಳಲ್ಲಿ ನಟಿಸಿದ ಅನುಭವಿ ಈಕೆ. ಚೆನ್ನೈ ಮೂಲದ ರೂಪದರ್ಶಿ. ಪ್ರಸ್ತುತ ಮನಃಶಾಸ್ತ್ರ ಓದುತ್ತಿರುವ ಈಕೆ ಬಾಲ ಕಲಾವಿದೆಯಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದರಂತೆ. ನಿರ್ದೇಶಕ ಮುರುಗದಾಸ್ ಮಾತನಾಡುತ್ತಾ, ಯಾವುದೇ ನಿರ್ದೇಶಕನಿಗೆ ಎರಡನೇ ಚಿತ್ರ ಬಹಳ ಮುಖ್ಯ. ಅದರಲ್ಲೂ ಮೊದಲನೇ ಚಿತ್ರ ಸೂಪರ್ ಹಿಟ್ ಆಗಿದ್ದ್ದರಂತೂ ಎರಡನೇ ಚಿತ್ರ ಅತಿದೊಡ್ಡ ಸವಾಲು. ಈ ಸವಾಲನ್ನು ಕೆ.ಎಂ.ಚೈತನ್ಯ ಖಂಡಿತ ನಿಭಾಯಿಸುತ್ತಾರೆ ಎಂದರು. ತಾರಾ, ರಮೇಶ್ ಅರವಿಂದ್, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಕೆ ಮಂಜು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಆ ದಿನಗಳು ಚೈತನ್ಯರ ಹೊಸ ಚಿತ್ರ ಸೂರ್ಯಕಾಂತಿ
ಬಿರುಗಾಳಿ: ಗಾಳಿಯಲ್ಲೊಂದು ಹೊಸ ಗೋಪುರ
ಆ ದಿನಗಳು ಚೇತನ್ ರ ಬಿರುಗಾಳಿ ಟ್ರೈಲರ್
ಚೇತನ್, ಏನಿದು ವೈರಾಗ್ಯ? ಏನಿದು ಗಾಂಭೀರ್ಯ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada