For Quick Alerts
  ALLOW NOTIFICATIONS  
  For Daily Alerts

  ಅಂಬಾರಿಯ ಮೇಲೆ ಅರ್ಜುನ್ 'ಅದ್ದೂರಿ' ಮೆರವಣಿಗೆ

  By * ಶ್ರೀರಾಮ್ ಭಟ್
  |

  ಯಶಸ್ವೀ ಚಿತ್ರ ಅಂಬಾರಿ ನಿರ್ದೆಶಕ ಎ ಪಿ ಅರ್ಜುನ್ ನಿರ್ದೆಶನದ ಚಿತ್ರ 'ಅದ್ದೂರಿ' ಚಿತ್ರತಂಡ ವಿದೇಶದಲ್ಲಿ ಚಿತ್ರೀಕರಣ ನಡೆಸಿ ಸ್ವದೇಶಕ್ಕೆ ಮರಳಿದೆ. ಇಮ್ರಾನ್ ನೃತ್ಯ ನಿರ್ದೆಶನದಲ್ಲಿ ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಹೆಜ್ಜೆಹಾಕಿರುವ ಹಾಡುಗಳ ಚಿತ್ರೀಕರಣ ಸಿಂಗಾಪುರ ಹಾಗೂ ಮಲೇಶಿಯಾದಲ್ಲಿ 'ಅದ್ದೂರಿ'ಯಾಗಿ, ಅದ್ದೂರಿಗಾಗಿ ನಡೆದಿದೆ.

  ಸಿ ಎಂ ಆರ್ ಶಂಕರರೆಡ್ಡಿ ನಿರ್ಮಾಣದ ಅದ್ದೂರಿ ಚಿತ್ರ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾರಣ ನಿರ್ದೆಶಕ ಎ ಪಿ ಅರ್ಜುನ್. ಅದಕ್ಕೆ ಕಾರಣ ಅವರು ಈ ಹಿಂದೆ ಕನ್ನಡ ಸಿನಿಪ್ರೇಕ್ಷಕರಿಗೆ ನೀಡಿರುವ 'ಅಂಬಾರಿ' ಎಂಬ ಯಶಸ್ವಿ ಸಿನಿಮಾ. ಈ ಅದ್ದೂರಿ ಅಂಬಾರಿಗಿಂತಲೂ ಚೆನ್ನಾಗಿ ಮೂಡಿ ಬಂದಿದೆ ಎಂದಿರುವ ಅರ್ಜುನ್ ಮಾತಿನಿಂದ ನಿರೀಕ್ಷೆ ಡಬಲ್ ಆಗಿದೆ.

  ಕರ್ನಾಟಕದ ಸುಂದರ ತಾಣಗಳ ಜೊತೆ ಹಾಡುಗಳಲ್ಲಿ ವಿದೇಶಗಳ ಸುಂದರ ತಾಣಗಳನ್ನೂ ಪ್ರೇಕ್ಷಕರಿಗೆ ತೋರಿಸಲಿರುವ ನಿರ್ದೆಶಕ ಅರ್ಜುನ್, ಅದ್ದೂರಿ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಕಥೆಗೆ ಬಹಳಷ್ಟು 'ಹೋಮ್ ವರ್ಕ್' ಮಾಡಿರುವ ಅರ್ಜುನ್ ಒಳ್ಳೆಯ ಚಿತ್ರ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಹೀಗಾಗಿ, ಅದ್ದೂರಿ ತೆರೆಗೆ ಬರುವುದನ್ನೇ ಪ್ರೇಕ್ಷಕರು ಕಾಯುವಂತಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Amabari Fame AP Arjun's upcoming movie 'Adduri', completed its Song Shooting in Singapore And Malesia. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X