For Quick Alerts
  ALLOW NOTIFICATIONS  
  For Daily Alerts

  ಸಿನಿಮಾಗೆ ಬಂದದ್ದೇ ರಾಜಕೀಯ ಸೇರಲು : ಉಪೇಂದ್ರ

  By Rajendra
  |

  ಶೀಘ್ರದಲ್ಲೇ ತಾವು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದಾಗಿ ರಿಯಲ್ ಸ್ಟಾರ್ ಉಪೇಂದ್ರ ಘೋಷಿಸಿದ್ದಾರೆ. ಆದರೆ ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುತ್ತಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಹಾಗಂತ ಪಕ್ಷೇತರ ಅಭ್ಯರ್ಥಿಯೇ? ಅಥವಾ ಸ್ವತಂತ್ರ ಪಕ್ಷ ಕಟ್ಟುತ್ತಾರಾ ಎಂಬುದನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ.

  "ಎಲ್ಲಾ ದೈವೇಚ್ಛೆ. ಅವನ ಆಜ್ಞೆ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಲ್ಲ. ತಾನು ರಾಜಕೀಯಕ್ಕೆ ಬರಲೇ ಬೇಕು ಎಂಬುದು ಅವನ ಇಚ್ಛೆಯಾಗಿದ್ದರೆ. ಆ ಜವಾಬ್ದಾರಿಯನ್ನು ನಾನು ಸ್ವೀಕರಿಸಲು ಸಿದ್ಧ ಎಂದು ವೇದಾಂತಿಯಂತೆ ಉಪೇಂದ್ರ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದಾರೆ.

  ಇದುವರೆಗೂ ಯಾವುದೇ ರಾಜಕೀಯ ಪಕ್ಷ ತಮ್ಮನ್ನು ಆಹ್ವಾನಿಸಿಲ್ಲ. 'ಸೂಪರ್' ಚಿತ್ರದಲ್ಲಿ ತೋರಿಸಿರುವಂತೆ 2030ರ ವಿಷನ್ ಖಂಡಿತ ಸಾಧ್ಯವಾಗುತ್ತದೆ. ನಾನು ಸಿನಿಮಾ ರಂಗಕ್ಕೆ ಅಡಿಯಿಟ್ಟಿದ್ದೇ ರಾಜಕೀಯ ಕ್ಷೇತ್ರ ಪ್ರವೇಶಿಸಲು. ಅಧಿಕಾರವಿಲ್ಲದೆ ಜನಸೇವೆ ಮಾಡಲು ಸಾಧ್ಯವಿಲ್ಲ. ಹಾಗಂತ ಯಾವುದೇ ಅಧಿಕಾರವಿಲ್ಲದೆ ಜನಸೇವೆ ಮಾಡುವವರು ಇಲ್ಲ ಎಂದಲ್ಲ. ಅಧಿಕಾರವಿದ್ದರೆ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದು ಎಂಬುದು ನನ್ನ ವಾದ ಎಂದಿದ್ದಾರೆ ಉಪ್ಪಿ.

  ಏತನ್ಮಧ್ಯೆ ರಾಜಕೀಯ ಪಕ್ಷಗಳು 'ಸೂಪರ್' ಚಿತ್ರವನ್ನು ನೋಡಲು ಆಸಕ್ತಿ ತೋರಿವೆ. ರಾಜಕೀಯ ಧುರೀಣರಿಗೆಲ್ಲಾ ಒಂದು ಶೋ ಮಾಡುವ ಯೋಚನೆಯಲ್ಲಿದ್ದಾರೆ ರಾಕ್ ಲೈನ್ ವೆಂಕಟೇಶ್. ರಾಜಕೀಯ ಧುರೀಣರನ್ನು ಸಂಪರ್ಕಿಸಿ ಅವರನ್ನು ಒಂದೆಡೆ ಸೇರಿಸುವ ನಿರ್ಧಾರಕ್ಕೆ ರಾಕ್ ಲೈನ್ ಮುಂದಾಗಿದ್ದಾರೆ. ಶೀಘ್ರದಲ್ಲೆ ಪ್ರದರ್ಶನ ಏರ್ಪಡಿಸುವುದಾಗಿ ತಿಳಿಸಿದ್ದಾರೆ.

  English summary
  Realstar Upendra is over the moon as his Super has broken all the previous records of Kannada film industry. The director-turned-actor, who hinted about his possible political entry in the film, has confirmed yesterday that he would join politics in future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X