For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣದಲ್ಲೇ ಶತದಿನ ಕಂಡ ವೀರ ಮದಕರಿ!

  By Staff
  |

  ವೀರ ಮದಕರಿ

  ಚಿತ್ರ ಬಿಡುಗಡೆಯಾದ ಮೇಲೆ ಶತದಿನೋತ್ಸವ ಆಚರಿಸುವುದು ವಾಡಿಕೆ. ಆದರೆ ನಮ್ಮ 'ವೀರ ಮದಕರಿ' ಚಿತ್ರೀಕರಣದಲ್ಲೇ ಶತದಿನ ಕಂಡ ಸಂತಸದಲಿದ್ದಾನೆ. ಕರ್ನಾಟಕದ ಹೆಮ್ಮೆಯ ತಾಣಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ಮುಂತಾದ ಕಡೆ ಚಿತ್ರಕ್ಕೆ ನೂರುದಿನಗಳ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಕರಿಸುಬ್ಬು ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ಕೂಡ ಮುಗಿದಿದೆ ಎಂದು ನಿರ್ಮಾಪಕ ದಿನೇಶ್‌ಗಾಂಧಿ ತಿಳಿಸಿದ್ದಾರೆ. ಆರೋಗ್ಯ ಸರಿಯಿಲ್ಲದ ಸಮಯದಲ್ಲೂ ಚಿತ್ರೀಕರಣ ಕಾರ್ಯದಲ್ಲಿ ತೊಡಗಿ ಚಿತ್ರಕ್ಕಾಗಿ ಹೆಚ್ಚಿನ ಶ್ರಮವಹಿಸಿರುವ ನಾಯಕ ಹಾಗೂ ನಿರ್ದೇಶಕ ಸುದೀಪ್ ಅವರನ್ನು ನಿರ್ಮಾಪಕರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಪವಿತ್ರ ಹಾಗೂ ರಹಿಣಿ ಎಂಬ ಚೆಲುವೆಯರು ಮದಕರಿಯ ನಾಯಕಿಯರಾಗಿದ್ದಾರೆ.

  ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸುದೀಪ್ ನಿರ್ದೇಶಿಸುತ್ತಿದ್ದಾರೆ. ಕೀರವಾಣಿ ಸಂಗೀತವಿರುವ 'ವೀರ ಮದಕರಿ'ಗೆ ಶ್ರೀವೆಂಕಟ್ ಅವರ ಛಾಯಾಗ್ರಹಣವಿದೆ. ವಿಜಯಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಸುರೇಶ್‌ರಾಜ್ ಸಹನಿರ್ದೇಶನ ಹಾಗೂ ಕೆ.ವಿ.ಮಂಜಯ್ಯ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ಪವಿತ್ರ, ರಹಿಣಿ, ದಿನೇಶ್‌ಗಾಂಧಿ, ದೊಡ್ಡಣ್ಣ ಟೆನ್ನಿಸ್‌ಕೃಷ್ಣ ಮುಂತಾದವರಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ವಿಶೇಷ ಪಾತ್ರದಲಿದ್ದಾರೆ.

  ಕಲಾಕಾರ್

  ಚಿಕ್ಕ ವಯಸ್ಸಿನಲ್ಲೇ 'ಕಲಾಕಾರ್' ಎನಿಸಿಕೊಂಡಿರುವ ಹರೀಶ್‌ರಾಜ್ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಚಿತ್ರದ ಮಾತುಗಳ ಜೋಡಣೆ ಪ್ರಕ್ರಿಯೆ ಪೂರ್ಣಗೊಳ್ಳಿಸಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿ ಹೆಸರಾಗಿದ್ದ ಹರೀಶ್‌ರಾಜ್ 'ಕಲಾಕಾರ್' ಚಿತ್ರವನ್ನು ಕುಟುಂಬ ವರ್ಗದ ಸಹಕಾರದೊಂದಿಗೆ ನಿರ್ಮಿಸುತ್ತಿರುವುದ್ದಲ್ಲದೆ ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ.

  ದಿ ಬೆಂಗಳೂರು ಕಂಪನಿ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ಎಚ್.ಎಂ.ರಾಮಚಂದ್ರ ಛಾಯಾಗ್ರಹಣ, ಶ್ರೀ(ಕ್ರೇಜಿ ಮೈಂಡ್ಸ್) ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ಹರೀಶ್‌ರಾಜ್, ಸುಮನ್‌ರಂಗನಾಥ್, ರಾಧಿಕಾಗಾಂಧಿ, ಸುಧಾನರಸಿಂಹರಾಜು, ಅವಿನಾಶ್(ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ), ರಾಜರಾವ್, ವಿಶ್ವ ಮುಂತಾದವರಿದ್ದಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)
  ಪೂರಕ ಓದಿಗೆ
  ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ
  ಚೋರ ಗುರು ಮದಕರಿಗೆ ಸಿಕ್ತು ಗೋದಾಮು

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X