For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ವಿಷ್ಣುವರ್ಧನ' ಚಿತ್ರದಿಂದ ಭಾವನಾ ಔಟ್

  By Rajendra
  |

  'ಜಾಕಿ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದ ಮಲ್ಲು ಬೆಡಗಿ ಭಾವನಾ ಇತ್ತೀಚೆಗೆ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದರು. ಆದರೆ ಆ ಚಿತ್ರವನ್ನು ಕೈಬಿಡುತ್ತಿರುವುದಾಗಿ ಪತ್ರಿಕೆಯೊಂದಕ್ಕೆನೀಡಿರುವ ಸಂದರ್ಶನದಲ್ಲಿ ಭಾವನಾ ತಿಳಿಸಿದ್ದಾರೆ.

  ದ್ವಾರಕೀಶ್ ನಿರ್ಮಿಸುತ್ತಿರುವ ಸುದೀಪ್ ಅಭಿನಯದ 'ವಿಷ್ಣುವರ್ಧನ'(ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ) ಚಿತ್ರಕ್ಕೆ ಭಾವನಾ ಸಹಿ ಹಾಕಿರುವುದಾಗಿ ಈ ಹಿಂದೆ ಸುದ್ದಿಯಾಗಿತ್ತು. ಆದರೆ ತಾನು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ ಭಾವನಾ. ಡೇಟ್ಸ್ ಹೊಂದಾಣಿಕೆಯಾಗದೆ ಇರುವುದೇ ಇದಕ್ಕೆ ಕಾರಣವಂತೆ.

  ಸುದೀಪ್ ಚಿತ್ರದಲ್ಲಿ ನಟಿಸಲು ಡಿಸೆಂಬರ್ ಡೇಟ್ಸ್ ಫಿಕ್ಸ್ ಆಗಿತ್ತು. ಆದರೆ ಸುದೀಪ್ ತಮ್ಮದೇ ನಿರ್ಮಾಣದ ಚಿತ್ರದಲ್ಲಿ ಬಿಜಿಯಾಗಿರುವ ಕಾರಣ ಮಾರ್ಚ್‌ಗೆ ಡೇಟ್ಸ್ ಮುಂದಾಡಲಾಯಿತು. ಆದರೆ ನಾನು ಮಾರ್ಚ್‌ನಲ್ಲಿ ಮಲಯಾಳಂ ಚಿತ್ರವೊಂದಕ್ಕೆ ಡೇಟ್ಸ್ ಕೊಟ್ಟಾಗಿದೆ. ಪ್ರಿಯದರ್ಶನ್ ಚಿತ್ರ ಅದಾಗಿದ್ದು ಅಬು ದಬಿಯಲ್ಲಿ ಚಿತ್ರೀಕರಣ ನಡೆಯಲಿದೆ. ಹಾಗಾಗಿ ಸುದೀಪ್ ಚಿತ್ರ ಕೈಬಿಡುತ್ತಿರುವುದಾಗಿ ತಿಳಿಸಿದ್ದಾರೆ ಭಾವನಾ.

  English summary
  Kannada film Jackie fame Bhavana revealed in an interview given to a newspaper that she has opted out of the proposed project Vishnuvardhana starring Sudeep in the lead. Because she already engaged in some other projects. Bhavana signed for two Malayalam projects.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X