For Quick Alerts
  ALLOW NOTIFICATIONS  
  For Daily Alerts

  ಚಿಕ್ಕಮಗಳೂರಿನಲ್ಲಿ ಪೂಜಾ ಗಾಂಧಿ ವಿರುದ್ಧ ಕೇಸ್

  |

  ನಟಿ ಪೂಜಾ ಗಾಂಧಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪೂಜಾ ವಿರುದ್ಧ ದೂರು ದಾಖಲಿಸಲಾಗಿದೆ. ಚಿಕ್ಕಮಗಳೂರು ನಗರದ ಐಬಿಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಅವರು ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ ಎಂಬ ಆರೋಪವನ್ನು ದೂರಿನಲ್ಲಿ ದಾಖಲಿಸಲಾಗಿದೆ.

  ಇತ್ತೀಚಿಗೆ ನಟಿ ಪೂಜಾ ಗಾಂಧಿ ಬಹಳಷ್ಟು ವಿವಾದಗಳಿಗೆ ಸಿಲುಕುತ್ತಿದ್ದಾರೆ. ದಂಡುಪಾಳ್ಯ ಚಿತ್ರದಲ್ಲಿ ಪಾತ್ರವೊಂದಕ್ಕೆ ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ದೊಡ್ಡ ವಿವಾದವೇ ಆಗಿದೆ. ಗುಲ್ಬಾರ್ಗಾದಲ್ಲಿ ಪೂಜಾ ಗಾಂಧಿಯ ಪ್ರತಿಕೃತಿ ದಹಿಸಲಾಗುದೆಯಲ್ಲದೇ ದಂಡುಪಾಳ್ಯದ ಶೀರ್ಷಿಕೆಯನ್ನೇ ಬದಲಾಯಿಸಿ ಎಂದು ಪಟ್ಟು ಹಿಡಿಯಲಾಗಿದೆ.

  ಅಷ್ಟಾದ ಮೇಲೂ ಪೂಜಾಗಾಂಧಿಗೆ ಮತ್ತೆ ಇಷ್ಟಾಗಿದೆ. ನಟಿ ಪೂಜಾ ಗಾಂಧಿ ಜೆಡಿಎಸ್ ಸೇರಿದ್ದು ಗೊತ್ತೇ ಇದೆ. ಇದೀಗ ಚಿಕ್ಕಮಗಳೂರು-ಉಡುಪಿ ಉಪಚುನಾವಣೆ ಪ್ರಚಾರದ ಕಡೆ ಗಮನ ಕೇಂದ್ರೀಕರಿಸಿರುವ ಪೂಜಾ ಅನಗತ್ಯ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಅಥವಾ ಇದೂ ಒಂದು ಪ್ರಚಾರದ ತಂತ್ರವೋ ಎಂಬುದು ಎಲ್ಲರ ಬಾಯಲ್ಲೂ ಸದ್ಯಕ್ಕೆ ಚರ್ಚೆಯಾಗುತ್ತಿರುವ ವಿಷಯ. (ಒನ್ ಇಂಡಿಯಾ ಕನ್ನಡ)

  English summary
  Case filed against actress Pooja Gandhi, at Chikmagalur Police Station. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X