For Quick Alerts
  ALLOW NOTIFICATIONS  
  For Daily Alerts

  ಪೋಸ್ಟರ್ ಫೋಟೋ ವಿವಾದ: ರಿಷಿಕಾ ಸಿಂಗ್ ಬಯೋಡಾಟ

  By * ಶ್ರೀರಾಮ್ ಭಟ್
  |

  ಇತ್ತೀಚಿಗೆ ಮಾಧ್ಯಮದಲ್ಲಿ ಸುದ್ದಿಯಾಗಿದ್ದು, ಆಗುತ್ತಿರುವುದು ಕನ್ನಡದ ನಟಿ ರಿಷಿಕಾ ಸಿಂಗ್ ಪೋಸ್ಟರ್ ಫೋಟೋ ವಿವಾದ. ಸುದ್ದಿಯಾಗಬೇಕಾಗಿದ್ದ ಇದು ವಿವಾದಕ್ಕೆ ತಿರುಗಿದ್ದು ಕೆಲವು ಮಹಿಳಾ ಸಂಘಟನೆಗಳು ಈ ವಿಷಯವಾಗಿ ಮಾಧ್ಯಮಗಳ ಮುಂದೆ ಬಂದಾಗ. ರಿಷಿಕಾ ಕೂಡ ಮಾದ್ಯಮದ ಕ್ಯಾಮರಾ ಮುಂದೆ ಕುಳಿತು ತನ್ನನ್ನು ತಾನು ಸಮರ್ಥನೆ ಮಾಡಿಕೊಂಡಿದ್ದೂ ಆಯ್ತು. ಆದರೂ, ಇನ್ನೂ ಚರ್ಚೆಗಳು ಮುಂದುವರಿಯುತ್ತಲೇ ಇವೆ.

  ಇಲ್ಲಿದೆ ನಟಿ ರಿಷಿಕಾ ಸಿಂಗ್ ಬಯೋಡಾಟ. ಕನ್ನಡ ಚಿತ್ರರಂಗಕ್ಕೆ ನಟಿ ರಿಷಿಕಾ ಸಿಂಗ್ ಕುಟುಂಬದ ನಂಟು ತುಂಬಾ ಹಳೆಯದು. 1946ರಲ್ಲಿ ಮಹಾತ್ಮ ಪಿಕ್ಚರ್ಸ್ ನಿರ್ಮಾಣದ 'ಕೃಷ್ಣಲೀಲಾ' ಚಿತ್ರವನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರನಿರ್ಮಾಪಕ ಎನಿಸಿಕೊಂಡು ನಂತರ 50ಕ್ಕೂ ಹೆಚ್ಚು ಕನ್ನಡ ಚಿತ್ರ ನಿರ್ಮಿಸಿದ ಶಂಕರ್ ಸಿಂಗ್ ಹಾಗೂ ಕನ್ನಡದ 'ಮೊದಲ ನಟಿ' ಹೆಗ್ಗಳಿಕೆಯ ಪ್ರತಿಮಾ ದೇವಿ ಅವರ ಮೊಮ್ಮಗಳು ಈ ರಿಷಿಕಾ ಸಿಂಗ್. ಈಕೆಯ ಅಪ್ಪ ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು. ಅಣ್ಣ ನಟ ಆದಿತ್ಯ.

  ಚಿತ್ರರಂಗದ ಮೇರು ನಿರ್ದೆಶಕರೊಬ್ಬರ ಮಗಳಾದರೂ ಅಪ್ಪನ ನೆರಳಿನಲ್ಲಿ ಬದುಕಲು ಇಷ್ಟಪಡದ ಈಕೆ, ಸ್ವತಂತ್ರವಾಗಿ ಚಿತ್ರರಂಗದ ಪ್ರಯಾಣ ಆರಂಭಿಸಿದ್ದಾಳೆ. ಅವರಪ್ಪ ರಾಜ್ರೇಂದ್ರಸಿಂಗ್ ಬಾಬೂ ಕೂಡ "ನನ್ನ ಮಗಳೆನ್ನುವ ಕಾರಣಕ್ಕೆ ನಾನು ಆಕೆಗೆ ಯಾವುದೇ ಸಪೋರ್ಟ್ ಮಾಡುವುದಿಲ್ಲ" ಎಂದಿದ್ದಾರೆ. ಆದರೆ ಅಜ್ಜಿ ಮಾಡಿದ ಪಾತ್ರಗಳು ಹಾಗೂ ಅಪ್ಪ ನಟಿಯರನ್ನು ತೋರಿಸಿದ ರೀತಿ ಇವುಗಳನ್ನೊಮ್ಮೆ ನೋಡಿಕೊಂಡರೆ ರಿಷಿಕಾಗೆ ಒಳ್ಳೆಯದು.

  ಇನ್ನು ಆಕೆಯ ಅಪ್ಪ ಹಾಗೂ ಅಜ್ಜಿ ಕೂಡ ತಮ್ಮ ಕುಟುಂಬದ ಕುಡಿ ಹೋಗುತ್ತಿರುವ ದಾರಿಯ ಬಗ್ಗೆ ಮೂಗು ತೂರಿಸಬೇಕಿಲ್ಲವಾದರೂ ತಮ್ಮ ಮಾರ್ಗದರ್ಶನ ನೀಡಿದರೆ ತಪ್ಪೇನಿಲ್ಲ. ಅಣ್ಣ ಆದಿತ್ಯ ತಂಗಿಗೆ ಸಪೋರ್ಟ್ ಮಾಡುವುದರ ಜೊತೆಗೆ ಆಯ್ಕೆಯ ಬಗ್ಗೆ ಹೇಳಿಕೊಟ್ಟರೂ ಒಳ್ಳೆಯದು. ಒಟ್ಟಿನಲ್ಲಿ ಚಿತ್ರರಂಗದ ಗೌರವಾನ್ವಿತ ಕುಟುಂಬದ ಕುಡಿಯೊಂದು ಮಾಧ್ಯಮದ ಮುಂದೆ ಬಂದು ನಗೆಪಾಟಲಿಗೆ ಈಡಾಗುತ್ತಿರುವುದನ್ನು ನೋಡಿ ಜನ ಮುಜುಗರ ಪಡುತ್ತಿರುವುದು ತಪ್ಪಿದರೆ ಸಾಕು.

  English summary
  Actress Rishika Singh's 'Yaradre Nangenu' film poster photo became big controversy now. Here is the Bio-data of the actress Rishika Singh.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X