»   »  ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!

ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!

Subscribe to Filmibeat Kannada
Anuhbava fame Abhinaya marries Umakanth
ಮಾಜಿ ಬೆಳ್ಳಿತೆರೆಯ ನಟಿ ಹಾಗೂ ಹಾಲಿ ಕಿರುತೆರೆ ನಟಿ ಅಭಿನಯಾ ಅವರು ಛಾಯಾಗ್ರಾಹಕ ಉಮಾಕಾಂತ್ ಅವರನ್ನು ಮದುವೆಯಾಗಿದ್ದಾರೆ. ಬುಧವಾರ ಇವರಿಬ್ಬರ ಮದುವೆ ಧರ್ಮಸ್ಥಳದಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ಸರಳವಾಗಿ ನಡೆಯಿತು.

'ಅನುಭವ' (1983) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಭಿನಯಾ ಪಾದಾರ್ಪಣೆ ಮಾಡಿದ್ದರು. ಅವರು ಕನ್ನಡ ಚಿತ್ರರಂಗಕ್ಕೆ ಆಗಮಿಸಿ ಬರೋಬ್ಬರಿ 25 ವರ್ಷಗಳೇ ಸರಿದು ಹೋಗಿವೆ. ಕಾಶಿನಾಥ್ ಅವರ ಅಸಾಂಪ್ರದಾಯಿಕ 'ಅನುಭವ' ಚಿತ್ರದ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದರು. ವಿ ಮನೋಹರ್ ರಚಿಸಿದ ಈ ಚಿತ್ರದ ಹಾಡು 'ಹೋದೆಯ ದೂರ ಓ ಜೊತೆಗಾರ...' ಸರ್ವಕಾಲಿಕ ಹಿಟ್ ಸಾಂಗ್ ಪಟ್ಟಿಯಲ್ಲಿದೆ!

'ಅನುಭವ'ದ ನಂತರ ಅಭಿನಯಾ ಅವರನ್ನು ಉತ್ತಮ ಅವಕಾಶಗಳೇನು ಹುಡುಕಿಕೊಂಡು ಬರಲಿಲ್ಲ. ಸಣ್ಣಪುಟ್ಟ ಪಾತ್ರಗಳಿಗಷ್ಟೇ ಸೀಮಿತವಾಗಿದ್ದರು. ಪೋಷಕ ಪಾತ್ರಗಳಷ್ಟೇ ಅವರು ತೃಪ್ತಿ ಪಡೆಯಬೇಕಾಯಿತು. ನಂತರದ ದಿನಗಳಲ್ಲಿ ಕಿರುತೆರೆಯಲ್ಲಿ ಅವರ ಅದೃಷ್ಟ ಬದಲಾಯಿತು. ಕಿರುತೆರೆ ತಾರೆಯಾಗಿ ಮನೆಮಾತಾದರು. ಟಿವಿ ಧಾರಾವಾಹಿಗಳಲ್ಲಿ ಇಂದಿಗೂ ಅವರು ಹೆಚ್ಚಾಗಿ ಖಳನಾಯಕಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

ಅಭಿನಯಾ ಅವರ ಮತ್ತೊಂದು ವಿಶೇಷವೆಂದರೆ ವಿವಾದಗಳಿಂದ ಬಹಳ ದೂರ ಇದ್ದದ್ದು. ಕೇವಲ ಆಪ್ತರು ಮತ್ತು ಪರಿಚಿತರಿಗಷ್ಟೇ ಅಭಿನಯಾ ಅವರು ತಮ್ಮ ಮದುವೆ ಆಮಂತ್ರಣವನ್ನು ಕಳುಹಿಸಿದ್ದರು. ತೀರಾ ಖಾಸಗಿಯಾಗಿ ನಡೆದಂತಹ ಮದುವೆ ಇದಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬೆಂಗಳೂರು ಟೆಕ್ಕಿ ಕೈಹಿಡಿಯಲಿದ್ದಾರೆ ನಟಿ ಮೀನಾ!
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ಮದುವೆ
ಮರುಕಳಿಸಿದ ಮಿನುಗು ತಾರೆ ಕಲ್ಪನಾ ನೆನಪು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada