»   » ಬೆಂಗಳೂರು ರೆಸಿಡೆನ್ಸಿ ರಸ್ತೆ ಕ್ಲಬ್ ನಲ್ಲಿ ಕ್ಲಾಡಿಯಾ

ಬೆಂಗಳೂರು ರೆಸಿಡೆನ್ಸಿ ರಸ್ತೆ ಕ್ಲಬ್ ನಲ್ಲಿ ಕ್ಲಾಡಿಯಾ

Posted By:
Subscribe to Filmibeat Kannada

ಬಿರು ಬೆಸಿಗೆಗೆ ತತ್ತರಿಸಿದ ಬೆಂಗಳೂರು ಹಾಗೂ ಅದರ ಸುತ್ತಲ್ಲಿನ ಪ್ರದೇಶದ ಜನತೆಯ ಮೇಲೆ ಕಳೆದ ಕೆಲ ದಿನಗಳಿಂದ ವರುಣ ಕೃಪೆ ತೋರಿದ್ದಾನೆ. ಬಿಡದಿ ಸಮೀಪದಲ್ಲಿರುವ ಇನ್ನೋವೇಟಿವ್ ಫಿಲಂಸಿಟಿಯಲ್ಲೂ ಮಳೆಯ ಸಿಂಚನ. ಆನಂದಕುಮಾರ್ ನಿರ್ದೇಶನದ 'ಪ್ರೈವೇಟ್ ನಂ' ಚಿತ್ರದ ಹಾಡೊಂದು ಇನ್ನೋವೇಟಿವ್ ಫಿಲಂಸಿಟಿಯಲ್ಲಿ ಚಿತ್ರೀಕರಣಗೊಂಡಿದೆ.

ರಾಂನಾರಾಯಣ್ ಬರೆದಿರುವ ''ಮಳೆ ಬಂತು ಮಳೆ ಮೆಲ್ಲನೆ...'' ಎಂಬ ಹಾಡಿಗೆ ಲಕ್ಷ್ಮೀಅಯ್ಯರ್ ನೃತ್ಯ ನಿರ್ದೇಶನದಲ್ಲಿ ಪ್ರೀತಂ ಹಾಗೂ ನಿಹಾರಿಕಸಿಂಗ್ ಹೆಜ್ಜೆ ಹಾಕಿದ್ದಾರೆ. ಕೆ.ಕಾಂತರಾಜ್ ಕನ್ನಲ್ ರಚನೆಯ 'ಜಾನಿವಾಕರ್ ಸೈಟ್‌ನಲ್ಲಿ ಬಿಂದಾಸ್ ಮೂಡಿನಲ್ಲಿ ಸೈಲೆನ್ಸು ಬೇಡ ಸೈಲೆನ್ಸು ಬೇಡ'' ಎಂಬ ಚಿತ್ರದ ಮತ್ತೊಂದು ಗೀತೆಯ ಚಿತ್ರೀಕರಣ ರೆಸಿಡಿನ್ಸಿ ರಸ್ತೆಯ ಪ್ರಸಿದ್ದ ಕ್ಲಬ್‌ವೊಂದರಲ್ಲಿ ನಡೆದಿದೆ.
ಇಮ್ರಾನ್ ನೃತ್ಯ ಸಂಯೋಜಿಸಿದ ಈ ಗೀತೆಯ ಚಿತ್ರೀಕರಣದಲ್ಲಿ ಪ್ರೀತಂ, ನಿಹಾರಿಕಸಿಂಗ್, ಕ್ಲಾಡಿಯಾ, ಶರಣ್, ಚಿದಾನಂದ್, ಶ್ರೀಲಕ್ಷ್ಮೀ ಭಾಗವಹಿಸಿದ್ದರು.

ಎ.ಕೆ.ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಣೇಶ್‌ಶೆಟ್ಟಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಗಸ್ತ್ಯ ರವರ ಸಂಗೀತವಿದೆ. ಪ್ರೇಮಾನಂದ್ ಛಾಯಾಗ್ರಹಣ, ವೆಂಕಟೇಶ್‌ಪ್ರಸಾದ್ ಸಂಭಾಷಣೆ, ರಾಜೇಶ್ ಫರ್ನಾಂಡಿಸ್ ತಾಂತ್ರಿಕ ನಿರ್ದೇಶನ, ರಿಷಿಬಾರ್ನೆ ಅವರ ಸಂಕಲನವಿದೆ. ಚಿತ್ರದ ತಾರಾಬಳಗದಲ್ಲಿ ಪ್ರೀತಂ, ನಿಹಾರಿಕಸಿಂಗ್, ಕ್ಲಾಡಿಯಾ, ಶರಣ್, ಚಿದಾನಂದ್, ಶ್ರೀಲಕ್ಷ್ಮೀ, ಬ್ಯಾಂಕ್‌ಜನಾರ್ದನ್, ಅರಿಸಿಕೆರೆರಾಜು, ಕೆಂಪೇಗೌಡ, ರಾಜೇಶ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada