For Quick Alerts
  ALLOW NOTIFICATIONS  
  For Daily Alerts

  14 ದಿನ ಇದ್ದಿದ್ದರೇ ಅಂಬಿ ಮನೆಯಲ್ಲಿ ನಡೆಯುತ್ತಿತ್ತು ಸಂಭ್ರಮ

  |
  Ambareesh: 14 ದಿನ ಇದ್ದಿದ್ದರೇ ಅಂಬಿ ಮನೆಯಲ್ಲಿ ನಡೆಯುತ್ತಿತ್ತು ಸಂಭ್ರಮ | FILMIBEAT KANNADA

  ಒಂದು ಕಡೆ ಪ್ರೀತಿಯ ಅಂಬರೀಶಣ್ಣನನ್ನು ಕಳೆಕೊಂಡಿದ್ದೇವೆ ಎಂಬುದನ್ನು ಅಭಿಮಾನಿಗಳು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ, ಅಂಬರೀಶ್ ಅವರ ಪತ್ನಿ ಸುಮಲತಾ ಹಾಗೂ ಮಗ ಅಭಿಷೇಕ್ ಅವರ ನೋವು ಯಾರಿಗೂ ಬರಬಾರದು.

  ನಟ ಅಂಬರೀಶ್ ನಿಧನದ ವಿಷಯ ಸಿಡಿಲಿನಂತೆ ಬಂದಿದೆ. ಅಂಬರೀಶ್ ಇನ್ನಷ್ಟು ವರ್ಷ ಬದುಕಬೇಕಿತ್ತು, ಇನ್ನಷ್ಟು ಸಿನಿಮಾಗಳನ್ನ ಮಾಡಬೇಕಿತ್ತು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿತ್ತು. ಅವರಿಗೆ ಈ ವಯಸ್ಸಿನಲ್ಲಿ ಈ ರೀತಿ ಆಗುತ್ತದೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ.

  ಅಂಬರೀಶ್-ಸುಮಲತಾ ನಡುವೆ ಪ್ರೀತಿ ಮೂಡಿದ್ಹೇಗೆ.? 'ರೆಬೆಲ್ ಇನ್ ಟ್ರಬಲ್' ಕಥೆ ಇಲ್ಲಿದೆ..

  ಆದರೆ, ವಿಧಿ ಯಾರ ಮಾತು ಕೇಳುವುದಿಲ್ಲ. ಎಲ್ಲರ ಪ್ರೀತಿಯ ಅಂಬರೀಶ್ ಮರೆಯಾಗಿ ಬಿಟ್ಟರು. ಆದರೆ, ಇನ್ನು 14 ದಿನ ಅವರು ಇದ್ದಿದ್ದರೆ, ಅವರ ಮನೆಯಲ್ಲಿ ಸಂಭ್ರಮ ನಡೆಯುತ್ತಿತ್ತು. ಮುಂದೆ ಓದಿ...

  ವಿವಾಹ ವಾರ್ಷಿಕೋತ್ಸವಕ್ಕೆ 14 ದಿನ ಇತ್ತು

  ವಿವಾಹ ವಾರ್ಷಿಕೋತ್ಸವಕ್ಕೆ 14 ದಿನ ಇತ್ತು

  8 ಡಿಸೆಂಬರ್ 1991 ರಂದು ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಮದುವೆ ನೆರವೇರಿತ್ತು. ಆದರೆ, ಅಂಬರೀಶ್ ನವೆಂಬರ್ 24 ರಂದು ಇಹಲೋಕ ತ್ಯಜಿಸಿದರು. 14 ದಿನ ಕಳೆದಿದ್ದರೆ ಅವರ ಮನೆಯಲ್ಲಿ ಸಂಭ್ರಮ ಇರುತ್ತಿತ್ತು. ಆದರೆ, ಮದುವೆ ವಾರ್ಷಿಕೋತ್ಸವ ನಡೆಯುವ ಮುನ್ನ ವಿಧಿಯ ಆಟ ನಡೆದು ಹೋಗಿದೆ.

  ಸಂಭ್ರಮದ ಬದಲು ಸಂಕಟ

  ಸಂಭ್ರಮದ ಬದಲು ಸಂಕಟ

  ಈ ವರ್ಷದ ಡಿಸೆಂಬರ್ 8ಕ್ಕೆ ಅಂಬರೀಶ್ ಅವರ ವಿವಾಹ ವಾರ್ಷಿಕೋತ್ಸವ ಇತ್ತು. ಅಂಬರೀಶ್ ಹಾಗೂ ಸುಮಲತಾ ದಂಪತಿ 27ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಣೆ ಮಾಡುತ್ತಿದ್ದರು. ಆದರೆ, ಈಗ ಸಂಭ್ರಮದ ಬದಲು ಆ ಮನೆಯಲ್ಲಿ ಸಂಕಟ ತುಂಬಿದೆ.

  ಅಂಬರೀಶ್-ಸುಮಲತಾ ದಂಪತಿಗಿಂದು 25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

  ಅದ್ದೂರಿಯಾಗಿತ್ತು ಸಿಲ್ವರ್ ಜುಬಿಲಿ ಸಂಭ್ರಮ

  ಅದ್ದೂರಿಯಾಗಿತ್ತು ಸಿಲ್ವರ್ ಜುಬಿಲಿ ಸಂಭ್ರಮ

  ಎರಡು ವರ್ಷಗಳ ಹಿಂದೆ 25 ವರ್ಷ ತುಂಬಿದ ಸಂಭ್ರಮವನ್ನು ಅಂಬರೀಶ್ ಮತ್ತು ಸುಮಲತಾ ದಂಪತಿ ಅದ್ಧೂರಿಯಾಗಿ ಆಚರಣೆ ಮಾಡಿತ್ತು. ಕನ್ನಡ ನಟರಾದ ಪುನೀತ್ ರಾಜ್ ಕುಮಾರ್, ಉಪೇಂದ್ರ, ದರ್ಶನ್, ಯಶ್ ಸೇರಿದಂತೆ ಅನೇಕರು ಇದರಲ್ಲಿ ಭಾಗಿಯಾಗಿದ್ದರು.

  ಪ್ರೀತಿಸಿ ಮದುವೆ ಆಗಿದ್ದ ಜೋಡಿ

  ಪ್ರೀತಿಸಿ ಮದುವೆ ಆಗಿದ್ದ ಜೋಡಿ

  ಅಂಬಿ - ಸುಮಲತಾ ಇಬ್ಬರೂ ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯಾಗಿ ಬೆಳೆದಿದ್ದರು. ಪರಸ್ಪರ ಪ್ರೀತಿಸಿ ಸಪ್ತಪದಿ ತುಳಿದಿದ್ದರು. ಅಂಬರೀಶ್ ಅವರ ಗುಣ ಸುಮಲತಾ ಅವರಿಗೆ ಬಹಳ ಮೆಚ್ಚುಗೆ ಆಗಿತ್ತು. ಸುಮಲತಾ ಸೌಂದರ್ಯಕ್ಕೆ ಅಂಬಿಯನ್ನು ಪ್ರೇಮಿಯನ್ನಾಗಿ ಮಾಡಿತ್ತು. ಅಂಬಿಯೇ ಮೊದಲು ತಮ್ಮ ಪ್ರೇಮ ನಿವೇದನೆ ಮಾಡಿದ್ದರು.

  ಪಂಚಭೂತಗಳಲ್ಲಿ ಲೀನರಾದ 'ಮಂಡ್ಯದ ಗಂಡು' ಅಮರ್ ನಾಥ್

  ಮೊದಲು ಭೇಟಿ ಆಗಿದ್ದು ಇಲ್ಲಿ

  ಮೊದಲು ಭೇಟಿ ಆಗಿದ್ದು ಇಲ್ಲಿ

  ಸೂಪರ್ ಜೋಡಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ನಟಿ ಸುಮಲತಾ ಅವರು ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿದ್ದು, ವುಡ್ ಲ್ಯಾಂಡ್ ಹೋಟೆಲ್ ನಲ್ಲಿ. ಯಾವುದೋ ಚಿತ್ರದ ಶೂಟಿಂಗ್ ನಡೆಯುತ್ತಿರುವಾಗ ಅಲ್ಲಿಗೆ ಹೋಗಿದ್ದ ಸುಮಲತಾ ಅವರು ಮೊದಲ ಬಾರಿಗೆ ಅಂಬಿ ಅವರನ್ನು ನೋಡಿದ್ದರು. ಒಬ್ಬರನ್ನೊಬ್ಬರು ನೋಡಿದ್ದರೂ ಅಂದು ಮಾತಾಡಿರಲಿಲ್ಲ. ಆದರೆ ಅವರಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿದ್ದು, 'ಆಹುತಿ' ಸಿನಿಮಾ.

  English summary
  14 days remaining for Actor Ambareesh and Sumalatha's wedding anniversary but Ambareesh (66) passed away on November 24th in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X