»   » ಆರ್ಥಿಕ ಬಿಕ್ಕಟ್ಟಿಗೆ ಬಲಿಯಾದರೆ ಇಂದೂಧರ್ ದಂಪತಿ?

ಆರ್ಥಿಕ ಬಿಕ್ಕಟ್ಟಿಗೆ ಬಲಿಯಾದರೆ ಇಂದೂಧರ್ ದಂಪತಿ?

Posted By:
Subscribe to Filmibeat Kannada
ಕನ್ನಡ ಚಿತ್ರರಂಗದ ನಟ ಇಂದೂಧರ್(49) ದಂಪತಿಗಳ ಆತ್ಮಹತ್ಯೆಗೆ ಆರ್ಥಿಕ ಬಿಕ್ಕಟ್ಟು ಕಾರಣ ಎನ್ನಲಾಗಿದೆ. ಬೆಂಗಳೂರು ದಕ್ಷಿಣ ವಲಯ ಪೊಲೀಸ್ ಉಪ ಆಯುಕ್ತ ಕೃಷ್ಣಭಟ್ ಅವರು ಮಾತನಾಡುತ್ತಾ, ಇಂದೂಧರ್ ದಂಪತಿಗಳು ಆತ್ಮಹತ್ಯೆಗೂ ಮುನ್ನ ಮರಣ ಪತ್ರವನ್ನು ಬರೆದಿಟ್ಟಿದ್ದರು ಎಂಬ ವಿವರಗಳನ್ನು ನೀಡಿದ್ದಾರೆ.

ಇಂದೂಧರ್ ದಂಪತಿಗಳು ಬರೆದಿಟ್ಟಿರುವ ಮರಣ ಪತ್ರದಲ್ಲಿ ಜೀವನದಲ್ಲಿ ದೊಡ್ದ ಗುರಿ ಮುಟ್ಟಲಾಗದೆ ಜಿಗುಪ್ಸೆಗೊಂಡಿದ್ದೇವೆ. ಬಹಳಷ್ಟು ನಿರೀಕ್ಷೆಗಳು ಇದ್ದವು. ಆದರೆ ಅವನ್ನು ತಲುಪಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಮರಣಪತ್ರವನ್ನು ಬರೆದಿಟ್ಟಿದ್ದಾರೆ. ಮಧ್ಯಾಹ್ನ 12 ರಿಂದ 2 ಗಂಟೆ ಸಮಯದಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಕೃಷ್ಣಭಟ್ ತಿಳಿಸಿದ್ದಾರೆ.

ಇಂದೂಧರ್ ಸಾಯುವುದಕ್ಕೂ ಮುನ್ನ ಅವರ ಪತ್ನಿ ಹೇಮಾವತಿ ಅವರನ್ನು ಕತ್ತು ಹಿಸುಕಿ ಸಾಯಿಸಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ಕೃಷ್ಣಭಟ್ ವ್ಯಕ್ತಪಡಿಸಿದ್ದಾರೆ. ಇಂದೂಧರ್ ದಂಪತಿಗಳ ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಅವರ ವಿವರಗಳು ಬಂದ ಬಳಿಕವಷ್ಟೆ ಮತ್ತಷ್ಟು ವಿವರಗಳು ಲಭ್ಯವಾಗಲಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada