twitter
    For Quick Alerts
    ALLOW NOTIFICATIONS  
    For Daily Alerts

    ಪ್ರಾಣಿ ದಯಾ ಸಂಘ ಸ್ವಲ್ಪ ದಯೆ ತೋರಬೇಕಾಗಿದೆ

    |

    ಸ್ಯಾಂಡಲ್ ವುಡ್ ಗೆ, ಪ್ರಾಣಿ ದಯಾ ಸಂಘವನ್ನು 'ದಯೆತೋರಿ' ಎಂದು ಬೇಡಿಕೊಳ್ಳುವ ಪ್ರಸಂಗ ಬಂದಿದೆ . ತಪ್ಪಾಗಿ ತಿಳಿಯಬೇಡಿ. ನೇರವಾಗಿ ಅದೇನೂ ಕಿರಿಕ್ ಮಾಡುತ್ತಿಲ್ಲ. ಅಥವಾ ಪ್ರಾಣಿಗಳಿಂದ ಸಿನಿಮಾಗೆ ತೊಂದರೆಯಾಗುತ್ತಿಲ್ಲ. ಬದಲಿಗೆ ಪ್ರಾಣಿದಯಾ ಸಂಘದಿಂದ ತೊಂದರೆ ಆಗುತ್ತಿದೆ. ಅವರೂ ಬೇಕೆಂದೇ ಮಾಡುತ್ತಿಲ್ಲ. ಆದರೂ ತೊಂದರೆ ಆಗುತ್ತಿರುವುದಂತೂ ಸತ್ಯ.

    ಕಾರಣ ಇಷ್ಟೇ. ಪ್ರಾಣಿ ದಯಾ ಸಂಘದಿಂದ ಕ್ಲಿಯರೆನ್ಸ್ ಪಡೆಯಲು ಕನ್ನಡ ಸಿನಿಮಾಗಳಿಗೆ ಸಾಕಷ್ಟು ತಡವಾಗುತ್ತಿದೆ. ಇದರಿಂದ ನಿರ್ಮಾಪಕರಿಗೆ ನಷ್ಟವಾಗುವುದಂತೂ ಗ್ಯಾರಂಟಿ. ಹಾಗಾದರೆ ಪ್ರಾಣಿ ದಯಾ ಸಂಘ ಯಾಕೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡಲು ಲೇಟ್ ಮಾಡುತ್ತಿದೆ ಎಂದರೆ ಅದು ಅದು ಮೀಟಿಂಗ್ ಮಾಡುವುದು ವಾರಕ್ಕೆ ಒಂದೇ ಬಾರಿ.

    ಇಡೀ ಭಾರತದ ಸಿನಿಮಾಗಳು ಕ್ಲಿಯರೆನ್ಸ್ ಗಾಗಿ ಈ ಸಂಘಕ್ಕೆ ಬರುತ್ತವೆ. ಆದರೆ ವಾರಕ್ಕೊಮ್ಮೆ ಸಭೆ ಸೇರುವ ಸಂಘ, ಎಲ್ಲಾ ಸಿನಿಮಾ ನೋಡಿ ಕ್ಲಿಯರೆನ್ಸ್ ಕೊಡುವ ಹೊತ್ತಿಗೆ ಸಾಕಪ್ಪಾ ಸಾಕು ಎನಿಸಿರುತ್ತದೆ. ಇದೀಗ ಅಲ್ಲಿ ಒದ್ದಾಡುತ್ತಿರುವ ಕನ್ನಡ ಸಿನಿಮಾಗಳೆಂದರೆ ಜರಾಸಂಧ ಮತ್ತು ವಿಷ್ಣುವರ್ಧನ. ಪ್ರಾಣಿ ದಯಾ ಸಂಘ ಸ್ವಲ್ಪ ದಯೆ ತೋರಲೇಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

    English summary
    Kannada movies are facing problem in delays. The reason for that is the clearance from the Animal Welfare Board. It is heard that the board meets just once in a week and films all over India are sent to them for clearance.
 
    Monday, November 14, 2011, 16:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X