twitter
    For Quick Alerts
    ALLOW NOTIFICATIONS  
    For Daily Alerts

    ಕಠಾರಿವೀರ, ಗಾಡ್ ಫಾದರ್‌ಗೆ ಫಿಲಂ ಚೇಂಬರ್ ತೀರ್ಪು

    By Rajendra
    |

    ಚಲನಚಿತ್ರ ನಿರ್ಮಾಪಕರರಾದ ಮುನಿರತ್ನ ಹಾಗೂ ಕೆ ಮಂಜು ನಡುವಿನ ವಿವಾದಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಈ ಪರಿಹಾರ ನೀಡಿರುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಅದೇನೆಂದರೆ ಯಾರ ಚಿತ್ರ ಮೊದಲು ಸೆನ್ಸಾರ್ ಸರ್ಟಿಫಿಕೇಟ್ ಪಡೆಯುತ್ತದೋ ಅವರ ಚಿತ್ರವೇ ಮೊದಲು ಬಿಡುಗಡೆಯಾಗಲಿ ಎಂದು ಫಿಲಂ ಚೇಂಬರ್ ತೀರ್ಪು ನೀಡಿದೆ.

    ಮೊದಲು ಸೆನ್ಸಾರ್ ಆದ ಚಿತ್ರ ಮೊದಲು ಬಿಡುಗಡೆಯಾಗಲಿ. ನಂತರ ಸೆನ್ಸಾರ್ ಆದ ಚಿತ್ರ ನಾಲ್ಕು ವಾರಗಳ ಬಳಿಕ ಬಿಡುಗಡೆಯಾಗಲಿ ಎಂದಿದೆ ಫಿಲಂ ಚೇಂಬರ್. ಈ ಮೂಲಕ 'ಕಠಾರಿವೀರ ಸುರಸುಂದರಾಂಗಿ' ಹಾಗೂ 'ಗಾಡ್ ಫಾದರ್' ಚಿತ್ರಗಳ ವಿವಾದ ಸದ್ಯಕ್ಕೆ ತಣ್ಣಗಾಗಿದೆ.

    'ಕಠಾರಿವೀರ' ಚಿತ್ರದ ನಿರ್ಮಾಪಕ ಮುನಿರತ್ನ ಹಾಗೂ 'ಗಾಡ್ ಫಾದರ್' ಚಿತ್ರದ ಕೆ ಮಂಜು ಅವರು ತಮ್ಮ ಚಿತ್ರಗಳನ್ನು ಏ.27ರಂದೇ ಬಿಡುಗಡೆ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಉಪೇಂದ್ರ ಅಭಿನಯದ ಈ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಅತ್ತ ನಿರ್ಮಾಪಕರಿಗೆ ನಷ್ಟ ಇತ್ತ ಪ್ರೇಕ್ಷಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. (ಒನ್‌ಇಂಡಿಯಾ ಕನ್ನಡ)

    English summary
    Katariveera Sura Sundarangi and Godfather movies controversy come to an end. KFCC has given a decision that the producer who gets his film censored earlier will be allowed to to screen his film first and the other film which will be censored later will be released at a later date in a gap of four weeks.
    Saturday, April 14, 2012, 14:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X