»   » ಜಗ್ಗೇಶ್ ಲಿಫ್ಟ್ ಕೊಡ್ಲಾ ಅಂತಿದ್ದಾರೆ; ಹೋಗಿ ನೋಡಿ

ಜಗ್ಗೇಶ್ ಲಿಫ್ಟ್ ಕೊಡ್ಲಾ ಅಂತಿದ್ದಾರೆ; ಹೋಗಿ ನೋಡಿ

Posted By:
Subscribe to Filmibeat Kannada

ಜಗ್ಗೇಶ್ ಹಾಗೂ ಕೋಮಲ್ ಮುಖ್ಯಭೂಮಿಕೆಯಲ್ಲಿರುವ 'ಲಿಫ್ಟ್ ಕೊಡ್ಲಾ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿಕ್ಕಮಗಳೂರಿನ ಸುಂದರ ಪರಿಸರ ಸೇರಿದಂತೆ ರಾಜ್ಯದ ಇತರ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ವಿಭಿನ್ನ ಕಥಾ ಹಂದರವನ್ನು ಹೊಂದಿದೆ. ಅಶೋಕ್‌ಕಶ್ಯಪ್ ರವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಿದ್ದಾರೆ. ಇವರೊಂದಿಗೆ ಕೋಮಲ್ ಕೂಡ ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ನಟ ಶಶಿಕುಮಾರ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ಅವರು ಅಭಿನಯಿಸಿರುವುದು ಈ ಚಿತ್ರದ ವಿಶೇಷ. ಸಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ ಎಂ ಆರ್ ಶಂಕರ್‌ರೆಡ್ಡಿ ನಿರ್ಮಿಸಿದ್ದಾರೆ. ಚಿತ್ರದ ನಾಯಕಿ ಅರ್ಚನಾಗುಪ್ತ.

ಈ ಚಿತ್ರದ ಉಳಿದ ತಾರಾಬಳಗದಲ್ಲಿ ಸುದರ್ಶನ್, ರಾಜುತಾಳಿಕೋಟೆ, ಕಿಲ್ಲರ್‌ವೆಂಕಟೇಶ್, ಕಿಶೋರ್, ಶೋಭ್‌ರಾಜ್, ವಿ.ಮನೋಹರ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್ ಮುಂತಾದವರಿದ್ದಾರೆ. ಅಶೋಕ್‌ಕಶ್ಯಪ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಂನಾರಾಯಣ್ ಸಂಭಾಷಣೆ ಬರೆದಿದ್ದಾರೆ. ವಿ.ಮನೋಹರ್ ಸಂಗೀತ ನೀಡಿದ್ದಾರೆ.

ಸಂಚಾರಿ ತೆರೆಗೆ ಬರುತ್ತಿದೆ
ಈ ವಾರ ಪಯಣ ಖ್ಯಾತಿಯ ಕಿರಣ್ ಗೋವಿ ಅವರ ಸಂಚಾರಿ ಚಿತ್ರವೂ ತೆರೆಕಾಣುತ್ತಿದೆ. ಇದೇ ವಾರ ತೆರೆ ಕಾಣಬೇಕಿದ್ದ ಶಂಭೋಶಂಕರ ಮತ್ತು ಒಂಟಿಮನೆ ಚಿತ್ರಗಳು ಕಾರಣಾಂತರಗಳಿಂದ ಮುಂದೂಡಲ್ಪಟ್ಟಿವೆ. ರಾಜ್, ಬಿಯಾಂಕ ದೇಸಾಯಿ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಅರ್ಜುನ್ ಸಂಗೀತ ನಿರ್ದೇಶಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada