ನೆನಪಿರಲಿ, ಇದೀಗ ಲವ್ಲಿ ಪ್ರೇಮ್ ಬಹಳಷ್ಟು ಬ್ಯುಸಿ

ಸ್ಯಾಂಡಲ್ ವುಡ್ ಗೆ ಹರಿದುಬರುತ್ತಿರುವ ಹೊಸ ನಟರ ಮಧ್ಯೆ ತಾನು ಮಾಜಿ ಆಗಬಹುದೆಂಬ ಭಯ ಕಾಡಿತ್ತೋ ಏನೋ! ಪ್ರೇಮ್ ಅಲರ್ಟ್ ಆಗಿದ್ದಾರೆ. ಲವ್ಲಿ ಸ್ಟಾರ್ ಇಮೇಜಿಗೆ ತಕ್ಕಂತಿದ್ದ ಅವರ ದೇಹವನ್ನು ರಫ್ ಅಂಡ್ ಟಫ್ ಗೂ ಹೊಂದುವಂತೆ ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ. ಇದೀಗ ಪ್ರೇಮ್ ಪೊಲೀಸ್ ಹಾಗೂ ರೌಡಿ ಪಾತ್ರಕ್ಕೂ ಹೊಂದುವಂತಿದ್ದಾರೆ.
ಹಾಗಂತ ಇನ್ನು ಮುಂದೆ ಪ್ರೇಮ್ ಕೇವಲ ಸಾಹಸಪ್ರಧಾನ ಪಾತ್ರಗಳಲ್ಲೇ ಕಾಣಿಸಿಕೊಳ್ಳಲಿದ್ದಾರೆ ಅಂದುಕೊಳ್ಳಬೇಕಾಗಿಲ್ಲ. ಅದಕ್ಕೆ ಸಾಕ್ಷಿಯಾಗಿ 'ಶತ್ರು' ಹಾಗೂ 'ಕೆಟ್ಟವನು' ಚಿತ್ರಗಳ ನಂತರ ಪ್ರೇಮಾ-ರಮ್ಯಾ ಜೋಡಿಯ 'ಚಂದ್ರ' ಚಿತ್ರ ಬರಲಿದೆ. ಈ ಮೊದಲು ದಿನಕರ್ ತೂಗುದೀಪ ನಿರ್ದೇಶನದ 'ಜೊತೆ ಜೊತೆಯಲಿ' ಹಾಗೂ ಸಿಂಗಮಣಿ ನಿರ್ದೇಶನದ 'ಜೊತೆಗಾರ' ಚಿತ್ರಗಳಲ್ಲಿ ಈ ರಮ್ಯಾ-ಪ್ರೇಮ್ ಜೋಡಿ ಪ್ರೇಕ್ಷಕರಿಗೆ ಸಖತ್ ಮೋಡಿ ಮಾಡಿತ್ತು. (ಒನ್ ಇಂಡಿಯಾ ಕನ್ನಡ)
More from Filmibeat
English summary
Lovely Star Prem Kumar is now ready to take challenge of Action Movies. He shaped his body as six packs and he want to take off the Lovely Star Image.


Click it and Unblock the Notifications











